PM Modi vs Pakistan 2024ರ ಚುನಾವಣೆಯಲ್ಲಿ ಮೋದಿ ಸೋಲಬೇಕು, ಭಾರತ ಕುಟುಕಿದ ಬಾಲಿವುಡ್ ಸಾಕಿ ಸಲಹಿದ ಪಾಕ್ ನಟ

By Suvarna News  |  First Published Jan 4, 2022, 8:19 PM IST
  • 2024ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಸೋಲಬೇಕು, ಬಿಜೆಪಿ ಇರಬಾರದು
  • ಶಾರುಖ್ ಖಾನ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡ ಪಾಕ್ ನಟನ ಮಾತು
  • ಮೋದಿ ಮುಗ್ಗರಿಸಿದರೆ ಮಾತ್ರ ಭಾರತ-ಪಾಕಿಸ್ತಾನ ಸಂಭಂಧ ಉತ್ತಮ
     

ಲಾಹೋರ್(ಜ.04):  ಕೇಂದ್ರಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದ ಬಿಜೆಪಿ ಅಧಿಕಾರಕ್ಕೇರಿದ ಬಳಿಕ ಭಾರತದಲ್ಲಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ಅಸಮಾಧಾನಗೊಂಡಿದೆ. 2019ರಲ್ಲಿ ಮೋದಿಯನ್ನು ಸೋಲಿಸಲಬೇಕು ಎಂದು ಪಣತೊಟ್ಟಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ 2024ರ ಚುನಾವಣೆಯಲ್ಲಿ(lok sabha election 2024) ಮೋದಿ ಸೋಲಿಸಲು ಹಲವು ಪಕ್ಷಗಳು ಮೈತ್ರಿ ಮಾಡಿಕೊಂಡು ಮುನ್ನಗ್ಗುತ್ತಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ(Pakistan) ಸೇರಿದಂತೆ ಕೆಲ ಶತ್ರುರಾಷ್ಟ್ರಗಳು ಮೋದಿ ಸೋಲನ್ನು ಬಯಸುತ್ತಿದೆ. ಇದೀಗ ಈ ಮಾತು ಬಹಿರಂಗವಾಗಿದೆ. ಪಾಕಿಸ್ತಾನ ಹಿರಿಯ ನಟ ಇದೀಗ ಬಹಿರಂಗ ಹೇಳಿಕೆ ನೀಡಿದ್ದು, 2024ರಲ್ಲಿ ಮೋದಿ ಸೋಲಬೇಕು ಎಂದಿದ್ದಾರೆ.

ಖಾಸಗಿ ಸಂದರ್ಶನದಲ್ಲಿ ಪಾಕಿಸ್ತಾನ ಹಿರಿಯ ನಟ ಜಾವೇದ್(Javed Shaikh) ಶೇಕ್ ಈ ಹೇಳಿಕೆ ನೀಡಿ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧ ಯಾವಾಗ ಉತ್ತಮವಾಗಲಿದೆ? ಮೋದಿ ಕಾರಣದಿಂದ ಸಂಬಂಧ ಹಳಸಿದೆಯೇ ಎಂದು ಸಂದರ್ಶಕ ನಟ ಜಾವೇದ್ ಬಳಿ ಕೇಳಿದ್ದಾನೆ. ಇದಕ್ಕೆ ಉತ್ತರಿಸಿದ ಜಾವೇದ್, ಹೌದು 100 ರಷ್ಟು ಸತ್ಯ. 2024ರಲ್ಲಿ ಮೋದಿ ಸೋತರೆ ಭಾರತ ಮತ್ತು ಪಾಕಿಸ್ತಾನ(India Pakistan) ಸಂಬಂಧ ಉತ್ತಮವಾಗಲಿದೆ. ಯಾಕೆಂದರೆ ಅಲ್ಲಿನ ಸಿನಿ ರಂಗದ(Film Industry) ಕಲಾವಿದರು ಪಾಕಿಸ್ತಾನ ಕಲಾವಿದರನ್ನು ಹೆಚ್ಚು ಪ್ರೀತಿಸುತ್ತಾರೆ. ಪಾಕಿಸ್ತಾನ ಕಲಾವಿದರ(Pakistan Artist) ಜೊತೆ ಕೆಲಸ ಮಾಡಲು ಬಯಸುತ್ತಾರೆ. ಸದ್ಯ ಪಾಕಿಸ್ತಾನ ಕಲಾವಿದರನ್ನು ಸೇರಿಸಿಕೊಂಡು ಅನುರಾಗ್ ಅವರ ವೆಬ್‌ಸೀರಿಸ್(web series) ಶೂಟಿಂಗ್ ಪಾಕಿಸ್ತಾನದಲ್ಲಿ ನಡೆಯುತ್ತಿದೆ ಎಂದು ಜಾವೇದ್ ಶೇಕ್ ಹೇಳಿದ್ದಾರೆ.

Latest Videos

undefined

 

पाकिस्तान की फ़िल्म इंडस्ट्री के लोग भी चाहते है मोदी हारे 2024 में, सुनिए इनका दर्द 😌

जावेद शेख जो ओम शांति ओम में शाहरुख के पिता के रोल में दिखे थे, भारत और पाकिस्तान के सम्बंध पर पूछे गए सवाल पर मोदी की 2024 में हार की बात कर रहे है pic.twitter.com/ZFuih7DccS

— कालक्रम ❁ (@kaalakram)

Indian Citizenship : ಭಾರತೀಯ ಪೌರತ್ವಕ್ಕೆ ಪಾಕಿಸ್ತಾನಿಯರಿಂದಲೇ ಅತೀ ಹೆಚ್ಚು ಅರ್ಜಿ!

ಈ ಸಂದರ್ಶನದಲ್ಲಿ ಜಾವೇದ್ ಶೇಕ್, ಪಾಕಿಸ್ತಾನದ ಇಡೀ ಚಿತ್ರರಂಗ ಪ್ರಧಾನಿ ನರೇಂದ್ರ ಮೋದಿಯನ್ನು ದ್ವೇಷಿಸುತ್ತಿದೆ ಎಂದಿದ್ದಾರೆ. ಪಾಕಿಸ್ತಾನ ಕಲಾವಿದರು ಬಾಲಿವುಡ್(Bollywood) ಸೇರಿದಂತೆ ಭಾರತದ ಸಿನಿ ರಂಗಕ್ಕೆ ಅಗತ್ಯವಾಗಿದೆ. ಕಾರಣ ಭಾರತೀಯ ಪ್ರೇಕ್ಷಕರು ಪಾಕಿಸ್ತಾನ ಕಲಾವಿದರನ್ನು ಒಪ್ಪಿಕೊಂಡಿದ್ದಾರೆ. ಆದರೆ ಮೋದಿ ಕಾರಣ ಇದೀಗ ಪಾಕಿಸ್ತಾನ ಕಲಾವಿದರಿಗೆ ಅವಕಾಶ ನೀಡಲು ಭಾರತದ ಸಿನಿರಂಗಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೋದಿ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ. 2024ರ ಚುನಾವಣೆಯಲ್ಲಿ ಪ್ರಧಾನಿ ಸೋಲಬೇಕು. ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕು. ಹೀಗಾದಲ್ಲಿ ಭಾರತ ಮತ್ತು ಪಾಕಿಸ್ತಾನ ಸಂಬಂಧ ಚಿಗುರೊಡೆಯಲಿದೆ ಎಂದು ಜಾವೇದ್ ಹೇಳಿದ್ದಾರೆ. 

Pakistan: ಕಾಶ್ಮೀರ ವಿಚಾರವಾಗಿ ಇಮ್ರಾನ್ ಖಾನ್ ಸರ್ಕಾರದ ಬಹುದೊಡ್ಡ ಸುಳ್ಳು ಅನಾವರಣ!

ಪ್ರಧಾನಿ ಮೋದಿ ಸೋಲಿಸಲು ಶತ್ರುರಾಷ್ಟ್ರಗಳು ಕಾಯುತ್ತಿದೆ ಅನ್ನೋದು ಗೌಪ್ಯವಾಗಿ ಉಳಿದಿರಲಿಲ್ಲ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ , ಚೀನಾ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಕೂಡ ಆಗ್ರಹಿಸಿದ್ದಾರೆ. ಇಮ್ರಾನ್ ಖಾನ್ ಪರೋಕ್ಷ ಹೇಳಿಕೆನ್ನೂ ನೀಡಿದ್ದಾರೆ. ಇನ್ನು ಪಾಕಿಸ್ತಾನ ಹಲವು ರಾಜಕೀಯ ನಾಯಕರು ಮೋದಿ ಸೋಲಬೇಕು ಅನ್ನೋದನ್ನು  ಬಹಿರಂಗವಾಗಿ ಹೇಳಿದ್ದರು. ಆದರೆ ಇದೀಗ ಪಾಕಿಸ್ತಾನ ಫಿಲ್ಮ್ ಇಂಡಸ್ಟ್ರಿ ಕೂಡ ಮೋದಿ ಸೋಲಿಗೆ ಕಾಯುತ್ತಿದೆ ಅನ್ನೋ ಬಹಿರಂಗ ಹೇಳಿಕೆ ಬಂದಿದೆ. ಭಾರತದೊಳಗೆ ಮೂಗು ತೂರಿಸಲು ಬಿಡದ ಮೋದಿ ಇದೀಗ ಪಾಕಿಸ್ತಾನಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆ. 

PM Narendra Modi ಒಂದು ಘೋಷಣೆಯಿಂದ ಅರೆಬೆಂದ ಕನಸುಗಳು ನಾಶ: ಕ್ಯಾಪ್ಟನ್‌ ಅಮರಿಂದರ್!

ಬಾಲಿವುಡ್ ಬ್ಲಾಕ್ ಬಸ್ಟರ್ ಓಂ ಶಾತಿ ಓಂ ಚಿತ್ರದಲ್ಲಿ ಪಾಕಿಸ್ತಾನ ಹಿರಿಯ ನಟ ಜಾವೇದ್ ಶೇಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟ ಶಾರುಖ್ ಖಾನ್ ತಂದೆಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಬಾಲಿವುಡ್‌ನ 16ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಾವೇದ್ ಶೇಕ್ ಕಾಣಿಸಿಕೊಂಡಿದ್ದಾರೆ. ಜನ್ನತ್, ನಮಸ್ತೆ ಲಂಡನ್, ಯುವರಾಜ, ಹಮ್ ತುಮ್ ಔರ್ ಘೋಸ್ಟ್ ಸೇರಿದಂತೆ ಪ್ರಮುಖ ಬಾಲಿವುಡ್ ಚಿತ್ರಗಳಲ್ಲಿ ಜಾವೇದ್ ಶೇಕ್ ನಟಿಸಿದ್ದಾರೆ. ಕೊನೆಯದಾಗಿ 2016ರಲ್ಲಿ ಹ್ಯಾಪಿ ಬಾಗ್ ಜಾಯೇಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಪಾಕಿಸ್ತಾನ ಕಲಾವಿದರ ಬಳಕೆಗೆ ಬಾಲಿವುಡ್‌ ಸೇರಿದಂತೆ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಪಾಕಿಸ್ತಾನ ಕಲಾವದಿರ ಬಳಕೆ ಕ್ಷೀಣಿಸತೊಡಗಿತು.

click me!