ಲಸಿಕೆ ಪಡೆಯೋದಾ? ಡೌಟ್‌ ಇರುವವರು ಈ ಫೋಟೋ ತಪ್ಪದೇ ನೋಡಿ: ಹೀಗಾಗುತ್ತೆ ಶ್ವಾಸಕೋಶ!

By Suvarna NewsFirst Published Apr 27, 2021, 4:56 PM IST
Highlights

ಕೊರೋನಾ ಹಾವಳಿ ನಡುವೆ ಲಸಿಕೆ ಅಭಿಯಾನ| ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಜನ| ಲಸಿಕೆ ಪಡೆಯೋದಾ ಎಂಬ ಅನುಮಾನ ಇರೋರು ಈ ಫೋಟೋ ತಪ್ಪದೇ ನೋಡಿ

ನವದೆಹಲಿ(ಏ.27): ದೇಶದಲ್ಲಿ ಎರಡನೇ ಕೊರೋನಾ ಅಲೆ ಅಪಾರ ಸಾವು ನೋವು ಉಂಟು ಮಾಡಿದೆ. ಪ್ರತಿ ದಿನ ಲಕ್ಷಾಂತರ ಮಂದಿಗೆ ಕೊರೋನಾ ತಗುಲುತ್ತಿದ್ದು, ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಹೀಗಿದ್ದರೂ ದೇಶಾದ್ಯಂತ ಲಸಿಕೆ ಅಭಿಯಾನ ಜಾರಿಯಲ್ಲಿದೆ. ಮೇ ತಿಂಗಳಿನಿಂದ ಹದಿನೆಂಟು ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡುವ ಕಾರ್ಯ ಆರಂಭವಾಗಲಿದೆ. ಇಷ್ಟಾದರೂ ಅಅನೇಕ ಮಂದಿಯಲ್ಲಿ ಈ ಲಸಿಕೆ ಪಡೆಯಬೇಕಾ? ಅಗತ್ಯವೇನಿದೆ? ಅಡ್ಡಪರಿಣಾಮ ಉಂಟಾದರೆ ಅನುಭವಿಸಬೇಕಾದವರು ನಾವಲ್ಲವೇ ಎಂಬ ಗೊಂದಲವಿದೆ. ಇಂತಹ ಗೊಂದಲಕ್ಕೊಳಪಟ್ಟವರು ಈ ಫೋಟೋವನ್ನೊಮ್ಮೆ ತಪ್ಪದೇ ನೋಡಿ.

ಹೌದು ಕೊರೋನಾ ಲಸಿಕೆ ಪಡೆಯದಿದ್ದರೇನಾಗುತ್ತದೆ? ಎಂದು ಪ್ರಶ್ನಿಸುವವರು ಇಂಟರ್ನ್ಯಾಷನಲ್ ಇನಾಕ್ಯುಲೇಷನ್ ಸೆಂಟರ್, NDMCಯ ರಿಜಿಸ್ಟ್ರಾರ್ ಹಾಗೂ ಮುಖ್ಯಸ್ಥರಾಗಿರುವ ಡಾಕ್ಟರ್‌ ಸುಮಿತ್ ಕೆ. ದುಬೆ ಟ್ವಿಟರ್‌ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದಾರೆ. ಇಲ್ಲಿ ಲಸಿಕೆ ಪಡೆದ ಕೊರೋನಾ ಸೋಂಕಿತ ವ್ಯಕ್ತಿಯ ಶ್ವಾಸಕೋಶ ಹಾಗೂ ಲಸಿಕೆ ಪಡೆಯದ ಸೋಂಕಿತರ ಶ್ವಾಸಕೋಶ ಹೇಗಿರುತ್ತದೆ ಎಂದು ಸ್ಪಷ್ಟಪಡಿಸುವ 3ಡಿ ಸಿಟಿ ಸ್ಕ್ಯಾನ್‌ ಫೋಟೋ ಮೂಲಕ ತೋರಿಸಲಾಗಿದೆ.
ಲಸಿಕೆ ಪಡೆದ ಸೋಂಕಿತ ವ್ಯಕ್ತಿಯ ಶ್ವಾಸಕೋಶ ಯಾವುದೇ ಡ್ಯಾಮೇಜ್‌ ಆಗದೆ, ಕ್ಲೀನ್ ಆಗಿದೆ. ಆದರೆ ಲಸಿಕೆ ಪಡೆಯದ ಸೋಂಕಿತರ ಶ್ವಾಸಕೀಶ ಸಂಪೂರ್ಣವಾಗಿ ಡ್ಯಾಮೇಜ್‌ ಆಗಿರುವುದು ಸ್ಪಷ್ಟವಾಗಿದೆ. 

Correction pic.twitter.com/ocg1UBi4B0

— Dr Sumit K Dubey (@drsumitdubey6)

Latest Videos

ಹೀಗಾಗಿ ನಿಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಿರಿ, ಇತರರಿಗೂ ಕೊರೋನಾ ಲಸಿಕೆ ಪಡೆಯಲು ಪ್ರೋತ್ಸಾಹಿಸಿ ಎಂದು ಈ ಟ್ವೀಟ್ ಮೂಲಕ ಡಾಕ್ಟರ್ ಮನವಿ ಮಾಡಿದ್ದಾರೆ.

ದೇಶಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡು ಸಕಾಲದಲ್ಲಿ ಲಸಿಕೆ ಪಡೆಯಿರಿ. ಲಸಿಕೆ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊರೋನಾ ವೈರಸ್‌ ಮಣಿಸಲು ಮಹತ್ವದ ಪಾತ್ರ ವಹಿಸಲಿದೆ. ಈಗಾಗಲೇ 45 ವರ್ಷಕ್ಕಿಂತ ಮೇಲಿನವರಿಗೆ ಲಸಿಕೆ ನೀಡಲಾಗುತ್ತಿದೆ. ಮೇ ತಿಂಗಳಿನಿಂದ ಹದಿನೆಂಟು ವರ್ಷದಿಂದ ನಲ್ವತ್ತೈದು ವರ್ಷದೊಳಗಿನವರಿಗೆ ಲಸಿಕೆ ವಿತರಣೆ ಆರಂಭವಾಗಲಿದೆ. ಕರ್ನಾಟಕವೂ ಸೇರಿ ಅನೇಕ ರಾಜ್ಯಗಳು ಉಚಿತವಾಗಿ ಲಸಿಕೆ ನೀಡಲಿದೆ. ಹೀಗಾಗಿ ಲಸಿಕೆ ಪಡೆದು ಕೊರೋನಾ ವಿರುದ್ಧ ಹೋರಾಡೋಣ.

click me!