ಹಿಂದುಗಳ ಹತ್ಯೆಗೆ ಪಾಕ್ ISI ಪ್ಲಾನ್, ಹೇಗಿದೆ ಸಲಗ ಕೋಟಿಗೊಬ್ಬ ಕಲೆಕ್ಷನ್; ಅ.17ರ ಟಾಪ್ 10 ಸುದ್ದಿ!

By Suvarna NewsFirst Published Oct 17, 2021, 4:46 PM IST
Highlights

RSS,ಹಿಂದೂಗಳು ಸೇರಿದಂತೆ ಭಾರತೀಯರ ಹತ್ಯೆಗೆ ಪಾಕಿಸ್ತಾನ ISI ಹೊಸ ಉಗ್ರ ಸಂಘಟನೆ ಹುಟ್ಟುಹಾಕಲು ಮುಂದಾಗಿದೆ. ಕೇರಳದಲ್ಲಿ ಸುರಿಯುತ್ತಿರುವ ರಣಮಳೆಗೆ 18ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಡೀಸೆಲ್ ಬೆಲೆ ಶತಕದ ಗಡಿ ದಾಟಿದ್ದು, ಜನರು ಹಿಡಿ ಶಾಪಹಾಕುತ್ತಿದ್ದಾರೆ. ಕ್ರೈಸ್ತ ಸಮುದಾಯದಿಂದ ಮತಾಂತರ ಆರೋಪ, ಕೋಟಿಗೊಬ್ಬ ಹಾಗೂ ಸಲಗ ಕಲೆಕ್ಷನ್ ಎಷ್ಟು ಸೇರಿದಂತೆ ಅಕ್ಟೋಬರ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಆರೆಸ್ಸೆಸ್‌ ಸೇರಿ 200 ಮಂದಿ ಹತ್ಯೆಗೆ ಪಾಕ್‌ನಿಂದ ಹೊಸ ಉಗ್ರ ಸಂಘಟನೆ!

ಕಾಶ್ಮೀರದಲ್ಲಿ(Kashmir) ಉಗ್ರರು, ಭದ್ರತಾ ಸಿಬ್ಬಂದಿ, ಹಿಂದುಗಳು(Hindu) ಮತ್ತು ಸ್ಥಳೀಯೇತರರನ್ನು ಗುರಿಯಾಗಿಸಿ ಹತ್ಯೆ ಆರಂಭಿಸಿರುವ ಹೊತ್ತಿನಲ್ಲೇ, ಭಾರತವನ್ನು ಗುರಿಯಾಗಿಸಿಕೊಂಡೇ ಹೊಸ ಉಗ್ರ ಸಂಘಟನೆಯೊಂದನ್ನು ರಚಿಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ(ISI) ಸಂಚು ರೂಪಿಸಿದ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ಕಲೆ ಹಾಕಿವೆ.

ಕೇರಳ ರಣಮಳೆ, ಭೂಕುಸಿತ: 18 ಬಲಿ, ಅನೇಕ ಮಂದಿ ನಾಪತ್ತೆ!

ಅರಬ್ಬಿ ಸಮುದ್ರದಲ್ಲಿ(Arabian Sea) ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಮತ್ತು ಮಧ್ಯ ಕೇರಳದ(Kerala) ಹಲವು ಜಿಲ್ಲೆಗಳಲ್ಲಿ ಶುಕ್ರವಾರದಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ದಿಢೀರ್‌ ಪ್ರವಾಹ(Flood) ಕಾಣಿಸಿಕೊಂಡಿದೆ. ಇನ್ನು ಕೆಲವೆಡೆ ಭೂಕುಸಿತ ಸಂಭವಿಸಿದ್ದು, ಮಳೆ ಸಂಬಂಧಿ ದುರ್ಘಟನೆಗಳಿಗೆ 18 ಜನರು ಬಲಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.

Quarantineನಲ್ಲಿ ಕೊಹ್ಲಿ, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಪ್ರೀತಿ ತೋರಿದ ಅನುಷ್ಕಾ!

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆಟಗಾರರು, ಸಿಬ್ಬಂದಿಗಳ ಆರೋಗ್ಯದ ದೃಷ್ಟಿಯಿಂದ ಸದ್ಯ ಕ್ರೀಡೆಗಳು ಬಯೋಬಬಲ್‌ (Bio Bubble) ನಲ್ಲಿ ನಡೆಯುತ್ತಿದೆ. 

ಸೈಲೆಂಟಾಗಿರೋ ಗಂಡ ಬೇಕು, ನಂಗೆ ಮಾತಾಡೋಕೆ ಇಷ್ಟ ಎಂದ ಕಂಗನಾ

ಬಾಲಿವುಡ್ ಕ್ವೀನ್ ಕಂಗನಾ ರಣಾವತ್(Kangana Ranaut) ನಟನೆ ಎಲ್ಲರಿಗೂ ಗೊತ್ತು. ಅವರ ಕಾಂಟ್ರವರ್ಸಿಗಳೇನೇ ಇದ್ದರೂ ನಟನೆಗೆ ಮಾತ್ರ ಎಲ್ಲರೂ ಅಭಿಮಾನಿಗಳೇ. ಬಾಲಿವುಡ್‌ನಲ್ಲಿ(Bollywood) ಸಕತ್ ಹೆಸರು ಹಣ ಖ್ಯಾತಿ ಎಲ್ಲವನ್ನೂ ಸಂಪಾದಿಸಿದ ನಟಿಯ ಮದುವೆ ಯಾವಾಗ ?

ಬೆಂಗ್ಳೂರಲ್ಲಿ ಶತಕ ಬಾರಿಸಿದ ಡೀಸೆಲ್‌ ದರ: ಬಿಜೆಪಿ ಸರ್ಕಾರಕ್ಕೆ ಸಾರ್ವಜನಿಕರಿಂದ ಹಿಡಿಶಾಪ

ರಾಜಧಾನಿಯಲ್ಲಿ ಸತತವಾಗಿ ತೈಲ ದರ(Fuel Price) ಏರಿಕೆಯಾಗುತ್ತಿದ್ದು, ಶನಿವಾರ 37 ಪೈಸೆ ಏರಿಕೆಯೊಂದಿಗೆ ಲೀಟರ್‌ ಡೀಸೆಲ್‌(Diesel) ದರ ದಾಖಲೆಯ 100 ರೂ. ತಲುಪಿದೆ. ನಗರದಲ್ಲಿ ಅ.1ರಂದು ಲೀಟರ್‌ ಡೀಸೆಲ್‌ ದರ 95.70 ಇತ್ತು. ಕಳೆದ 15 ದಿನಗಳಲ್ಲಿ ಬರೋಬ್ಬರಿ 4.30 ಏರಿಕೆಯೊಂದಿಗೆ ಶತಕ ತಲುಪಿದೆ. ಬೆಂಗಳೂರಿನ(Bengaluru) ಇತಿಹಾಸದಲ್ಲೇ(History) ಮೊದಲ ಬಾರಿಗೆ ಡೀಸೆಲ್‌ ನೂರು ರು. ತಲುಪಿದೆ.

8 ವರ್ಷ, ದಿನಗೂಲಿ ಕಾರ್ಮಿಕನಿಗೆ ಸಿಗದ ರೇಷನ್ ಕಾರ್ಡ್‌: ದೆಹಲಿ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ!

 ದಿನಗೂಲಿ ಕಾರ್ಮಿಕರ ಪಡಿತರ ಚೀಟಿಯನ್ನು(Ration card) ರದ್ದುಗೊಳಿಸುವ ವಿಚಾರ ದೆಹಲಿಯ ಅರವಿಂದ ಕೇಜ್ರಿವಾಲ್(Arvind Kejriwal) ಸರ್ಕಾರಕ್ಕೆ ದುಬಾರಿಯಾಗಬಹುದು. ಹೌದು ಎಂಟು ವರ್ಷಗಳವರೆಗೆ ದಿನಗೂಲಿ ಕಾರ್ಮಿಕರಿಗೆ ಪಡಿತರ ಚೀಟಿಯನ್ನು ನೀಡುವ ನಿರ್ಧಾರ ತೆಗೆದುಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ ಎಂದು ಹೈಕೋರ್ಟ್(High Court) ದೆಹಲಿ ಸರ್ಕಾರವನ್ನು(Delhi Govt) ಕೇಳಿದೆ

'ಸಲಗ' ಮತ್ತು 'ಕೋಟಿಗೊಬ್ಬ 3' ಕಲೆಕ್ಷನ್‌ ಬಗ್ಗೆ ಇಲ್ಲಿದೆ ಮಾಹಿತಿ

ದಸರಾ ಹಬ್ಬದ ಪ್ರಯುಕ್ತ ಬಿಡುಗಡೆ ಆದ ಎರಡು ಬಿಗ್ ಬಜೆಟ್ ಸಿನಿಮಾ ಸಲಗ ಮತ್ತು ಕೋಟಿಗೊಬ್ಬ 3 ಬಾ  ಕ್ಸ್ ಆಫೀಸ್‌ ಕಲೆಕ್ಷನ್ ಮುಟ್ಟಿದೆ.  ಒಂದು ಮಾಸ್ ಸಿನಿಮಾ ಮತ್ತೊಂದು ಕ್ಲಾಸ್ ಸಿನಿಮಾ, ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮಜವೋ ಮಜಾ.  ಎರಡು ಸಿನಿಮಾಗಳು ವೀಕೆಂಡ್‌ಗೂ ಮೊದಲೇ ಎಷ್ಟು ಕಲೆಕ್ಟ್ ಮಾಡಿದೆ ಗೊತ್ತಾ?

ಹುಬ್ಬಳ್ಳಿ: ಕ್ರೈಸ್ತ ಸಮುದಾಯದದಿಂದ ಮತಾಂತರ, ಚರ್ಚ್‌ಗೆ ನುಗ್ಗಿದ ಹಿಂದೂ ಕಾರ್ಯಕರ್ತರು

ಕ್ರೈಸ್ತ ಸಮುದಾಯದವರಿಂದ(Christian community) ಮತಾಂತರ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು(Hindu Activists) ಚರ್ಚ್‌ಗೆ ನುಗ್ಗಿದ ಘಟನೆ ಭೈರಿದೇವರಕೊಪ್ಪದ 'ಆಲ್ ಅಸೆಂಬ್ಲಿ ಆಫ್ ಗಾಡ್' ಚರ್ಚ್‌ನಲ್ಲಿ ಇಂದು(ಭಾನುವಾರ) ನಡೆದಿದೆ.

click me!