ನವದೆಹಲಿ(ಮೇ.09) ಪಾಕಿಸ್ತಾನ ತಕ್ಕ ಶಾಸ್ತಿ ಮಾಡಿದರೂ ಬುದ್ಧಿ ಕಲಿತಿಲ್ಲ. ಇಂದು ರಾತ್ರಿ ಮತ್ತೆ ಭಾರತದ ಮೇಲೆ ದಾಳಿ ಮಾಡಿದೆ. ಜಮ್ಮು ಕಾಶ್ಮೀರದಿಂದ ಗುಜರಾತ್ ವರೆಗಿನ ಗಡಿ ಪಾಕಿಸ್ತಾನ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದೆ. ಜಮ್ಮುವಿನ ಸಾಂಬಾ, ಪಠಾಣಕೋಟ್ ಮೇಲೆ ದಾಳಿ ನಡೆಸಿದ ಪಾಕಿಸ್ತಾನ, ಪೋಖ್ರಾನ್ ಮೇಲೂ ಡ್ರೋನ್ ದಾಳಿ ನಡೆಸಿದೆ. ಇನ್ನು ಪಂಜಾಬ್‌ನ ಫೆರೋಜ್‌ಫುರ್ ಮೇಲೂ ಡ್ರೋನ್ ದಾಳಿ ನಡೆಸಿದೆ. ಈ ಫೇರೋಝ್‌ಪುರ್ ಮೇಲೆ ನೆಡೆಸಿದ ದಾಳಿಯಲ್ಲಿ ಮೂವರು ನಾಗರೀಕರು ಗಾಯಗೊಂಡಿದ್ದಾರೆ. ಈ ಪೈಕಿ ಓರ್ವ ಮಹಿಳೆ ತೀವ್ರ ಸುಟ್ಟ ಗಾಯಗಳಿಂದ ಗಂಭೀರವಾಗಿದ್ದಾರೆ.
ಭಾರತೀಯ ಸೇನೆ , ಪಾಕಿಸ್ತಾನದ ಎಲ್ಲಾ ಡ್ರೋನ್ ಹೊಡೆದುರುಳಿಸಿದೆ. ಆದರೆ ಮೂವರು ನಾಗರೀಕರು ಗಾಯಗೊಂಡು ಆಸ್ಪತ್ರೆ ಸೇರಿಸಲಾಗಿದೆ. ಡ್ರೋನ್ ಬಾಂಬ್ ದಾಳಿಯಿಂದ ಮೂವರಿಗೂ ಸುಟ್ಟ ಗಾಯಗಳಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತ ಆಪರೇಶನ್ ಸಿಂದೂರ್ ದಾಳಿ ಬಳಿಕ ಪಾಕಿಸ್ತಾನ ಭಾರತದ ಮೇಲೆ ಸತತ ದಾಳಿ ನಡೆಸುತ್ತಿದೆ. ಮೇ.7, ಮೇ.08 ಹಾಗೂ ಇದೀಗ ಮೇ09 ರಂದೂ ಪಾಕಿಸ್ತಾನ ದಾಳಿ ನಡೆಸಿದೆ.
ಮದರಸಾ ವಿದ್ಯಾರ್ಥಿಗಳನ್ನು ಸೈನಿಕರಾಗಿ ಬಳಕೆ, ಸಂಸತ್ತಿನಲ್ಲಿ ಘೋಷಿಸಿದ ಪಾಕ್ ರಕ್ಷಣಾ ಸಚಿವ
ಶ್ರೀನಗರ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ
ಸಾಂಬಾ ಸೆಕ್ಟರ್ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ಮಾಡಿದೆ. ಆಧರೆ ಭಾರತದ ಏರ್ ಡಿಫೆನ್ಸ್ ಈ ಡ್ರೋನ್ ಹೊಡೆದುರುಳಿಸಿದೆ. ಆದರೆ ಶ್ರೀನಗರ ವಿಮಾನ ನಿಲ್ದಾಣದತ್ತ ಬಂದ ಡ್ರೋನ್ ಭಾರತ ಹೊಡೆದುರುಳಿಸಿದೆ. ಆದರೆ ಈ ಡ್ರೋನ್ ಶ್ರೀಗನರ ವಿಮಾನ ನಿಲ್ದಾಣಕ್ಕೆ ಬಡಿದಿದೆ ಎಂದು ವರದಿಯಾಗಿದೆ. ಜಮ್ಮು , ಸಾಂಬಾ, ಪೋಖ್ರಾನ್, ಫೇರೋಜ್‌ಫುರ್, ಫಲೋಡಿ, ಬಾರ್ಮರ್, ಜೈಸಲ್ಮೇರ್, ಗುರುದಾಸ್‌ಪುರ್, ಅಮೃತಸರ, ಹೋಶಿಯಾರ್‌ಪುರ್ ಸೇರಿದಂತೆ ಹಲೆವೆಡೆ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿದೆ.
ಹರ್ಯಾಣದ ಅಂಬಾಲದಲ್ಲಿ ಬ್ಲಾಕ್ಔಟ್
ಭಾರತದ ಗಡಿಯಲ್ಲಿನ ಉದ್ವಿಘ್ನ ಪರಿಸ್ಥಿತಿ ಹೆಚ್ಚಾಗುತ್ತಿದೆ. ಇದರ ಆತಂಕ ಇತರ ರಾಜ್ಯದ ಮೇಲೂ ಬೀಳುತ್ತಿದೆ. ಇದೀಗ ಹರ್ಯಾಣದಲ್ಲಿ ಪಾಕಿಸ್ತಾನ ಡ್ರೋನ್ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬ್ಲಾಕ್ಔಟ್ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ