
ರಾಂಪುರ(ಏ.27): ಭಾರತವು ಕೊರೊನಾವೈರಸ್ ಎರಡನೇ ಅಲೆಯೊಂದಿಗೆ ಹೋರಾಡುತ್ತಲೇ ಇದೆ. ರಾಷ್ಟ್ರಾದ್ಯಂತ ಆರೋಗ್ಯ ವ್ಯವಸ್ಥೆಯು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರೋಗಿಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಲು ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದಾರೆ.
ವೈದ್ಯರು ಮತ್ತು ರೋಗಿಗಳ ಸಂಬಂಧಿಗಳ ನಡುವಿನ ಹಲವಾರು ವಿವಾದಗಳು ಮತ್ತು ಘರ್ಷಣೆಗಳು ದೇಶದ ವಿವಿಧ ಭಾಗಗಳಲ್ಲಿ ವರದಿಯಾಗಿದೆ. ಆದರೆ, ಅಪರೂಪದ ಘಟನೆಯೊಂದರಲ್ಲಿ, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಬೆಳಕಿಗೆ ಬಂದಿದ್ದು, ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವೈದ್ಯರು ಮತ್ತು ದಾದಿಯರು ಜಗಳವಾಡುತ್ತಿರುವುದನ್ನು ಕಾಣಬಹುದು.
ಕೊರೋನಾದಿಂದ ಮೃತಪಟ್ಟ ಪೊಲೀಸರ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಕೆಲಸ
ಎಎನ್‌ಐ ಶೇರ್ ಮಾಡಿದ 14 ಸೆಕೆಂಡುಗಳ ಸುದೀರ್ಘ ವೀಡಿಯೊದಲ್ಲಿ, ವೈದ್ಯರು ಮತ್ತು ದಾದಿ ಇಬ್ಬರೂ ಪರಸ್ಪರ ನಿಂದಿಸುವುದನ್ನು ಕಾಣಬಹುದು. ನಂತರ ಪರಸ್ಪರ ಕೈಮಿಲಾಯಿಸುವುದರಲ್ಲಿ ಜಗಳ ಕೊನೆಗೊಂಡಿತು.
ವೀಡಿಯೊದಲ್ಲಿ, ನರ್ಸ್ ಮತ್ತು ವೈದ್ಯರು ಒಬ್ಬರಿಗೊಬ್ಬರು ನಿಂದಿಸುವುದನ್ನು ಕಾಣಬಹುದು. ಆಸ್ಪತ್ರೆಯ ಆವರಣದೊಳಗೆ ಇಬ್ಬರೂ ಪರಸ್ಪರ ಥಳಿಸಲು ಪ್ರಾರಂಭಿಸಿದ್ದಾರೆ. ನಂತರ ಸ್ಥಳದಲ್ಲಿದ್ದ ಪೊಲೀಸರು ಮತ್ತು ಇತರ ಸಿಬ್ಬಂದಿ ಅವರನ್ನು ಸಮಾಧಾನಪಡಿಸಿದ್ದಾರೆ.
ಸಾರ್ಥಕ ಜೀವನ; ಬೆಡ್ ತ್ಯಾಗ ಮಾಡಿ 85 ವರ್ಷದ RSS ಸ್ವಯಂ ಸೇವಕ ನಿಧನ
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ರಾಂಪುರ್ ಮ್ಯಾಜಿಸ್ಟ್ರೇಟ್ ರಾಮ್‌ಜಿ ಮಿಶ್ರಾ, ನಾನು ಅವರಿಬ್ಬರ ಜೊತೆ ಮಾತನಾಡಿದ್ದೇನೆ. ಅವರು ಒತ್ತಡದಲ್ಲಿದ್ದರು ಮತ್ತು ಹೆಚ್ಚಿನ ಕೆಲಸದ ಹೊರೆ ಇತ್ತು ಎಂದು ಅವರು ಹೇಳಿದ್ದಾರೆ. ನಾವು ಈ ಬಗ್ಗೆ ತನಿಖೆ ಮಾಡುತ್ತೇವೆ. ಇಬ್ಬರೊಂದಿಗೂ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ