
ಲಾಹೋರ್(ಫೆ.09) ಭಾರಿ ಕುತೂಹಲ ಕೆರಳಿಸಿದ ಪಾಕಿಸ್ತಾನ ಚುನಾವಣೆ ಫಲಿತಾಂಶ ಹೊರಬೀಳುತ್ತಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿದೆ. ಆದರೆ ಚುನಾವಣೆ ಫಲಿತಾಂಶ ಕೆಲ ಅಚ್ಚರಿ ನೀಡುತ್ತಿದೆ. ಲಾಹೋರ್ ಕ್ಷೇತ್ರದಲ್ಲಿ ನವಾಜ್ ಷರೀಪ್ ಅಭ್ಯರ್ಥಿ ಗೆಲುವು ದಾಖಲಿಸಿದ್ದರೆ, ಮುಂಬೈ ದಾಳಿ ಕೋರ, ಉಗ್ರ ಹಫೀಜ್ ಸಯೀದ್ ಪುತ್ರ ತಲ್ಹಾ ಹಫೀಜ್ ಸೋಲು ಕಂಡಿದ್ದಾರೆ. ಪಾಕಿಸ್ತಾನ ಚುನಾವಣೆಯಲ್ಲಿ ಲಾಹೋರ್ ಹಾಗೂ ಪಂಜಾಬ್ ಪ್ರಮುಖ ಕ್ಷೇತ್ರಗಳಾಗಿದೆ. ಈ ಕ್ಷೇತ್ರದಲ್ಲಿ ನವಾಜ್ ಷರೀಫ್ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ನವಾಜ್ ಷರೀಪ್ ಸಹೋದರ ಶೆಹಬಾಜ್ ಷರೀಪ್ ಲಾಹೋರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ, ಸಂಬಂಧಿ ಹಮ್ಜಾ ಶೆಹಬಾಜ್ ಪಂಜಾಬ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇತ್ತ ಗೆಲುವಿನ ನಿರೀಕ್ಷೆಯಲ್ಲಿದ್ದ ಉಗ್ರ ಹಫೀಜ್ ಸಯೀದ್ ಪುತ್ರ ಹೀನಾಯ ಸೋಲು ಕಂಡಿದ್ದಾರೆ.
ಹಿಂಸೆ ನಡುವೆಯೇ ಪಾಕಿಸ್ತಾನ ಸಂಸತ್ ಚುನಾವಣೆ: ನವಾಜ್ ಮತ್ತು ಇಮ್ರಾನ್ ಪಕ್ಷದ ಮಧ್ಯೆ ಟಫ್ ಪೈಟ್
ಪಾಕಿಸ್ತಾನದಲ್ಲಿ 12ನೇ ಸಾರ್ವತ್ರಿಕ ಚುನಾವಣೆ ಹಿಂಸಾಚಾರದ ನಡುವೆಯೇ ಮುಕ್ತಾಯವಾಗಿತ್ತು. ಬಳಿಕ ಮತ ಎಣಿಕೆ ಆರಂಭವಾಗಿತ್ತು. ನವಾಜ್ ಷರೀಫ್ ಅವರ ಪಿಎಂಎಲ್-ಎನ್ ಪಕ್ಷ ಆರಂಭಿಕ ಮುನ್ನಡೆ ಸಾಧಿಸಿದೆ. ಪಾಕಿಸ್ತಾನದ ಸಂಸತ್ತಿನ 265 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಬಹುಮತಕ್ಕೆ 133 ಸ್ಥಾನಗಳ ಅಗತ್ಯವಿದೆ. ಪಿಎಂಎಲ್-ಎನ್‌ನ ನವಾಜ್ ಷರೀಫ್ ಹಾಗೂ ಪಿಪಿಪಿಯ ಬಿಲಾವಲ್ ಭುಟ್ಟೋ ನಡುವೆ ಪ್ರಧಾನಿ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಆದರೆ ಜೈಲುಪಾಲಾದ ಪಿಟಿಐ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಸ್ಪರ್ಧೆಗೆ ಅನುಮತಿ ಇಲ್ಲ.
ಇಮ್ರಾನ್‌ಗೆ 14 ವರ್ಷ, 3ನೇ ಪತ್ನಿಗೆ 7 ವರ್ಷ ಜೈಲು..! ಶಹಬಾಜ್ ಶರೀಫ್ ದಾಳಕ್ಕೆ ಇಮ್ರಾನ್ ವಿಕೆಟ್ ಆಗಿದ್ದು ಹೇಗೆ..?
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಐವರು ಭದ್ರತಾ ಸಿಬ್ಬಂದಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಜೊತೆಗೆ ಸೇನಾ ಸಿಬ್ಬಂದಿಯ ವಾಹನವನ್ನು ಉಗ್ರರು ಸ್ಫೋಟಿಸಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದ ಮತದಾನಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಚುನಾವಣಾ ಆಯೋಗವು ದೇಶಾದ್ಯಂತ ದೂರಸಂಪರ್ಕ ಸೇವೆಗಳನ್ನು ನಿರ್ಬಂಧಿಸಿತ್ತು ಮತ್ತು ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಗಳನ್ನು ನಿರ್ಬಂಧಿಸಿದೆ. ಆದಾಗ್ಯೂ ಹಿಂಸೆ ನಡೆದಿದೆ.
ಹಲವು ಪ್ರಕರಣಗಳಲ್ಲಿ ದೋಷಿಯಾಗಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅಡಿಯಾಲಾ ಜೈಲಿನಿಂದಲೇ ಅಂಚೆ ಮತದ ಮೂಲಕ ತಮ್ಮ ಹಕ್ಕು ಚಲಾಯಿಸಿದರು. ಆದರೆ ಪತ್ನಿ ಬುಶ್ರಾ ಬೀಬಿಗೆ ಮತ ಚಲಾಯಿಸಲು ಆಗಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ