ಯುಎಸ್-ಭಾರತದ ನಡುವಿನ ಸ್ನೇಹ ಹೆಚ್ಚಿಸಲು ಚೆನ್ನೈಗೆ ಭೇಟಿ ನೀಡಿದ ಜೆನ್ನಿಫರ್ ಆರ್ ಲಿಟಲ್‌ಜಾನ್

By Suvarna News  |  First Published Aug 28, 2024, 11:35 AM IST

ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿಸಹಾಯಕ ಕಾರ್ಯದರ್ಶಿ -ಸಾಗರಗಳು, ಅಂತರಾಷ್ಟ್ರೀಯ ಪರಿಸರ, ಮತ್ತು ವೈಜ್ಞಾನಿಕ ವ್ಯವಹಾರ ಜೆನ್ನಿಫರ್ ಆರ್. ಲಿಟಲ್‌ಜಾನ್ ಅವರುಆಗಸ್ಟ್ 22 ಮತ್ತು 23 ರಂದು ಚೆನ್ನೈಗೆ ಭೇಟಿ ನೀಡಿದ್ದಾರೆ.


ಚೆನ್ನೈ (ಆ.28): ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿಸಹಾಯಕ ಕಾರ್ಯದರ್ಶಿ -ಸಾಗರಗಳು, ಅಂತರಾಷ್ಟ್ರೀಯ ಪರಿಸರ, ಮತ್ತು ವೈಜ್ಞಾನಿಕ ವ್ಯವಹಾರ ಜೆನ್ನಿಫರ್ ಆರ್. ಲಿಟಲ್‌ಜಾನ್ ಅವರುಆಗಸ್ಟ್ 22 ಮತ್ತು 23 ರಂದು ಚೆನ್ನೈಗೆ ಭೇಟಿ ನೀಡಿ ರಾಯಭಾರಿಗಳನೀರಿನ ತಜ್ಞರ ಕಾರ್ಯಕ್ರಮದ ಅಂಗವಾಗಿ ನದಿ ಪುನರುಜ್ಜೀವನ ಸೇರಿದಂತೆ, ವಿಜ್ಞಾನ, ಹಸಿರು ತಂತ್ರಜ್ಞಾನ ಮತ್ತು ಹವಾಮಾನ ಸ್ಥಿತಿ ಸ್ಥಾಪಕತ್ವ ವಿಷಯಗಳಲ್ಲಿ ಯು.ಎಸ್-ಭಾರತದ ಸಹಕಾರದ ಕುರಿತುನಾಗರಿಕ ನಾಯಕರು, ವಾಣಿಜ್ಯ-ವ್ಯವಹಾರಗಳು ಮತ್ತು ಶೈಕ್ಷಣಿಕಸಂಸ್ಥೆಗಳೊಂದಿಗೆ ಸಂವಾದ ನಡೆಸಿದರು.

'ಜೀವವೈವಿಧ್ಯವನ್ನು ಸಂರಕ್ಷಿಸುವುದರಿಂದ ಹಿಡಿದು ಹವಾಮಾನ ಸಂಕಷ್ಟವನ್ನು ಎದುರಿಸುವವರೆಗೆ ಯುಎಸ್-ಭಾರತ ವಿಜ್ಞಾನ ಮತ್ತುತಂತ್ರಜ್ಞಾನದಲ್ಲಿ ಸಹಕಾರವು ನಮ್ಮ ಜಗತ್ತಿನ ಅತ್ಯಂತ ದೊಡ್ಡಸವಾಲುಗಳನ್ನು ಪರಿಹರಿಸಲು ಪ್ರಮುಖವಾಗಿದೆ. ಇದು ನಿರ್ಣಾಯಕಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ (iCET) ಯು.ಎಸ್. ಇಂಡಿಯಾ ಉಪಕ್ರಮದ ಅಡಿಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧದಪ್ರಮುಖ ಅಂಶವಾಗಿದೆ. ಚೆನ್ನೈ ಈ ಸಹಯೋಗದ ಶಕ್ತಿಯನ್ನುಪ್ರದರ್ಶಿಸುತ್ತದೆ! ಸೌರ ಮತ್ತು ಹಸಿರು ತಂತ್ರಜ್ಞಾನದ ನೂತನ ಆವಿಷ್ಕಾರಗಳಿಂದ ರಾಯಭಾರಿ ನೀರಿನ ತಜ್ಞರ ಕಾರ್ಯಕ್ರಮ (AWEP) ಚೆನ್ನೈಗೆ ಅದರ ಜಲಮಾರ್ಗಗಳನ್ನು ಹಸಿರುಮಾಡುವ ಗುರಿಯನ್ನು ಸಾಧಿಸಲು ಬೆಂಬಲ ನೀಡುತ್ತದೆ. 

Tap to resize

Latest Videos

ಜೈಲಿನಲ್ಲಿ ಇರುವಾಗಲೇ ದರ್ಶನ್​ ಮೇಲೆ 3 ಹೊಸ ಎಫ್​ಐಆರ್: ವಿಡಿಯೋ ಕಾಲ್​.. ಕಾಫಿ ವಿತ್ ಸಿಗರೇಟ್​. ದಾಸನಿಗೆ ಫುಲ್ ಟೆನ್ಷನ್

ನಾವೆಲ್ಲಾ ಒಟ್ಟಿಗೆ ಸುಸ್ಥಿರ ಭವಿಷ್ಯವನ್ನುನಿರ್ಮಿಸಬಹುದು ಮತ್ತು ಸಮೃದ್ಧಿ ಸಾಧಿಸಬಹುದು,' ಎಂದು ಅಮೇರಿಕದವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿಹೇಳಿದರು.  ಶ್ರೀಪೆರಂಬದೂರಿನಲ್ಲಿರುವ  ಯು.ಎಸ್. ಸೌರ ತಂತ್ರಜ್ಞಾನ ಕಂಪನಿ‌ ಫಸ್ಟ್ಸೋಲಾರ್ ಉತ್ಪಾದನಾ ಘಟಕಕ್ಕೆ ಭೇಟಿನೀಡಿದ  ಆಕ್ಟಿಂಗ್ ಅಸಿಸ್ಟೆಂಟ್ಸೆಕ್ರೆಟರಿ ಲಿಟಲ್‌ಜಾನ್ ಅವರು ಸೌರ ಶಕ್ತಿ ತಂತ್ರಜ್ಞಾನ ಮತ್ತು ಸುಸ್ಥಿರತೆಯಅಭ್ಯಾಸಗಳ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.  ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್ ಹಸಿರುತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳಿಗೆ ಮೀಸಲಾದ ಸ್ಥಳಗಳನ್ನುವೀಕ್ಷಿಸಿದರು. 

ಆಕ್ಟಿಂಗ್ ಅಸಿಸ್ಟೆಂಟ್ ಸೆಕ್ರೆಟರಿ ಲಿಟಲ್‌ಜಾನ್ಅವರು ಹಸಿರು ತಂತ್ರಜ್ಞಾನ-ಚಾಲಿತ ನಾವೀನ್ಯತೆ ಮತ್ತು ಪರಿಸರವ್ಯವಸ್ಥೆಗಳನ್ನು ಬೆಳೆಯುವಂತೆ ಮಾಡಲು ಮತ್ತು ಉತ್ತೇಜಿಸಲು ಯುಎಸ್ಕಾನ್ಸುಲೇಟ್ ಮತ್ತು ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್ ನಡುವಿನಯೋಜಿತ ಪಾಲುದಾರಿಕೆಯ ಮುಂದೆ ಪರಿಸರ ಪರಿಹಾರಗಳಲ್ಲಿನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ಹಸಿರು ತಂತ್ರಜ್ಞಾನದಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು.  ಅಣ್ಣಾ ವಿಶ್ವವಿದ್ಯಾಲಯದಲ್ಲಿ, ಆಕ್ಟಿಂಗ್ ಅಸಿಸ್ಟೆಂಟ್ ಸೆಕ್ರೆಟರಿಲಿಟಲ್‌ಜಾನ್ ಅವರು ಸ್ಥಳೀಯ ಚೇತರಿಸಿಕೊಳ್ಳುವ (ರಿಸಲಿಯನ್ಸ್) ಕಾರ್ಯತಂತ್ರಗಳನ್ನು ಬಲಪಡಿಸಲು ಹವಾಮಾನ ಮಾಡೆಲಿಂಗ್ಬಳಸಿಕೊಳ್ಳುವ ಬಗ್ಗೆ ಅಧ್ಯಾಪಕರು, ಸಂಶೋಧಕರು ಮತ್ತುವಿದ್ವಾಂಸರೊಂದಿಗೆ ಚರ್ಚಿಸಿದರು. 

ಚೆನ್ನೈ ಮೇಯರ್ ಆರ್.ಪ್ರಿಯಾ ಮತ್ತು ಗ್ರೇಟರ್ ಚೆನ್ನೈ ಕಾರ್ಪೊರೇಷನ್ಕಮಿಷನರ್ ಜೆ. ಕುಮಾರಗುರುಬರನ್‌ರೊಂದಿಗಿನ ಸಭೆಯಸಂದರ್ಭದಲ್ಲಿ, ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿಸಹಾಯಕ ಕಾರ್ಯದರ್ಶಿ ಲಿಟಲ್‌ಜಾನ್ ಮತ್ತು ಚೆನ್ನೈ ಕಾನ್ಸುಲ್ಜನರಲ್ ಕ್ರಿಸ್ ಹಾಡ್ಜಸ್ ನದಿಗಳು, ಸರೋವರಗಳು ಮತ್ತು ಜೌಗುಪ್ರದೇಶಗಳು ಸೇರಿದಂತೆ ಸಿಹಿನೀರಿನ ಪರಿಸರ ವ್ಯವಸ್ಥೆಗಳಪ್ರಾಮುಖ್ಯತೆಯನ್ನು ಹವಾಮಾನ ಬದಲಾವಣೆ ನಿಯಂತ್ರಿಸಲು ಮತ್ತುಹೊಂದಿಕೊಳ್ಳುವ ಕುರಿತು ಚರ್ಚಿಸಿದರು. ನಗರ ಯೋಜನೆ ಮತ್ತು ಪರಿಸರಉಸ್ತುವಾರಿಯಲ್ಲಿ ಸುಸ್ಥಿರ ನೀರಿನ ನಿರ್ವಹಣೆಯ ನಿರ್ಣಾಯಕಪಾತ್ರವನ್ನು ಚರ್ಚೆ ಒತ್ತಿಹೇಳಿತು. ಹಂಗಾಮಿ ಸಹಾಯಕ ಕಾರ್ಯದರ್ಶಿಲಿಟಲ್‌ಜಾನ್ ಅವರು Ambassador's Water Experts Program ಮೂಲಕ ಚೆನ್ನೈನೊಂದಿಗೆ ಸಹಕರಿಸಲು ಯುನೈಟೆಡ್ ಸ್ಟೇಟ್ಸ್‌ನಬದ್ಧತೆಯನ್ನು ಒತ್ತಿಹೇಳಿದರು. 

ಈಗ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ರಾಜ್ಯಪಾಲರಿಗೆ ದೂರು: ಆಗಿದ್ದೇನು?

ಇದು ನದಿ ಪುನರುಜ್ಜೀವನಕ್ಕಾಗಿ, ಉತ್ತಮಅಭ್ಯಾಸಗಳನ್ನು ಅಳವಡಿಸಿಕೊಳ್ಳುವಲ್ಲಿ ಸಿಸ್ಟರ್ ಸಿಟಿ ಮತ್ತು ಇತರಪಾಲುದಾರಿಕೆಗಳ ಮೂಲಕ ನಗರವನ್ನು ಬೆಂಬಲಿಸುವ ಗುರಿಯನ್ನುಹೊಂದಿದೆ. ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕಕಾರ್ಯದರ್ಶಿ ಲಿಟಲ್‌ಜಾನ್ ಅವರು ಸುಸ್ಥಿರ ಅಭ್ಯಾಸಗಳನ್ನುಮುಂದುವರಿಸುವಲ್ಲಿ ಸಹಕಾರಿ ಪ್ರಯತ್ನಗಳನ್ನು ಅನ್ವೇಷಿಸಲು ನದಿಪುನರುಜ್ಜೀವನ ಮತ್ತು ಪರಿಸರ ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತುಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್  ವಿನಿಮಯಕಾರ್ಯಕ್ರಮಗಳಲ್ಲಿ ಭಾಗಿಯಾದವರನ್ನು ಭೇಟಿ ಮಾಡಿದರು.

click me!