
ನವದೆಹಲಿ: ನವರಾತ್ರಿ ಸಂಭ್ರಮದಲ್ಲಿರುವ ದೇಶದ ಜನರಿಗೆ ಆಘಾತಕಾರಿ ಸುದ್ದಿ ಒಂದನ್ನು ಗುಪ್ತಚರ ಸಂಸ್ಥೆ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ (POK) ಲಾಂಚ್ ಪ್ಯಾಡ್ನಿಂದ ಸುಮಾರು 500ಕ್ಕೂ ಹೆಚ್ಚು ಉಗ್ರರು ಭಾರತದ ಗಡಿ ನುಸುಳಲು ಪ್ಲಾನ್ ಮಾಡಿದೆ ಎಂದು ಎಚ್ಚರಿಕೆ ನೀಡಿದೆ. ಇನ್ನು ಭಯೋತ್ಪಾದಕರು ಕುತಂತ್ರಕ್ಕೆ ‘ಸರ್ದ್-ಎ-ಸಿತಮ್’ ಎಂದು ಹೆಸರು ಇಟ್ಕೊಂಡಿದ್ದಾರೆ.
ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳು ಮತ್ತೆ ಭಾರತಕ್ಕೆ ಉಗ್ರರನ್ನು ನುಸುಳಿಸಲು ಪ್ಲಾನ್ ಮಾಡಿದೆ. ಇನ್ನೇನು ಚಳಿಗಾಲ (Winter season) ಶುರುವಾಗಲಿದೆ. ಚಳಿಗಾಲದ ಸಂದರ್ಭದಲ್ಲಿ ಹಿಮಪಾತಗಳು ಸಂಭ್ರಮಿಸುತ್ತವೆ. ಅದಕ್ಕೂ ಮೊದಲು ಉಗ್ರರನ್ನು ತಳ್ಳಲು ಪಾಕ್ ಪ್ಲಾನ್ ಮಾಡಿದೆ. ಈ ಬಗ್ಗೆ ಭದ್ರತಾ ಪಡೆಗಳು ಮುಂಜಾಗೃತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಕಾಶ್ಮೀರದಿಂದ ಬಂದ ಈ ಸುದ್ದಿ ದೇಶದ ಭದ್ರತಾ ವಿಚಾರದಲ್ಲಿ ತುಂಬಾ ಕಳವಳವನ್ನು ಹುಟ್ಟುಹಾಕಿದೆ. ಉಗ್ರರ ಒಳನುಸುಳುವಿಕೆಯನ್ನು ತಡೆಗಟ್ಟಲು ಭದ್ರತಾ ಪಡೆಗಳು ಗಡಿಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಕಾಯ್ದುಕೊಂಡಿವೆ ಎಂದು ವರದಿಯಾಗಿದೆ.
ಗುಪ್ತಚರ ಮಾಹಿತಿಯ ಪ್ರಕಾರ.. ಭಾರತದ ಗಡಿಯೊಳಗೆ ತಳ್ಳಲು ಗುಂಪುಗಳನ್ನ ರಚಿಸಲಾಗಿದೆ. ಮೂರರಿಂದ ನಾಲ್ಕು ಸದಸ್ಯರ ಸಣ್ಣ ಗುಂಪುಗಳಾಗಿ ಮಾಡಲಾಗಿದೆ. ಉಗ್ರರು ಗುಂಪುಗಳಾಗಿ ವಿಂಗಡಿಸಿರೋದು ಭಾರತೀಯ ಭದ್ರತಾ ಪಡೆಗಳಿಗೆ ಸಂಕಷ್ಟವನ್ನು ತಂದೊಡ್ಡಿದೆ. ಗುಂಪುಗಳ ಮೇಲೆ ಕಣ್ಣಿಡೋದು ಕಷ್ಟಕರವಾಗಿದೆ. ಇನ್ನೊಂದು ವಿಚಾರ ಏನೆಂದರೆ ಕಳೆದ 18 ತಿಂಗಳುಗಳಲ್ಲಿ ಹಲವಾರು ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ.
ಚಳಿಗಾಲದ ಮೊದಲು ಒಳನುಸುಳುವಿಕೆ ಪ್ರಯತ್ನಗಳು ಹೆಚ್ಚಾಗಿ ಹೆಚ್ಚಾಗುತ್ತವೆ. ಭಾರೀ ಹಿಮಪಾತವು ಪರ್ವತ ಪ್ರದೇಶದ ಮೂಲಕ ಸಂಚಾರ ಕಷ್ಟಕರ ಆಗಲಿದೆ. ಕೆಲವು ಮಾರ್ಗಗಳನ್ನು ದಾಟಲು ಕಷ್ಟವಾಗುತ್ತಿದ್ದಂತೆ.. ಒಳನುಸುಳುವಿಕೆಗೆ ಅವಕಾಶಗಳು ಗಮನಾರ್ಹವಾಗಿ ಕುಗ್ಗಬಹುದು. ಇದೇ ಕಾರಣಕ್ಕೆ ಹಿಮಪಾತಗಳು ಸಂಭವಿಸುವ ಮೊದಲೇ ಭಾರತದ ಗಡಿಯೊಳಗೆ ನುಸುಳಿಸಲು ಪ್ಲಾನ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಭಯೋತ್ಪಾದಕರು ಏಕಾಏಕಿ ನುಗ್ಗಲು ಪ್ಲಾನ್ ಮಾಡಿರೋದಲ್ಲ. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಮಾಡಿಕೊಂಡಿದ್ದಾರೆ. ಉಗ್ರರಿಗೆ ಅತ್ಯಾಧುನಿಕ ಚಳಿಗಾಲದ ಗೇರ್ ಮತ್ತು ಡ್ರೋನ್ಗಳನ್ನು ನೀಡಲಾಗಿದೆ. ಎತ್ತರದ ಪರಿಸ್ಥಿತಿಗಳಿಗಾಗಿ ವಿಶೇಷ ಉಪಕರಣಗಳನ್ನು ಒದಗಿಸಲಾಗಿದೆ. ಹಿಮಪಾತ ಮತ್ತು ವಿಪರೀತ ಚಳಿ, ಶೀತಗಳಿಂದ ರಕ್ಷಿಸಿಕೊಳ್ಳಲು ವಿಶೇಷ ವಸ್ತ್ರ ಮತ್ತು ಉಪಕರಣಗಳನ್ನ ನೀಡಲಾಗಿದೆ.
ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನಂತಹ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕರು ಭಾರತಕ್ಕೆ ಬರಲು ಪ್ಲಾನ್ ಮಾಡಿದ್ದಾರೆ. ಈ ಎಲ್ಲಾ ಉಗ್ರರಿಗೆ ಪಾಕಿಸ್ತಾನಿ ಸೇನಾ ಸಿಬ್ಬಂದಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದಾರೆ ಎಂಬ ಮಾತುಗಳು ಇದೆ. ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲ್ಲೇ ಭಾರತದ ಭದ್ರತಾ ಪಡೆಗಳು ಗಡಿಯಲ್ಲ ಹದ್ದಿನ ಕಣ್ಣಿಟ್ಟಿದ್ದಾರೆ. ಅಧಿಕಾರಿಗಳು ಶಂಕಿತ ಲಾಂಚ್ ಪ್ಯಾಡ್ಗಳ ಸುತ್ತಲಿನ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಒಳನುಸುಳುವಿಕೆ ಪ್ರಯತ್ನವನ್ನು ತಡೆಗಟ್ಟಲು ಬಿಗ್ ಪ್ಲಾನ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ