
ನವದೆಹಲಿ(ಅ.17): ದಿನಗೂಲಿ ಕಾರ್ಮಿಕರ ಪಡಿತರ ಚೀಟಿಯನ್ನು(Ration card) ರದ್ದುಗೊಳಿಸುವ ವಿಚಾರ ದೆಹಲಿಯ ಅರವಿಂದ ಕೇಜ್ರಿವಾಲ್(Arvind Kejriwal) ಸರ್ಕಾರಕ್ಕೆ ದುಬಾರಿಯಾಗಬಹುದು. ಹೌದು ಎಂಟು ವರ್ಷಗಳವರೆಗೆ ದಿನಗೂಲಿ ಕಾರ್ಮಿಕರಿಗೆ ಪಡಿತರ ಚೀಟಿಯನ್ನು ನೀಡುವ ನಿರ್ಧಾರ ತೆಗೆದುಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ ಎಂದು ಹೈಕೋರ್ಟ್(High Court) ದೆಹಲಿ ಸರ್ಕಾರವನ್ನು(Delhi Govt) ಕೇಳಿದೆ? ಈ ಸಂಬಂಧ ಕೇಜ್ರಿವಾಲ್ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ನೀಡಿದ್ದು, ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 25 ರಂದು ನಡೆಯಲಿದೆ.
ಆಹಾರದ ಹಕ್ಕಿನಿಂದ ವಂಚಿತ
ವಕೀಲರಾದ ಜಯಶ್ರೀ ಸತ್ಪುತೆ ಮತ್ತು ತ್ರಿಪ್ತಿ ಪೊದ್ದಾರ್ ಅವರ ಮೂಲಕ ಸಲ್ಲಿಸಿದ ಈ ಅರ್ಜಿಯಲ್ಲಿ, ಅರ್ಜಿದಾರರು ಆರೋಗ್ಯದ ಹಕ್ಕನ್ನು ಉಲ್ಲಂಘಿಸಿ, ಅಧಿಕಾರಿಗಳ ನಿಷ್ಕ್ರಿಯತೆ ಮತ್ತು ಅಸಮರ್ಥತೆಯಿಂದಾಗಿ ಕುಟುಂಬಕ್ಕೆ ಸಬ್ಸಿಡಿ ಆಹಾರ ಧಾನ್ಯದ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಪ್ರತಿಪಾದಿಸಲಾಗಿದೆ. ಸಂವಿಧಾನದ(Constitution) 21 ನೇ ಪರಿಚ್ಛೇದದ ಅಡಿಯಲ್ಲಿ ಜೀವಿಸುವ ಹಕ್ಕನ್ನು ಖಾತರಿಪಡಿಸಲಾಗಿದೆ. ಸೆಪ್ಟೆಂಬರ್ 2013 ರಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದರೂ ಪದೇ ಪದೇ ಪ್ರಾತಿನಿಧ್ಯ ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
2013 ರಿಂದ ಅಲೆದಾಡುತ್ತಿರುವ ಮಹಿಳೆ
ಅರ್ಜಿದಾರರು ಮತ್ತು ಆಕೆಯ ಕುಟುಂಬವು ದಕ್ಷಿಣ ದೆಹಲಿಯ(Delhi) ಕೊಳೆಗೇರಿಯಲ್ಲಿ ವಾಸಿಸುತ್ತಿದೆ ಮತ್ತು ಆಕೆಯ ಪತಿಯ ಹೆಸರಿನಲ್ಲಿ 2005 ರಲ್ಲಿ ನೀಡಲಾದ ಪಡಿತರ ಚೀಟಿಯನ್ನು 2013 ರಲ್ಲಿ ಅಧಿಕಾರಿಗಳು ಏಕಪಕ್ಷೀಯವಾಗಿ ರದ್ದುಗೊಳಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಒಂದು ಪಡಿತರ ಚೀಟಿಯ ವಿತರಣೆಗೆ ಎಂಟು ವರ್ಷ
ದಿನಗೂಲಿ ಕಾರ್ಮಿಕರಿಂದ ಪಡಿತರ ಚೀಟಿ ನೀಡುವ ಅರ್ಜಿ ಎಂಟು ವರ್ಷಗಳವರೆಗೆ ಏಕೆ ಬಾಕಿ ಇದೆ ಎಂದು ದೆಹಲಿ ಹೈಕೋರ್ಟ್, ಸರ್ಕಾರವನ್ನು ಕೇಳಿದೆ. ನ್ಯಾಯಾಧೀಶೆ ರೇಖಾ ಪಲ್ಲಿ ಅವರು ಕುಟುಂಬದ ಎಲ್ಲ ಸದಸ್ಯರ ಹೆಸರಿನೊಂದಿಗೆ ಪಡಿತರ ಚೀಟಿ ಕೋರಿ ಕಾರ್ಯಕರ್ತರ ಮನವಿಯ ಮೇಲೆ ನೋಟಿಸ್ ಜಾರಿ ಮಾಡಿದ್ದಾರೆ ಮತ್ತು ದಿಲ್ಲಿ ಸರ್ಕಾರಕ್ಕೆ ನಿರ್ದೇಶನ ಪಡೆಯಲು ವಕೀಲರಿಗೆ ಸಮಯ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ