
ಇಸ್ಲಾಮಾಬಾದ್(ಆ.23) ಭಾರತ ಹಣ ಖರ್ಚು ಮಾಡಿ ಚಂದ್ರನ ಬಳಿ ಹೋಗಿದೆ. ಆದರೆ ನಾವು ಯಾವುದೇ ಖರ್ಚು ಮಾಡದೇ ಈಗಾಗಲೇ ಚಂದ್ರನ ಮೇಲಿದ್ದೇವೆ. ಇದು ಪಾಕಿಸ್ತಾನ ಯುವಕ ಭಾರತದ ಯಶಸ್ವಿ ಚಂದ್ರಯಾನ ಲ್ಯಾಂಡಿಂಗ್ ಕುರಿತು ನೀಡಿದ ಪ್ರತಿಕ್ರಿಯೆ. ಈ ಮಾತು ಕೇಳಿದ ತಕ್ಷಣ, ಪಾಕಿಸ್ತಾನದ ಅದೇ ಅಹಂಕಾರದ ಹಾಗೂ ಪೊಳ್ಳು ಮಾತುಗಳು ಎಂದು ಷರಾ ಬರೆದರೆ ನಿಮ್ಮ ಊಹೆ ತಪ್ಪು. ಕಾರಣ ಈ ಯುವಕ ಪಾಕಿಸ್ತಾನದ ಅವ್ಯವಸ್ಥೆ, ಪರಿಸ್ಥಿತಿಯನ್ನು ಚಂದ್ರನಿಗೆ ಹೋಲಿಸಿ ಹೇಳಿಕೆ ನೀಡಿದ್ದಾನೆ.
ಭಾರತ ಹಣ ಖರ್ಚು ಮಾಡಿ ಚಂದ್ರನ ಬಳಿ ಹೋಗಿದೆ. ನಾವು ಈಗಾಗಲೇ ಚಂದ್ರನ ಮೇಲಿದ್ದೇವೆ. ಅದು ನಿಮಗೆ ಗೊತ್ತಿಲ್ಲವೇ? ಚಂದ್ರನ ಮೇಲೆ ನೀರು ಇದೆಯಾ? ಚಂದ್ರನ ಮೇಲೆ ಗ್ಯಾಸ್ ಇದೆಯಾ? ಚಂದ್ರನ ಮೇಲೆ ವಿದ್ಯುತ್ ಇದೆಯಾ? ಇದ್ಯಾವುದು ಚಂದ್ರನ ಮೇಲೆ ಇಲ್ಲ, ಪಾಕಿಸ್ತಾನದಲ್ಲೂ ಇಲ್ಲ. ನೀವು ಎಲ್ಲೆ ನೋಡಿ ಕತ್ತಲು ಆವರಿಸಿದೆ ಎಂದು ಪಾಕಿಸ್ತಾನದ ಪರಿಸ್ಥಿತಿಯನ್ನು ಮಾರ್ಮಿಕವಾಗಿ ಹೇಳಿದ್ದಾನೆ.
ಚಂದ್ರಯಾನ ಯಶಸ್ಸಿನಲ್ಲೂ ರಾಜಕೀಯ, ಶುಭಕೋರಿ ಪೇಚಿಗೆ ಸಿಲುಕಿದ ಕಾಂಗ್ರೆಸ್!
ಇನ್ನು ಹಲವು ಪಾಕಿಸ್ತಾನ ನಾಗರೀಕರು ಚಂದ್ರಯಾನ ಕುರಿತು ಮಾತನಾಡಿದ್ದಾರೆ.ಭಾರತದಲ್ಲಿ ಒಬ್ಬ ನಾಯಕ ಆಗಮಿಸಿ ದೇಶವನ್ನು ಮುನ್ನಡೆಸಲು ಆರಂಭಿಸಿದರೆ, ಆತ ದೇಶಕ್ಕಾಗಿ ಯೋಚಿಸುತ್ತಾನೆ. ಆತ ದೇಶದ ಅಭಿವೃದ್ಧಿಗಾಗಿ ಯೋಚಿಸುತ್ತಾನೆ. ಇದರಿಂದ ಭಾರತ ಇಂದು ಚಂದ್ರನ ಅಂಗಳದಲ್ಲಿ ಕಾಲಿಟ್ಟಿದೆ. ಇದು ಅವರ ಪಾಲಿಸಿಯಿಂದ ಸಾಧ್ಯವಾಗಿದೆ. ಆದರೆ ಪಾಕಿಸ್ತಾನದಲ್ಲಿ ದೇಶ ಮುನ್ನಡೆಸುವವರ ಆತನ ಕುಟುಂಬ, ಆತನ ಆಸ್ತಿ, ಸಂಪತ್ತಿನ ಕುರಿತು ಮಾತ್ರ ಯೋಚಿಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಚಂದ್ರ ಲೋಕಕ್ಕೆ ತಲುಪಿದೆ. ಪಾಕಿಸ್ತಾನದ ನಾವು ಈ ರೀತಿ ಆಲೋಚಿಸಲು ಸಾಧ್ಯವಿಲ್ಲ. ಕಾರಣ ಇಲ್ಲಿ ಪ್ರತಿ ದಿನ ನೀರು ಬರುತ್ತೋ ಇಲ್ಲವೋ? ಒಂದು ಹೊತ್ತಿನ ಊಟಕ್ಕೆ ಏನು ಮಾಡುವುದರಲ್ಲೇ ನಮ್ಮ ಸಮಯ ಮುಗಿದಿರುತ್ತದೆ. ಇನ್ನು ಚಂದ್ರನ ಮಾತು ದೂರವಾಗಿದೆ ಎಂದು ಮತ್ತೊರ್ವ ಪಾಕಿಸ್ತಾನ ಹೇಳಿದ್ದಾರೆ.
ಚಂದ್ರಯಾನಕ್ಕೆ 615 ಕೋಟಿ ರೂ, ದುಪ್ಪಟ್ಟು ಖರ್ಚು ಮಾಡಿದ BBMPಗೆ ಇನ್ನು ರಸ್ತೆ ಗುಂಡಿ ಮುಚ್ಚಿಲ್ಲ, ಮೀಮ್ಸ್ ವೈರಲ್!
ಭಾರತ ಪ್ರತಿ ಕ್ಷೇತ್ರದಲ್ಲೂ ಪಾಕಿಸ್ತಾನದಿಂದ ಬಹಳ ದೂರದಲ್ಲಿದೆ. ಪಾಕಿಸ್ತಾನದಲ್ಲಿ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಸಾವಿರ ಸಮಸ್ಯೆಗಳಿವೆ. ಹೀಗಾಗಿ ತಂತ್ರಜ್ಞಾನದ ಕುರಿತು ಯೋಚನೆ ಮಾಡಲು ಸಾಧ್ಯವಿಲ್ಲ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಚಂದ್ರಯಾನ-3 ಯಶಸ್ವಿಯಾಗಿ ವಿಕ್ರಮ್ ಲ್ಯಾಂಡ್ ಆಗುತ್ತಿದ್ದಂತೆ ದೇಶದ ಮೂಲೆ ಮೂಲೆಯಲ್ಲಿ, ಹಳ್ಳಿ ಹಳ್ಳಿಗಳಲ್ಲಿಯೂ ವಿಜಯೋತ್ಸವದ ಸಂಭ್ರಮ ಮುಗಿಲುಮುಟ್ಟಿರುವುದು ಕಂಡು ಬಂದಿತು.ಚಂದ್ರಯಾನದ ಲ್ಯಾಂಡಿಂಗ್ ದೃಶ್ಯಗಳನ್ನು ಜನರು ಲೈವ್ ಆಗಿ ವೀಕ್ಷಿಸಿದರು. ಲ್ಯಾಂಡಿಂಗ್ ಆಗುತ್ತಿದ್ದಂತೆ ಕೇಕೆ ಹಾಕಿ, ಸಂಭ್ರಮಿಸುತ್ತಲೇ ಮನೆಯಿಂದ ಆಚೆ ಬಂದರು. ಲ್ಲಿ ಗಲ್ಲಿಯಲ್ಲಿಯೂ ವಿಜಯೋತ್ಸವ ಸದ್ದು ಮಾಡಲು ಶುರು ಮಾಡಿದರು.ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ಹಂಚಿ, ಕೂಗಾಡಿದರು. ಭಾರತ ಮಾತಾಕಿ ಜೈ ಹೋ ಎನ್ನುವ ಕೂಗಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ