ಕಾಂಗ್ರೆಸ್‌ಗೆ ಮತ್ತೆ ಟೆನ್ಶನ್: 13 ಬೇಡಿಕೆ, ಸೋನಿಯಾಗೆ ಪತ್ರ ಬರೆದ ಸಿಧು!

By Suvarna NewsFirst Published Oct 17, 2021, 3:16 PM IST
Highlights

* ಪಂಜಾಬ್‌ ಕಾಂಗ್ರೆಸ್‌ನಲ್ಲಿ ಮತ್ತೆ ಗೊಂದಲ

* ಎಲ್ಲವೂ ಸರಿಯಾಯ್ತು ಎನ್ನುವಷ್ಟರಲ್ಲಿ ಸೋನಿಯಾಗೆ ಸಿಧು ಪತ್ರ

* ಆ ಹದಿಮೂರು ಬೇಡಿಕೆಗಳೇನು?

ಚಂಡೀಗಢ(ಅ.17) ಪಂಜಾಬ್(Punjab) ಕಾಂಗ್ರೆಸ್‌ನಲ್ಲಿ(Congress) ಹೊಸ ಸಚಿವರ ನೇಮಕ ಮಾಡಿದ್ದರೂ ರಾಜಕೀಯ ಗೊಂದಲಗಳು ನಿಂತಿಲ್ಲ. ಹೌದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು(Navjot Singh Sidhu) ಅವರು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ(Sonia Gandhi) ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದಾರೆ. ಇದಕ್ಕಾಗಿ, ಅವರು ನಾಲ್ಕು ಪುಟಗಳ ಪತ್ರವನ್ನೂ ಬರೆದಿದ್ದಾರೆ, ಅದರಲ್ಲಿ ಭೇಟಿಯ ಕಾರಣವನ್ನು ನೀಡಲಾಗಿದೆ.

2022 ವಿಧಾನಸಭಾ ಚುನಾವಣೆಗೆ ಸಲಹೆ 

ವಾಸ್ತವವಾಗಿ, ನವಜೋತ್ ಸಿಧು ಪಂಜಾಬ್‌ನಲ್ಲಿ ಚುನಾವಣೆಯ ಕಾರಣದಿಂದ ಸೋನಿಯಾ ಗಾಂಧಿಯನ್ನು ಭೇಟಿ ಮಾಡಲು ಬಯಸುತ್ತಾರೆ. ಅವರು ಬರೆದಿರುವ ಪತ್ರದಲ್ಲಿ, ರಾಜ್ಯದ 13 ಅಂಶಗಳ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಲಾಗಿದೆ. ಇವುಗಳು ಪಂಜಾಬ್‌ ಮಾಡೆಲ್‌ ಆಗಿ ಪ್ರಸ್ತುತಪಡಿಸಲಾಗಿದೆ. ಈ ವಿಷಯಗಳಿಗೆ ಆದ್ಯತೆಯ ಮೇಲೆ ಗಮನ ನೀಡಬೇಕು ಎಂದು ಸಿಧು ಬರೆದಿದ್ದಾರೆ. ಅಲ್ಲದೆ, 2022 ರ ವಿಧಾನಸಭಾ ಚುನಾವಣೆಗೆ ಅವರನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಬೇಕು ಎಂದೂ ಆಗ್ರಹಿಸಿದ್ದಾರೆ.

pic.twitter.com/IvOO72wjxe

— Navjot Singh Sidhu (@sherryontopp)

ಈ 13 ಸಮಸ್ಯೆಗಳನ್ನು ಉಲ್ಲೇಖಿಸಿದ ಸಿಧು

ಸಿಧು ತನ್ನ ಪತ್ರದಲ್ಲಿ 13 ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. ಹೌದು ಇದರಲ್ಲಿ, ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ಮತ್ತು ವಿದ್ಯುತ್ ಕಂಪನಿಗಳ ನಡುವಿನ ಒಪ್ಪಂದಗಳನ್ನು ರದ್ದುಗೊಳಿಸುವುದು, ಡ್ರಗ್ಸ್ ಪ್ರಕರಣಗಳ ತನಿಖೆ, ರೈತರಿಗಾಗಿ ಅನೇಕ ಯೋಜನೆಗಳು, ಪರಿಶಿಷ್ಟ ಜಾತಿ ಮತ್ತು ಹಿಂದುಳಿದವರ ಅಭಿವೃದ್ಧಿ, ಉದ್ಯೋಗ, ಸಿಂಗಲ್ ವಿಂಡೋ ವ್ಯವಸ್ಥೆ, ಮದ್ಯ, ಮರಳು ಗಣಿಗಾರಿಕೆ, ಕೇಬಲ್ ಮತ್ತು ಸಾರಿಗೆ ಜೊತೆಗೆ, ಮಹಿಳೆಯರು ಮತ್ತು ಯುವ ಸಬಲೀಕರಣ ಈ ವಿಚಾರಗಳ ಬಗ್ಗೆ ಉಲ್ಲೇಖಿಸಲಾಗಿದೆ.

ಎರಡು ದಿನಗಳ ಹಿಂದೆ ಹೀಗಂದಿದ್ರು ಸಿಧು

ಎರಡು ದಿನಗಳ ಹಿಂದೆ ನವಜೋತ್ ಸಿಧು ದೆಹಲಿಗೆ ಹೋಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅವರನ್ನು ಭೇಟಿ ಮಾಡಿದರು. ಇದರ ನಂತರ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನನ್ನ ನಾಯಕರು, ಅವರ ನಾಯಕತ್ವದಲ್ಲಿ ನನಗೆ ನಂಬಿಕೆ ಇದೆ ಎಂದು ಹೇಳಿದ್ದರು. ಹೈಕಮಾಂಡ್‌ನ ಪ್ರತಿಯೊಂದು ನಿರ್ಧಾರವೂ ಸ್ವೀಕಾರಾರ್ಹ ಎಂದಿದ್ದ ಸಿಧು ಪಕ್ಷದ ಪಂಜಾಬ್ ಉಸ್ತುವಾರಿ ಹರೀಶ್ ರಾವತ್ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು.

 

click me!