
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ 26 ಮಂದಿ ಹಿಂದೂಗಳ ನರಮೇಧದ ಸಮಯದಲ್ಲಿ 20 ಮಂದಿಯ ಪ್ಯಾಂಟ್ ಹಾಗೂ ಒಳ ಉಡುಪು ತೆಗೆದು ಖಾಸಗಿ ಅಂಗ ಪರೀಕ್ಷಿಸಿದ ಮೇಲೆ ಅವರು ಮುಸ್ಲಿಮರು ಅಲ್ಲ ಎಂದು ಕನ್ಫರ್ಮ್ ಮಾಡಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ ಎನ್ನುವ ಶಾಕಿಂಗ್ ವಿಷಯವನ್ನು ಸೇನಾ ಸಿಬ್ಬಂದಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಜಮ್ಮು ಮತ್ತು ಕೆ ಆಡಳಿತ ಅಧಿಕಾರಿಗಳ ತಂಡ ಇದೀಗ ರಿವೀಲ್ ಮಾಡಿದೆ. ಈ ಬಗ್ಗೆ ಇದಾಗಲೇ ಮೃತರ ಸಂಬಂಧಿಕರು ಹೇಳಿಕೆ ಕೂಡ ನೀಡಿದ್ದರು. ಆದರೆ, ಸಾಯಿಸುವ ಮುನ್ನ ಧರ್ಮ ಕೇಳಿದ್ದಾರೆ ಎನ್ನುವುದೇ ಸುಳ್ಳು ಎಂದು ಘಂಟಾಘೋಷವಾಗಿ ಒಂದಿಷ್ಟು ಮಂದಿ ಈಗಲೂ ಭಾಷಣ ಮಾಡುತ್ತಿದ್ದಾರೆ! ಇದೀಗ ಖುದ್ದು ತನಿಖಾಧಿಕಾರಿಗಳೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಾವು ಸ್ಥಳಕ್ಕೆ ಧಾವಿಸಿದಾಗ ಒಳ ಉಡುಪುಗಳು ತೆಗೆದಿರುವುದು ಕಾಣಿಸಿತ್ತು. ಕೆಲವು ಕುಟುಂಬಸ್ಥರು ಮೇಲು ಹೊದಿಕೆಯಿಂದ ಶವವನ್ನು ಮುಚ್ಚಿದ್ದರು ಎಂದು ಅವರು ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಸಾಕ್ಷಿ ಪಡೆದುಕೊಳ್ಳಲಾಗಿದ್ದು, ಭಯೋತ್ಪಾದಕರು ಆಧಾರ್ ಕಾರ್ಡ್‌ಗಳು ಅಥವಾ ಚಾಲನಾ ಪರವಾನಗಿಗಳಂತಹ ಗುರುತಿನ ಚೀಟಿಯನ್ನು ಕೇಳುವ ಮೂಲಕ, ಕಲ್ಮಾ (ಮುಸ್ಲಿಂ ಪ್ರಾರ್ಥನೆ) ಪಠಿಸಲು ಸೂಚಿಸಿದ್ದರು. ಅವರ ಧರ್ಮವನ್ನು ಪರೀಕ್ಷಿಸಿದಲು ಸುನ್ನತಿ ಪರಿಶೀಲನೆಗಾಗಿ ಅವರ ಕೆಳಗಿನ ಉಡುಪುಗಳನ್ನು ತೆಗೆದುಹಾಕುವಂತೆ ಒತ್ತಾಯಿಸುವ ಮೂಲಕ ಪ್ರತಿಯೊಬ್ಬ ಪ್ರವಾಸಿಗನ ಧಾರ್ಮಿಕ ಗುರುತನ್ನು ಪರಿಶೀಲಿಸಿದ್ದಾರೆ ಎಂದು ತನಿಖಾಧಿಗಳು ಹೇಳಿದ್ದಾರೆ. ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ತಯಾರಿಸುವ ಪೂರ್ವದಲ್ಲಿ ಈ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಂಕುಮ ಮತ್ತು ಬಳೆಯನ್ನು ನೋಡಿದ ಬಳಿಕ ನಮ್ಮ ಧರ್ಮ ಯಾವುದು ಎಂದು ಕೇಳದೇ ನೇರವಾಗಿ ಪತಿಯನ್ನು ಹತ್ಯೆ ಮಾಡಿದರು ಎಂದು ಆಂಧ್ರಪ್ರದೇಶದ ಮೃತ ಪ್ರವಾಸಿಗರ ಪತ್ನಿ ಕೇಳಿದ್ದರೆ, ಆಧಾರ್ ಕಾರ್ಡ್ ನೋಡಿ ತಾವು ಮುಸ್ಲಿಂ ಅಲ್ಲ ಎಂದು ತಿಳಿದ ಮೇಲೆ ಹತ್ಯೆ ಮಾಡಿರುವುದಾಗಿ ಇನ್ನೋರ್ವರು ಕೂಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
'ನಾವು ಪಹಲ್ಗಾಮ್ ಹೋಗಿದ್ವಿ. ಅಲ್ಲಿ ಕುದುರೆ ಮೇಲೆ ಹೋಗಬೇಕಿತ್ತು. ಹೋಗುವಷ್ಟರಲ್ಲಿಯೇ ಭಯೋತ್ಪಾದಕರು ಅಲ್ಲಿಗೆ ಬಂದರು. ನಾವು ಅನೇಕ ಮಂದಿ ಇದ್ವಿ. ಉಗ್ರರು ಅಲ್ಲಿಗೆ ಬಂದವರೇ ಹಿಂದೂ ಮತ್ತು ಮುಸ್ಲಿಮರು ಬೇರೆ ಬೇರೆ ನಿಲ್ಲಿ ಎಂದರು. ಮುಸ್ಲಿಮರ ಕಡೆ ನಿಂತವರಿಗೆ ಕಲ್ಮಾ ಹೇಳುವಂತೆ ಹೇಳಿದರು. ನಂತರ ಹಿಂದೂಗಳು ಇದ್ದ ಕಡೆಗೆ ಗುಂಡಿನ ದಾಳಿ ನಡೆಸಿದರು. ನನ್ನ ಅಪ್ಪನೂ ಗುಂಡಿನ ದಾಳಿಗೆ ಬಲಿಯಾದರು. ಅವರು ನನ್ನ ಮತ್ತು ಅಮ್ಮನನ್ನು ಬೇರೆ ಕಡೆಗೆ ಕಳುಹಿಸಿದರು. ಅಷ್ಟರಲ್ಲಿ ನನ್ನ ಅಪ್ಪ ಸತ್ತು ಹೋಗಿದ್ದರು ಎಂದು ಪ್ರವಾಸಿಗರೊಬ್ಬರ ಮಗ, ಬಾಲಕ ಕೂಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ.
ಇದೇ ವೇಳೆ, ಯುವತಿಯೊಬ್ಬರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಆಕೆಯ ಪ್ರಕಾರ, ಭಾರತದಲ್ಲಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆಯಂತೆ. ನಾನು ಕೂಡ ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿಯೇ ಇದ್ದೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಉಗ್ರರು ಸಾಯಿಸುವ ಮುನ್ನ ನೀನು ಹಿಂದೂನೋ, ಮುಸ್ಲಿಮೋ ಎಂದು ಕೇಳಿಯೇ ಇಲ್ಲ. ಎಲ್ಲವೂ ಸುಳ್ಳು ಸುದ್ದಿ. ಇಲ್ಲಿರುವ ಮುಸ್ಲಿಮರು ಎಲ್ಲರಿಗೂ ಸಹಾಯ ಮಾಡಿದ್ದಾರೆ. ವಿನಾ ಕಾರಣ ಸುಳ್ಳು ಸುದ್ದಿ ಹರಡಲಾಗುತ್ತಿದೆ. ನನ್ನ ಡ್ರೈವರ್ ಕೂಡ ಮುಸ್ಲಿಂ. ನನ್ನ ಜೀವವನ್ನಾದರೂ ಬೇಕಾದರೆ ಕೊಡುತ್ತೇನೆ, ಹಿಂದೂಗಳಿಗೆ ಏನೂ ಮಾಡಲು ಬಿಡುವುದಿಲ್ಲ ಎಂದರು. ಅಷ್ಟು ಒಳ್ಳೆಯವರು ಮುಸ್ಲಿಂ ಸಮುದಾಯವರು. ಆದರೆ ಹಿಂದೂ-ಮುಸ್ಲಿಂ ಎಂದು ಕೇಳುವ ಮೂಲಕ ಉಗ್ರರು ಸಾಯಿಸಿದ್ದಾರೆ ಎನ್ನುವ ಅಪಪ್ರಚಾರ ಮಾಡಲಾಗುತ್ತಿದೆ ಎಂದಿದ್ದರಳು ಈಕೆ. ಈಕೆಯ ಹಿನ್ನೆಲೆ ಹುಡುಕಿದಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಇರುವ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ