
ಮೊನ್ನೆ ಅಹಮದಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಪೌರತ್ವ ಪ್ರಮಾಣಪತ್ರ ವಿತರಣೆ ಮಾಡಲಾಯಿತು. ಸುಮಾರು 158ರಲ್ಲಿ 126 ಜನರಿಗೆ ಪೌರತ್ವ ತಿದ್ದುಪಡಿ (ಸಿಎಎ) ಅಡಿಯಲ್ಲಿ ಹಾಗೂ 32 ಜನರಿಗೆ ಜಿಲ್ಲಾಧಿಕಾರಿ ಕಚೇರಿಯ ನೋಂದಣಿ ಪ್ರಕ್ರಿಯೆ ಮೂಲಕ ಪೌರತ್ವ ನೀಡಲಾಗಿದೆ. ಅದರಲ್ಲಿ ಕರಾಚಿಯಲ್ಲಿ ಕಂಡಿದ್ದ ಆ ಕಷ್ಟ,ಸಾವು, ನೋವುಗಳಿಂದ ಹೊರಬಂದು ಇವತ್ತು ನಿಟ್ಟುಸಿರು ಬಿಟ್ಟಿದ್ದಾರೆ. ಅವರ ಅನುಭವ ಹಾಗೂ ಸಿಕ್ಕ ಸವಲತ್ತುಗಳ ವಿಶ್ಲೇಷಣೆ ಇಲ್ಲಿದೆ.
ಅಷ್ಟೇ ಅಲ್ಲ, ಗುಜರಾತ್, ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ, ಜಮ್ಮು-ಕಾಶ್ಮೀರ ಮತ್ತು ಲಡಾಖ್ಗಳ ಜಿಲ್ಲಾಧಿಕಾರಿಗಳಿಗೆ CAA ಅರ್ಜಿ ನೇರವಾಗಿ ಪ್ರಕ್ರಿಯೆಗೊಳಿಸಿ ಪೌರತ್ವ ನೀಡುವ ಅಧಿಕಾರ ನೀಡಲಾಗಿದೆ ಎಂದು ಗೃಹ ಸಚಿವ ಆದೇಶ ಹೋರಡಿಸಿದೆ. ಅಲ್ಲದೇ ಗುಜರಾತ್ನಲ್ಲಿ ಪೌರತ್ವ ನೀಡುವ ವೇಳೆ ಗುಜರಾತ್ ಉಪ ಮುಖ್ಯಮಂತ್ರಿ ಹರ್ಷ ಸಂಘವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರತ್ವ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದರು.
ಪಾಕಿಸ್ತಾನದ ಕರಾಚಿಯ ಚನೇಸರ್ ಹಾಗೂ ಸಿಂಧ್ ಪ್ರಾಂತ್ಯದಲ್ಲಿ ಮಹಿಳೆಯರ ಅಪಹರಣ, ಅ*ಚಾರ ಮತ್ತು ಬಾಲ್ಯವಿವಾಹದ ಭೀತಿ ಹೆಚ್ಚಾಗಿತ್ತು. ಈ ತಾರತಮ್ಯದಿಂದ ಬಚಾವಾಗಲು ಪ್ರತಿಯೊಬ್ಬರೂ ಹಿಂದೂ ಮತ್ತು ಮುಸ್ಲಿಂ ಶೈಲಿಯ ಎರಡು ಹೆಸರುಗಳನ್ನು ಇಟ್ಟುಕೊಳ್ಳುತ್ತಿದ್ದರು ಎನ್ನಲಾಗಿದೆ. ಹೆಣ್ಣುಮಕ್ಕಳು ತಂದೆ ಅಥವಾ ಸಹೋದರನ ಬೆಂಬಲವಿಲ್ಲದೆ ಹೊರಗೆ ಹೋಗುವಂತಿರಲಿಲ್ಲ. ಪ್ಲಂಬರ್ ಅಥವಾ ಎಲೆಕ್ಟ್ರೀಷಿಯನ್ ಬಂದಾಗ ಮಹಿಳೆಯರನ್ನು ಕೋಣೆಯಲ್ಲಿ ಬಂಧಿಸಿಡಲಾಗುತ್ತಿತ್ತು. ಅಪಹರಣದ ಭಯ ಹಾಗೂ ಶಾಲೆಯಲ್ಲಿ ಆಗುತ್ತಿದ್ದ ಕಿರುಕುಳದಿಂದಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ ಸಿಗುತ್ತಿರಲಿಲ್ಲ.
ಭಾರತಕ್ಕೆ ಬಂದ ಮೇಲೆಯೂ ಆರಂಭದಲ್ಲಿ 'ಪಾಕಿಸ್ತಾನಿ' ಅಥವಾ 'ಭಯೋತ್ಪಾದಕರು' ಎಂದು ಅನುಮಾನಿಸಿ ಜನ ಬಾಡಿಗೆಗೆ ಮನೆ ನೀಡಲು ನಿರಾಕರಿಸುತ್ತಿದ್ದರು. ಕರಾಚಿಯಲ್ಲಿ ಕಿರುಕುಳ ಅನುಭವಿಸಿದ್ದ ಕೇಸರ್ ಎಂಬ ಬಾಲಕಿ, ಭಾರತಕ್ಕೆ ಬಂದಾಗ ವಯಸ್ಸಿನ ವ್ಯತ್ಯಾಸ ಹಾಗೂ ಅಭ್ಯಾಸದ ಕೊರತೆಯಿಂದಾಗಿ 5 ನೇ ತರಗತಿಯ ನಂತರ ಶಿಕ್ಷಣ ತೊರೆಯಬೇಕಾಯಿತು. ಹೀಗೆ ಹಲವರ ಇತಿಹಾಸವನ್ನು ನೋಡೋಣ ಬನ್ನಿ.
2008 ರಲ್ಲಿ ಕರಾಚಿಯಿಂದ ಭಾರತಕ್ಕೆ ಬಂದಿದ್ದರು. 12-13 ನೇ ವಯಸ್ಸಿನಲ್ಲೇ ಬಾಲ್ಯವಿವಾಹವಾಗಿದ್ದ ಈ ಇಬ್ಬರೂ ಸದ್ಯ ಅಹಮದಾಬಾದ್ನಲ್ಲಿ ವಾಸಿಸುತ್ತಿದ್ದಾರೆ. ಕರೋನಾ ಸಮಯದಲ್ಲಿ ಗಂಡನನ್ನು ಕಳೆದುಕೊಂಡ ರಾಜನಂದಿನಿ, ಕರಾಚಿಗೆ ಹಿಂತಿರುಗಲು ನಿರಾಕರಿಸಿ ಹೊಲಿಗೆ ಕೆಲಸ ಮಾಡುತ್ತಾ ಒಬ್ಬಂಟಿಯಾಗಿ ಮೂವರು ಮಕ್ಕಳನ್ನು ಸಾಕಿ ಬೆಳೆಸುತ್ತಿದ್ದಾರೆ.
2. ಪೂನಂ ಗಿಹಾರಾ; ಸಿಂಧ್ ಪ್ರಾಂತ್ಯದ ಹೈದರಾಬಾದ್ನಿಂದ 2013 ರಲ್ಲಿ 'ಥಾರ್ ಎಕ್ಸ್ಪ್ರೆಸ್' ರೈಲಿನ ಮೂಲಕ 70 ಜನರ ಕುಟುಂಬದೊಂದಿಗೆ ಭಾರತಕ್ಕೆ ಬಂದಿದ್ದರು. ಭಾರತ ತಲುಪಿದ ನಂತರ ಜೋದಪುರ, ದೆಹಲಿ ಮೂಲಕ ಅಹಮದಾಬಾದ್ಗೆ ಬಂದು ನೆಲೆಸಿದರು.
3. ಧಾರಾ ಸಿಂಧು (ಕ್ರೀಡಾಪಟು); ಮಾರ್ಚ್ 2013 ರಲ್ಲಿ ಗರ್ಭಿಣಿ ತಾಯಿಯೊಂದಿಗೆ ಭಾರತಕ್ಕೆ ಬಂದಾಗ 7 ನೇ ತಿಂಗಳಿಗೆ ಜನಿಸಿದ ಮಗು (ತೂಕ ಕೇವಲ 830 ಗ್ರಾಂ). ದೃಷ್ಟಿ, ಶ್ರವಣ ಹಾಗೂ ಚಲನವಲನದ ಅಂಗವಿಕಲತೆ ಎದುರಿಸಿದರೂ, 5 ನೇ ವಯಸ್ಸಿನಲ್ಲಿ ಚೇತರಿಸಿಕೊಂಡು ಟೇಬಲ್ ಟೆನ್ನಿಸ್ನಲ್ಲಿ ರಾಜ್ಯಮಟ್ಟ ಹಾಗೂ ಜೂನಿಯರ್ ಫ್ಲೋರ್ ಹಾಕಿಯಲ್ಲಿ ರಾಷ್ಟ್ರಮಟ್ಟದವರೆಗೆ ಬೆಳೆದಿದ್ದಾರೆ.
ಈಗ ಭಾರತದ ಪೌರತ್ವ ದೊರೆತಿರುವುದರಿಂದ ಡೊಮಿಸೈಲ್ ಸರ್ಟಿಫಿಕೇಟ್ ಪಡೆದು ಭಾರತೀಯ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಹಾದಿ ಸುಗಮವಾಗಿದೆ. ಈ ಪೌರತ್ವವು ಕೇವಲ ಒಂದು ಕಾನೂನುಬದ್ಧ ದಾಖಲೆಯಲ್ಲ, ಬದಲಿಗೆ ಕರಾಚಿಯ ಭಯಾನಕ ವಾತಾವರಣದಿಂದ ಮುಕ್ತಿ ಪಡೆದು ಭಾರತದಲ್ಲಿ ಗೌರವ, ಸ್ವಾತಂತ್ರ್ಯ ಮತ್ತು ಉಜ್ವಲ ಭವಿಷ್ಯ ಕಂಡುಕೊಂಡಿರುವ ಕಥೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ