Omicron Variant ಲಸಿಕೆ ಪರಿಣಾಮ ಬೀರಲ್ಲ, ಬೂಸ್ಟರ್ ಅಗತ್ಯವಿಲ್ಲ, ಎಚ್ಚರ ತಪ್ಪಿದರೆ ಓಮಿಕ್ರಾನ್ ಅಪಾಯ!

By Kannadaprabha News  |  First Published Dec 15, 2021, 3:35 AM IST
  • ಒಮಿಕ್ರೋನ್‌ ಮೇಲೆ 2 ಡೋಸ್‌ ಲಸಿಕೆ ಅಷ್ಟುಪರಿಣಾಮಕಾರಿ ಅಲ್ಲ
  • ಫೈಜರ್‌, ಆಸ್ಟ್ರಾಜೆನೆಕಾ ಲಸಿಕೆಗಳ ಅಧ್ಯಯನದಲ್ಲಿ ಸಾಬೀತು
  • ಲಸಿಕೆ ಪಡೆದವರೂ ಕೊರೋನಾ ಪೀಡಿತರಾಗಬಹುದು

ನವದೆಹಲಿ(ಡಿ.15) :  ಫೈಜರ್‌ ಹಾಗೂ ಬ್ರಿಟನ್‌ನ ಆಸ್ಟ್ರಾಜೆನೆಕಾದ (ಭಾರತದಲ್ಲಿನ ಕೋವಿಶೀಲ್ಡ್‌) 2 ಡೋಸ್‌ ಲಸಿಕೆಗಳು ಹೊಸದಾಗಿ ಪಸರಿಸುತ್ತಿರುವ ಕೊರೋನಾದ ಒಮಿಕ್ರೋನ್‌(Omicron) ರೂಪಾಂತರಿ ವಿರುದ್ಧ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕಾಯ ಸೃಷ್ಟಿಸುವುದಿಲ್ಲ ಎಂದು ಆಕ್ಸ್‌ಫರ್ಡ್‌ ವಿವಿ(oxford university) ಅಧ್ಯಯನದಿಂದ ತಿಳಿದುಬಂದಿದೆ. ಹೀಗಾಗಿ ಈ ಲಸಿಕೆ(Vaccine) ಪಡೆದವರು ಹಾಗೂ ಈ ಹಿಂದೆ ಸೋಂಕಿನಿಂದ ಗುಣಮುಖರಾದವರು ಮತ್ತೆ ಮರುಸೋಂಕಿನ ಅಪಾಯದಲ್ಲಿರುತ್ತಾರೆ ಎಂದು ಅದು ಎಚ್ಚರಿಸಿದೆ.

ಆಕ್ಸ್‌ಫರ್ಡ್‌ ವಿವಿ ತಜ್ಞರು ಒಮಿಕ್ರೋನ್‌ ರೂಪಾಂತರಿಯು ಆಸ್ಟ್ರಾಜೆನೆಕಾ(astrazeneca) ಹಾಗೂ ಫೈಜರ್‌(pfizer) ಲಸಿಕೆ ಪಡೆದವರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಅಧ್ಯಯನ ನಡೆಸಿದ್ದರು. ಆಗ ಸೋಂಕನ್ನು ನಿಷ್ಕ್ರೀ ಯಗೊಳಿಸುವ ದೇಹದಲ್ಲಿನ ಪ್ರತಿಕಾಯ ಶಕ್ತಿ ಒಮಿಕ್ರೋನ್‌ ಮೇಲೆ ತುಂಬಾ ಕಡಿಮೆ ಪರಿಣಾಮ ಬೀರುತ್ತದೆ ಎಂದು ವ್ಯಕ್ತವಾಗಿದೆ. ಹೀಗಾಗಿ ಒಮಿಕ್ರೋನ್‌ ರೂಪಾಂತರಿ ಮುಂದಿನ ದಿನಗಳಲ್ಲಿ ಇನ್ನೊಂದು ಸೋಂಕಿನ ಅಲೆ ಸೃಷ್ಟಿಸಬಹುದು. ಲಸಿಕೆ ಪಡೆದವರೂ ಬಾಧಿತರಾಗಬಹುದು ಎಂದು ಕಂಡುಬಂದಿದೆ. ಆದರೆ ಮೂರನೇ ಡೋಸ್‌ ಪಡೆದರೆ ಪರಿಣಾಮ ಹೆಚ್ಚಬಹುದು ಎಂದೂ ಅದು ಹೇಳಿದೆ.

Tap to resize

Latest Videos

Coronavirus Alert ಕರ್ನಾಟಕದಲ್ಲಿ ಕೋವಿಡ್ ಅಲರ್ಟ್, ಕಳೆದೆರಡು ದಿನದಿಂದ ಮರಣ ದರ ಏರಿಕೆ!

ಒಮಿಕ್ರೋನ್‌ಗೆ ಬೂಸ್ಟರ್‌ ಡೋಸ್‌ ರಕ್ಷಣೆ ಖಚಿತವಿಲ್ಲ
ರೂಪಾಂತರಿ ಒಮಿಕ್ರೋನ್‌ ವೈರಸ್‌ನಿಂದ ಜನ ಸಾಮಾನ್ಯರ ರಕ್ಷಣೆಗಾಗಿ ಹಲವು ದೇಶಗಳಲ್ಲಿ ಬೂಸ್ಟರ್‌ ಡೋಸ್‌(Booster Dose) ನೀಡಿಕೆ ಆರಂಭವಾಗಿರುವಾಗಲೇ, ಬೂಸ್ಟರ್‌ ಡೋಸ್‌ ಸಹ ಒಮಿಕ್ರೋನ್‌ ವೈರಸ್‌ನಿಂದ ಖಚಿತವಾಗಿ ರಕ್ಷಿಸುತ್ತದೆ ಎಂಬುದಕ್ಕೆ ಸಾಕ್ಷ್ಯಗಳೇನೂ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ಬ್ರಿಟನ್‌ ಸೇರಿದಂತೆ ಹಲವು ದೇಶಗಳಲ್ಲಿ ಒಮಿಕ್ರೋನ್‌ನಿಂದ ರಕ್ಷಣೆ ಒದಗಿಸಲು ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ಒಮಿಕ್ರೋನ್‌ ತೀವ್ರತೆ ಅಷ್ಟೇನೂ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಬೂಸ್ಟರ್‌ ಡೋಸ್‌ ಅಗತ್ಯವಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಒಮಿಕ್ರೋನ್‌ ವಿರುದ್ಧ ಬೂಸ್ಟರ್‌ ಡೋಸ್‌ ಪೂರ್ತಿ ರಕ್ಷಣೆ ನೀಡದೇ ಇರಬಹುದು. ಆದರೆ, ಈ ಸೋಂಕಿಗೆ ತುತ್ತಾದವರು ಆಸ್ಪತ್ರೆಗೆ ಸೇರುವ ಸಾಧ್ಯತೆಯನ್ನು ತಪ್ಪಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಒಮಿಕ್ರೋನ್‌ ವಿರುದ್ಧ ಫೈಝರ್‌ ಗುಳಿಗೆ ಶೇ.90 ಪರಿಣಾಮಕಾರಿ
ವಾಷಿಂಗ್ಟನ್‌: ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಕೊರೋನಾ ರೂಪಾಂತರಿ ಒಮಿಕ್ರೋನ್‌ ವಿರುದ್ಧ ತಾನು ಅಭಿವೃದ್ಧಿಪಡಿಸಿರುವ ಗುಳಿಗೆ ಶೇ.89ರಷ್ಟುಪರಿಣಾಮಕಾರಿ ಎಂದು ಅಧ್ಯಯನದ ವೇಳೆ ತಿಳಿದುಬಂದಿದೆ ಎಂದು ಅಮೆರಿಕದ ಫೈಝರ್‌ ಕಂಪನಿ ಮಾಹಿತಿ ನೀಡಿದೆ. ಅಧ್ಯಯನದ ವೇಳೆ, ಕೋವಿಡ್‌ ರೋಗಲಕ್ಷಣಗಳಿರುವವರಿಗೆ ಫೈಝರ್‌ ಗುಳಿಗೆಯನ್ನು ನೀಡಿದಾಗ, ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಮಾಣ ಹಾಗೂ ಸಾವಿನ ಪ್ರಮಾಣದಲ್ಲಿ ಶೇ.89ರಷ್ಟುಇಳಿಕೆ ಕಂಡುಬಂದಿದೆ. ಈಗಾಗಲೇ ಗುಳಿಗೆಯ ಅಧಿಕೃತ ಬಳಕೆಗೆ ಅನುಮತಿ ಕೋರಿ ಔಷಧ ನಿಯಂತ್ರಕರ ಬಳಿ ಕಳುಹಿಸಲಾಗಿದ್ದು, ಅನುಮತಿ ಸಿಕ್ಕಿದರೆ ಇದು ಜಗತ್ತಿನಲ್ಲೇ ಕೋವಿಡ್‌-19ಗಾಗಿಯೇ ತಯಾರಿಸಿದ ಮೊದಲ ಗುಳಿಗೆಯಾಗಲಿದೆ. ಜೊತೆಗೆ ಇತರೆ ಔಷಧಿಗಳಂತೆ ಅಮೆರಿಕದ ಔಷಧಾಲಯದಲ್ಲಿ ಸುಲಭವಾಗಿ ಸಿಗಲಿದೆ ಫೈಝರ್‌ ತಿಳಿಸಿದೆ.

Corona Crisis: ಒಮಿಕ್ರೋನ್‌ನಲ್ಲಿ ಪ್ರತಿಕಾಯ ಭೇದಿಸುವ ಶಕ್ತಿ ಹೆಚ್ಚು

ಬ್ರಿಟನ್ನಲ್ಲಿ 3 ದಿನಕ್ಕೊಮ್ಮೆ ಒಮಿಕ್ರೋನ್‌ ಡಬಲ್‌!
ವಿಶ್ವದಲ್ಲಿ ಹೊಸ ಕೋವಿಡ್‌ ಅಲೆ ಎಬ್ಬಿಸಿಸುತ್ತಿರುವ ಒಮಿಕ್ರಾನ್‌ ಸೋಂಕು ಬ್ರಿಟನ್‌ನಲ್ಲಿ 2-3 ದಿನಕ್ಕೊಮ್ಮೆ ದ್ವಿಗುಣವಾಗುತ್ತಿದ್ದು, ಪ್ರತಿನಿತ್ಯ 2 ಲಕ್ಷ ಜನರಿಗೆ ತಗಲುತ್ತಿರುವ ಅಂದಾಜಿದೆ. ಜತೆಗೆ ಬ್ರಿಟನ್‌ನಲ್ಲಿ ಈಗಾಗಲೇ 150ಕ್ಕೂ ಹೆಚ್ಚು ಒಮಿಕ್ರೋನ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಭಾರತದಲ್ಲಿ ಒಮಿಕ್ರಾನ್‌ ಸೋಂಕಿನ ಸಂಖ್ಯೆ 61ಕ್ಕೆ
ಮಹಾರಾಷ್ಟ್ರದಲ್ಲಿ 8, ರಾಜಸ್ಥಾನದಲ್ಲಿ 7, ದಿಲ್ಲಿಯಲ್ಲಿ 4 ಸೇರಿ ಮಂಗಳವಾರ ದೇಶಾದ್ಯಂತ 20 ಹೊಸ ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 61ಕ್ಕೇರಿದೆ. ಮಹಾರಾಷ್ಟ್ರವೊಂದರಲ್ಲೇ 28 ಕೇಸ್‌ ಪತ್ತೆಯಾಗಿದೆ. ಈ ಪೈಕಿ ಒಬ್ಬ ಬೆಂಗಳೂರಿಗೆ ಪ್ರಯಾಣಿಸಿದ್ದ ಎಂದು ತಿಳಿದು ಬಂದಿದೆ.

click me!