ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್

Published : Dec 08, 2025, 03:37 PM IST
Rajendra Panchal the viral man form pune

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಆಗಿ ಹಂಚಿಕೆಯಾದ ರಾಜೇಂದ್ರ ಪಂಚಾಲ್ ಅವರ ಫೋಟೋದ ಹಿಂದೆ 38 ವರ್ಷಗಳ ನೋವಿನ ಕಥೆಯಿದೆ. ಅದೇನು? ಅವರ ಕತೆ ಏನು ಇಲ್ಲಿದೆ ಡಿಟೇಲ್ ಸ್ಟೋರಿ…

ಈಗ ನಾವು ಹೇಳುತ್ತಿರುವ ಮೇಲೆ ತೋರಿಸಿರುವ ಫೋಟೋವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮೀಮ್ಸ್‌ಗಳ ರೂಪದಲ್ಲಿ ಟ್ರೋಲ್‌ಗಳ ರೂಪದಲ್ಲಿ ನೋಡಿರಬಹುದು. ಹಲವರು ಎಕ್ಸ್ ಖಾತೆಗಳಲ್ಲಿ ಈ ಫೋಟೋದ ದುರ್ಬಳಕೆಯಾಗಿತ್ತು. ಭಾರತೀಯರ ವಿರುದ್ಧ ಜನಾಂಗೀಯ ನಿಂದನೆ ಮಾಡುವುದಕ್ಕಾಗಿ ಈ ಫೋಟೋವನ್ನು ಹಲವು ಎಕ್ಸ್ ಖಾತೆಗಳು ಬಳಸಿಕೊಂಡಿದ್ದವು. ಆದರೆ ಈ ವಕ್ರಮುಖದ ಫೋಟೋದ ಹಿಂದೆ ಒಂದು ಅಗಾಧವಾದ ನೋವಿನ ಕತೆ ಇದೆ ಎಂಬುದು ಬಹುತೇಕ ಯಾರಿಗೂ ತಿಳಿದಿಲ್ಲ. ಈ ಫೋಟೋದಲ್ಲಿ ಕಾಣಿಸುವ ವ್ಯಕ್ತಿಯ ಹೆಸರು ರಾಜೇಂದ್ರ ಪಂಚಾಲ್. ಮಹಾರಾಷ್ಟ್ರದ ಪುಣೆಯವರಾದ ರಾಜೇಂದ್ರ ಪಂಚಾಲ್ ಅವರು ಕೇವಲ ಒಂದು ವರ್ಷದ ಮಗುವಿದ್ದಾಗ ಕೆಳಗೆ ಬಿದ್ದು ಆದ ಎಡವಟ್ಟಿನಿಂದಾಗಿ ಅವರು ಕಳೆದ 38 ವರ್ಷಗಳಿಂದ ಅವರು ಕೇವಲ ದ್ರವಾಹಾರವನ್ನೇ ಸೇವಿಸುತ್ತಿದ್ದರು. ಕೆಳಗೆ ಬಿದ್ದಿದ್ದರಿಂದಾಗಿ ಅವರ ದವಡೆಗೆ ತೀವ್ರ ಹಾನಿಯಾಗಿತ್ತು. ಈ ಗಾಯದಿಂದಾಗಿ ಟೆಂಪೊರೊಮ್ಯಾಂಡಿಬ್ಯುಲರ್ ಜಂಟಿ ಆಂಕೈಲೋಸಿಸ್ ಉಂಟಾಗಿ, ಅವರ ದವಡೆ ತಲೆಬುರುಡೆಗೆ ಬೆಸೆಯುವಂತಾಯ್ತು.

ಇದನ್ನೂ ಓದಿ: ಮೊದಲ ಬಾರಿ ಮಾಡೆಲ್ ಮಗಳನ್ನು ಬಿಲ್‌ಬೋರ್ಡ್ ಮೇಲೆ ನೋಡಿ ಭಾವುಕರಾದ ಪೋಷಕರು

ರಾಜೇಂದ್ರ ಪಂಚಾಲ್ ಅವರ ಪೋಷಕರಿಗೆ ಇದಕ್ಕೆ ಚಿಕಿತ್ಸೆ ನೀಡುವಷ್ಟು ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಪರಿಣಾಮ ಘಟನೆ ಸಂಭವಿಸಿದಾಗಿನಿಂದಲೂ ಮೊನ್ನೆ ಮೊನ್ನೆ ಆಪರೇಷನ್ ಆಗಿ ಸರಿ ಹೋಗುವವರೆಗೂ ಕನಿಷ್ಠ 38 ವರ್ಷಗಳ ಕಾಲ ಕೇವಲ ದ್ರವ ಆಹಾರವನ್ನೇ ಸೇವಿಸಿ ಬದುಕಿದ್ದಾರೆ. ಅಲ್ಲಿಯವರೆಗೂ ಅವರು ಯಾವತ್ತೂ ಗಟ್ಟಿಯಾದ ಆಹಾರವನ್ನೇ ಸೇವಿಸಿಯೇ ಇಲ್ಲ. ಹಾಲು ಸೂಪು ಮುಂತಾದವುಗಳನ್ನು ಸೇವಿಸಿಯೇ ಅವರು ಬದುಕುಳಿದರು. ತಮ್ಮ ದವಡೆಯಿಂದ ಒದಗಿ ಬಂದ ಈ ಸ್ಥಿತಿಯಿಂದಾಗಿ ಅವರು ನೋವು ಅನುಭವಿಸುತ್ತಿದ್ದರು. ಬದುಕುವ ಛಲ ಅವರಲ್ಲಿ ಅದ್ಭುತವಾಗಿತ್ತು. ಹೀಗಾಗಿ ತಮಗೆ ಆಗುತ್ತಿದ್ದ ದೈಹಿಕ ಕಿರಿಕಿರಿ, ಜನರ ಕಾಮೆಂಟ್‌ಗಳು ಹಾಗೂ ಅಪೌಷ್ಠಿಕತೆ ಇದೆಲ್ಲವನ್ನೂ ಮೀರಿ ಅವರು ಒಂದು ಕಡೆ ಸಹಾಯಕನಾಗಿ ಕೆಲಸ ಮಾಡುತ್ತಾ 2017ರವರೆಗೂ ಹೀಗೆ ಗೌರವಯುತವಾಗಿ ಬದುಕುತ್ತಿದ್ದರು.

ಇದನ್ನೂ ಓದಿ: ಅದ್ದೂರಿ ವಿವಾಹ ಸಮಾರಂಭದಲ್ಲಿ ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಸುಂದರಿ

ಆದರೆ 2017ನೇ ಇಸವಿ ಅವರ ಬದುಕಿನಲ್ಲಿ ಮಹತ್ವದ ತಿರುವು ನೀಡಿತ್ತು. ರಾಜೇಂದ್ರ ಅವರ ತಿರುಗಿಕೊಂಡಿದ್ದ ದವಡೆ ಅವರ ಹಲ್ಲನ್ನು ಟಚ್ ಮಾಡುವುದಕ್ಕೆ ಶುರು ಮಾಡಿತ್ತು. ಇದರ ಜೊತೆಗೆ ಅವರ ಒ ನೆಗೆಟಿವ್ ಬ್ಲಡ್ ಗ್ರೂಪ್ ಅವರಿಗೆ ಅನಸ್ಥೇಸಿಯಾ ನೀಡುವಿಕೆಯನ್ನು ತುಂಬಾ ಅಪಾಯಕಾರಿಯಾಗಿ ಮಾಡಿತು. ಆದಾಗ್ಯೂ ರಿಸ್ಕ್ ತೆಗೆದುಕೊಂಡ ವೈದ್ಯರಾದ ಡಾಕ್ಟರ್ ಜೆಬಿ ಗಾರ್ಡೆ ಹಾಗೂ ಡಾಕ್ಟರ್ ಗೌರವ್ ಖುತ್ವಾಡ್ ಅವರು ಬಹಳ ಜಾಗರೂಕರಾಗಿ ಇವರ ಸ್ಟಕ್ ಆಗಿದ್ದ ದವಡೆ ಮೂಳೆಯನ್ನು ಸರಿಪಡಿಸುವುದಕ್ಕೆ ಪ್ರಯತ್ನ ಮಾಡಿದರು. ಅದೂ ಸಂಪೂರ್ಣವಾಗಿ ಉಚಿತವಾಗಿ. ಕೊನೆಗೂ ಅದರಲ್ಲಿ ಯಶಸ್ವಿಯೂ ಆದರೂ ಈ ವೈದ್ಯರು.

ಪರಿಣಾಮ ಕೆಲವೇ ದಿನಗಳಲ್ಲಿ ರಾಜೇಂದ್ರ ಪಂಚಾಲ್ ಅವರು ತಮ್ಮ ಬಾಯನ್ನು ತೆರೆದು ಸ್ಪಷ್ಟವಾಗಿ ಮಾತನಾಡುವುದಕ್ಕೆ ಶುರು ಮಾಡಿದರು. ಇದರ ಜೊತೆಗೆ ಅವರು ಸುಮಾರು 40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅವರು ಗಟ್ಟಿಯಾದ ಆಹಾರದ ರುಚಿ ನೋಡುವುದಕ್ಕೆ ಸಾಧ್ಯವಾಯ್ತು. ಈ ಬದಲಾವಣೆಯಿಂದ ಅವರು ಪಟ್ಟಖುಷಿ ಅಷ್ಟಿಷ್ಟಲ್ಲ. ನೋಡಿದ್ರಲ್ಲ, ನೆಗೆಟೀವ್ ಆಗಿ ವೈರಲ್ ಆದ ಒಂದು ಮೀಮ್ಸ್‌ನಲ್ಲಿ ಹಂಚಿಕೊಳ್ಳಲಾದ ಒಂದು ಅಮಾಯಕನ ಫೋಟೋದ ಹಿಂದೆ ಇಷ್ಟೊಂದು ದೊಡ್ಡ ನೋವಿನ ಕತೆ ಇದೆ. ನಿಜವಾಗಿಯೂ ಧೈರ್ಯ, ಆತ್ಮವಿಶ್ವಾಸ ಸಹಾನುಭೂತಿ ಮತ್ತು ಭರವಸೆಯ ಪ್ರಬಲ ಸಂಕೇತವಾಗಿದ್ದಾರೆ ಈ ರಾಜೇಂದ್ರ ಪಂಚಾಲ್.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಮುಸ್ಲಿಂ ಲೀಗ್‌, ಜಿನ್ನಾಗೆ ಮಣಿದ ನೆಹರು, ವಂದೇ ಮಾತರಂ ಅನ್ನು ಹರಿದು ಹಾಕಿದ್ದು ಕಾಂಗ್ರೆಸ್‌: ಮೋದಿ ವಾಗ್ದಾಳಿ