
ನವದೆಹಲಿ(ಸೆ.17): ಪ್ರಧಾನಿ ನರೇಂದ್ರ ಮೋದಿ ಇಂದು 71ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದೇಶದಲ್ಲಿಂದು ಮೋದಿ ಹುಟ್ಟುಹಬ್ಬದ ಸಡಗರ ಮನೆ ಮಾಡಿತ್ತು. ರಾಜಕೀಯ ಗಣ್ಯರು, ಕ್ರೀಡಾಪಟುಗಳು, ಸೆಲೆಬ್ರೆಟಿಗಳು ಸೇರಿದಂತೆ ದೇಶದ ನಾಗರೀಕರು ಪ್ರಧಾನಿ ಮೋದಿಗೆ ಶುಭಕೋರಿದ್ದಾರೆ. ಇದೇ ವೇಳೆ ಮೆಘಾ ಲಸಿಕಾ ಅಭಿಯಾನವನ್ನು ನಡೆಸಲಾಗಿತ್ತು. ಇದೀಗ ಮೋದಿ ಹುಟ್ಟು ಹಬ್ಬಕ್ಕೆ ಶುಭಕೋರಿದ ಮಂದಿಗೆ ಧನ್ಯವಾದ ಹೇಳಿದ್ದಾರೆ.
ಮೆಘಾ ವ್ಯಾಕ್ಸಿನೇಶನ್: ಒಂದೇ ದಿನ 2 ಕೋಟಿ ಲಸಿಕೆ ಡೋಸ್ ಮೂಲಕ ಯೂರೋಪ್ ಹಿಂದಿಕ್ಕಿದ ಭಾರತ!
ಎಲ್ಲರ ಶುಭಾಶಯನ್ನು ನೋಡಿ ನನ್ನ ಸಂತಸ ವಿವರಿಸಲು ಪದಗಳು ಸಾಲುತ್ತಿಲ್ಲ. ನನ್ನನ್ನು ಹಾರೈಸಿದ, ಶುಭಕೋರಿದ ಪ್ರತಿಯೊಬ್ಬ ವ್ಯಕ್ತಿಗೂ ನನ್ನ ಹೃದಯಾಳದಿಂದ ಕೃತಜ್ಞತೆ ಸಲ್ಲಿಸಲು ಬಯಸುತ್ತಿದ್ದೇನೆ. ನಿಮ್ಮ ಶುಭಾಶ, ಪ್ರೀತಿ ರಾಷ್ಟ್ರಕ್ಕಾಗಿ ಶ್ರಮಿಸಲು ನನಗೆ ಮತ್ತಷ್ಟು ಪ್ರೇರಣೆ, ಶಕ್ತಿ ನೀಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮೋದಿ ಹುಟ್ಟುಹಬ್ಬದ ಕಾರಣ ಇಂದು ಕೇಂದ್ರ ಆರೋಗ್ಯ ಇಲಾಖೆ ಮೆಘಾ ವ್ಯಾಕ್ಸಿನೇಶ್ ಡ್ರೈವ್‌ಗೆ ಚಾಲನೆ ನೀಡಲಾಗಿತ್ತು. ಈ ಮೂಲಕ ಒಂದೇ ದಿನ ಬರೋಬ್ಬರಿ 2 ಕೋಟಿ ಡೋಸ್ ನೀಡುವ ಮೂಲಕ ದಾಖಲೆ ಬರೆದಿದೆ. ಈ ಸಾಧನೆಗೆ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಲಸಿಕೆ ಡೋಸ್‌ಗಳ ಸಂಖ್ಯೆ ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತಂದಿದೆ. ಲಸಿಕೆ ಅಭಿಯಾನ ಯಶಸ್ವಿಯಾಗಿ ಶ್ರಮಿಸಿದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಆಡಳಿತಗಾರರು, ದಾದಿಯರು ಹಾಗೂ ಎಲ್ಲಾ ಫ್ರಂಟ್‌ಲೈನ್ ವರ್ಕಸ್ ಅಭಿನಂದನೆ, ಕೋವಿಡ್ ವಿರುದ್ಧ ಹೋರಾಡಲು ನಾವು ಲಸಿಕೆ ಮುಂದುವರಿಸೋಣ ಎಂದು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ ಮಾಧ್ಯಮಕ್ಕೂ ಮೋದಿ ಧನ್ಯವಾದ ಹೇಳಿದ್ದಾರೆ. ಹುಟ್ಟು ಹಬ್ಬದ ಪ್ರಯುಕ್ತ ಹಳೆ ನೆನಪುಗಳನ್ನು ಕಟ್ಟಿಕೊಟ್ಟ, ರಾಜಕೀಯ ಜೀವನವನ್ನು ಮೆಲುಕ ಹಾಕಿದ ಮಾಧ್ಯಮಕ್ಕೂ ಮೋದಿ ಧನ್ಯವಾದ ಹೇಳಿದ್ದಾರೆ.
ಶ್ರೀಲಂಕ, ನೇಪಾಳ ಸೇರಿದಂತೆ ಹುಟ್ಟು ಹಬ್ಬಕ್ಕೆ ಶುಭಕೋರಿದ ವಿಶ್ವದ ನಾಯಕರಿಗೆ ಮೋದಿ ಧನ್ಯವಾದ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ