ರಾಷ್ಟ್ರಪತಿ ಪ್ರಯಾಣಿಸಿದ ಮಾರನೇ ದಿನ ದಿಲ್ಲಿ ಮೆಟ್ರೋ ನಿಲ್ದಾಣದ ಭಾಗ ಕುಸಿದು ದುರಂತ, ಓರ್ವ ಸಾವು

By Kannadaprabha NewsFirst Published Feb 9, 2024, 11:13 AM IST
Highlights

ಈಶಾನ್ಯ ದೆಹಲಿಯ ಪಿಂಕ್‌ ಲೇನ್‌ನಲ್ಲಿರುವ ಗೋಕುಲಪುರಿ ಮೆಟ್ರೋ ನಿಲ್ದಾಣದ ಒಂದು ಭಾಗವೇ ಕುಸಿದು ಬಿದ್ದಿರುವ ದುರಂತ ಸಂಭವಿಸಿದ್ದು, ಘಟನೆಯಲ್ಲಿ 53 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ನವದೆಹಲಿ (ಫೆ.09): ಈಶಾನ್ಯ ದೆಹಲಿಯ ಪಿಂಕ್‌ ಲೇನ್‌ನಲ್ಲಿರುವ ಗೋಕುಲಪುರಿ ಮೆಟ್ರೋ ನಿಲ್ದಾಣದ ಒಂದು ಭಾಗವೇ ಕುಸಿದು ಬಿದ್ದಿರುವ ದುರಂತ ಸಂಭವಿಸಿದ್ದು, ಘಟನೆಯಲ್ಲಿ 53 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗುರುವಾರ ಮುಂಜಾನೆ 11 ಗಂಟೆ ವೇಳೆಗೆ ಮೆಟ್ರೋ ನಿಲ್ದಾಣದ ಕೆಳಗಿರುವ ರಸ್ತೆಯ ಮೇಲೆ ನಿಲ್ದಾಣದ ಭಾಗವೊಂದು ಏಕಾಏಕಿ ಕುಸಿದುಬಿದ್ದಿದೆ.

ಈ ವೇಳೆ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ವಿನೋದ್‌ ಕುಮಾರ್‌ ಎಂಬುವರು ಅವಶೇಷದಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನು ಗಾಯಾಗಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ವೇಳೆ ಎರಡು ಸ್ಕೂಟರ್ ಮತ್ತು ಎರಡು ಬೈಕ್‌ಗಳು ನಜ್ಜುಗುಜ್ಜಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತ- ಮ್ಯಾನ್ಮಾರ್‌ ಗಡಿಯಲ್ಲಿದ್ದ ಮುಕ್ತ ಓಡಾಟ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಸುಮಾರು 40 ರಿಂದ 50 ಮೀಟರ್‌ ಉದ್ದದ ಸ್ಲ್ಯಾಬ್‌ ದಿಢೀರನೇ ಕುಸಿದ ಪರಿಣಾಮ ಘಟನೆ ಸಂಭವಿಸಿದೆ. ಇದೇ ವೇಳೆ ನಿಲ್ದಾಣದ ಇನ್ನೂ ಕೆಲ ಭಾಗಗಳು ರಸ್ತೆಗೆ ಬೀಳದೆ ನೇತಾಡುತ್ತಿವೆ. ಹೀಗಾಗಿ ಸದ್ಯ ಎಲ್ಲ ಅವಶೇಷಗಳನ್ನು ತೆರವು ಮಾಡುವವರೆಗೆ ರಸ್ತೆಯನ್ನು ಬಂದ್‌ ಮಾಡಲಾಗಿದೆ.

ಇಂಡಿಯಾ ಟುಡೇ ಸಮೀಕ್ಷೆ: ಎನ್‌ಡಿಎಗೆ 335, ಇಂಡಿಯಾ ಮೈತ್ರಿಕೂಟಕ್ಕೆ 166 ಸ್ಥಾನ, ಮತ್ತೆ ಬಿಜೆಪಿ ಪ್ರಾಬಲ್ಯ

ರಾಷ್ಟ್ರಪತಿ ಮೊದಲ ಬಾರಿಗೆ ಪ್ರಯಾಣಿಸಿದ ಮರುದಿನವೇ ಘಟನೆ: ಇನ್ನು ಈ ಘಟನೆಯ ಹಿಂದಿನ ದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿಗೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿ ಗಮನ ಸೆಳೆದರು. ಕೇಂದ್ರೀಯ ಸಚಿವಾಲಯದ ಬಳಿ ಅಮೃತ ಉದ್ಯಾನಕ್ಕೆ ತೆರಳುವ ಮೆಟ್ರೋ ಫೀಡರ್‌ ಬಸ್‌ ಉದ್ಘಾಟಿಸಿದ ಬಳಿಕ ನೇರಳೆ ಮಾರ್ಗದ ಮೆಟ್ರೋದಲ್ಲಿ ನೆಹರೂ ಪ್ಲೇಸ್‌ವರೆಗೆ ಸಂಚರಿಸಿ ಮರಳಿ ಕೇಂದ್ರೀಯ ಸಚಿವಾಲಯ ನಿಲ್ದಾಣಕ್ಕೆ ಬಂದರು. ಈ ವೇಳೆ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೆ ರಾಷ್ಟ್ರಪತಿಗಳು, ಮೆಟ್ರೋ ಪ್ರಯಾಣಕ್ಕೆ ಏಕ ದೇಶ ಏಕ ಕಾರ್ಡ್‌ (ಎನ್‌ಸಿಎಂಸಿ) ಕಾರ್ಡ್‌ ಬಳಸಿದ್ದು ಗಮನ ಸೆಳೆಯಿತು.

click me!