ನವದೆಹಲಿ(ಸೆ.18): ಅಂದಾಜು 1 ಲಕ್ಷ ಕೋಟಿ ರು.ಮೌಲ್ಯದ ಆಸ್ತಿ ಹೊಂದಿರುವ ಭಾರತದ ಅತಿ ಶ್ರೀಮಂತ ದೇಗುಲ ಎಂಬ ಹಿರಿಮೆ ಹೊಂದಿರುವ ತಿರುವನಂತಪುರದ ವಿಶ್ವಪ್ರಸಿದ್ಧ ಅನಂತಪದ್ಮನಾಭಸ್ವಾಮಿ ದೇಗುಲಕ್ಕೆ ಇದೀಗ ಆರ್ಥಿಕ ಸಂಕಷ್ಟಎದುರಾಗಿದೆ. ದೇಗುಲಕ್ಕೆ ಬರುತ್ತಿರುವ ಕಾಣಿಕೆಯಿಂದ ಖರ್ಚು ನಿಭಾಯಿಸಲು ಆಗುತ್ತಿಲ್ಲ ಎಂದು ದೇಗುಲದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಕೇರಳದಲ್ಲಿ ಎಲ್ಲ ದೇವಾಲಯಗಳು ಈಗ ಕೊರೋನಾ ಕಾರಣ ಬಂದ್ ಆಗಿವೆ. ಈ ಕಾರಣದಿಂದಲೂ ಆರ್ಥಿಕ ಸಂಕಷ್ಟವಾಗಿದೆ ಎಂದು ದೇಗುಲದ ವಕೀಲ ಆರ್. ಬಸಂತ್ ನ್ಯಾ. ಉದಯ್ ಲಲಿತ್ ನೃತೃತ್ವದ ಪೀಠದ ಮುಂದೆ ತಿಳಿಸಿದ್ದಾರೆ.
undefined
ಅನಂತ ಪದ್ಮನಾಭ ಸ್ವಾಮಿ ರಹಸ್ಯ ಸಂಪತ್ತು ಪ್ರದರ್ಶನ
ದೇಗುಲದ ಮಾಸಿಕ ಖರ್ಚು 1.25 ಕೋಟಿ ರು. ಇದೆ. ಆದರೆ ಮಾಸಿಕ 60-70 ಲಕ್ಷ ಮಾತ್ರ ಕಾಣಿಕೆಯ ಆದಾಯ ಬರುತ್ತಿದೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ನಾವು ಕೇವಲ ಆಡಳಿತದ ಹೊಣೆ ಹೊತ್ತಿದ್ದೇವೆ. ಇತರೆ ಎಲ್ಲಾ ಹೊಣೆ ದೇಗುಲ ಟ್ರಸ್ಟ್‌ಗೆ ಸೇರಿದ್ದು. 2013ರ ಆಡಿಟ್ ವರದಿ ಅನ್ವಯ ದೇಗುಲ ಟ್ರಸ್ಟ್ ಬಳಿ 2.87 ಕೋಟಿ ನಗದು ಮತ್ತು 1.95 ಕೋಟಿ ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ.
ಅನಂತ ಪದ್ಮನಾಭ ದೇಗುಲ ಯಾರ ವಶ? ಸುಪ್ರೀಂನಿಂದ ಮಹತ್ತರ ತೀರ್ಪು
ಹೀಗಾಗಿ ಖರ್ಚು ನಿಭಾಯಿಸಲು ಕೋರ್ಟ್ ನಿರ್ದೇಶನ ಬೇಕು. ಟ್ರಸ್ಟ್ ಕೂಡ ದೇಗುಲಕ್ಕೆ ಸಹಾಯ ಮಾಡಬೇಕು’ ಎಂದು ಕೇಳಿದ್ದಾರೆ. ವಾದ ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್ 25 ವರ್ಷ ಲೆಕ್ಕಪರಿಶೋಧನೆಯಿಂದ ವಿನಾಯಿತಿ ಕೋರಿರುವ ಟ್ರಸ್ಟ್‌ನ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದೆ.