15-18ರ ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕೆ ವಿತರಣೆ ಆರಂಭಿಸಿದ ಕೇವಲ ಐದು ದಿನದಲ್ಲಿ 2 ಕೋಟಿಗೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಮಹತ್ವದ ಮೈಲಿಗಲ್ಲನ್ನು ಭಾರತ ಸ್ಥಾಪಿಸಿದಂತಾಗಿದೆ.
ನವದೆಹಲಿ (ಜ. 09): 15-18ರ ವಯೋಮಾನದ ಮಕ್ಕಳಿಗೆ ಕೋವಿಡ್ ಲಸಿಕೆ (Covid Vaccine) ವಿತರಣೆ ಆರಂಭಿಸಿದ ಕೇವಲ ಐದು ದಿನದಲ್ಲಿ 2 ಕೋಟಿಗೂ ಹೆಚ್ಚು ಜನರು ಲಸಿಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಮಹತ್ವದ ಮೈಲಿಗಲ್ಲನ್ನು ಭಾರತ ಸ್ಥಾಪಿಸಿದಂತಾಗಿದೆ. ಈ ಕುರಿತು ಟ್ವೀಟ್ (Tweet) ಮಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ (mansukh mandaviya) ‘ನನ್ನ ಯುವ ಸ್ನೇಹಿತರೇ ಅದ್ಭುತವಾಗಿ ಸಾಗುತ್ತಿದೆ.
15-18ರ ವಯೋಮಾನದ 2 ಕೋಟಿಗೂ ಹೆಚ್ಚಿನ ಮಕ್ಕಳು, ಅಭಿಯಾನ ಆರಂಭಿಸಿದ ಒಂದು ವಾರದೊಳಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ’ ಎಂದು ಹೇಳಿದ್ದಾರೆ. ಜ.3ರಿಂದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ ದೇಶದಲ್ಲಿ ಆರಂಭಗೊಂಡಿದ್ದು, ಕೋವ್ಯಾಕ್ಸಿನ್ ಲಸಿಕೆ (Covaxin Vaccine) ನೀಡಲಾಗುತ್ತಿದೆ. ಈ ವಯೋಮಾನದ 7 ಕೋಟಿಗೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ.
undefined
ಮಕ್ಕಳ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ: ಒಮಿಕ್ರೋನ್ (omicron) ಅಬ್ಬರದ ನಡುವೆಯೇ 15ರಿಂದ 18 ವಯೋಮಾನದ ಮಕ್ಕಳಿಗೂ ಕೊರೋನಾ ಲಸಿಕೆ (Corona Vaccine) ನೀಡುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಅಭಿಯಾನದ ಭಾಗವಾಗಿ ಶನಿವಾರದಿಂದಲೇ ಲಸಿಕೆ ಪಡೆಯಲು ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಕೋವಿನ್ ಪೋರ್ಟಲ್ (Cowin Portal) ಅಥವಾ ಲಸಿಕೆ ನೀಡುವ ಸ್ಥಳಗಳಿಗೆ ತೆರಳಿ ಹೆಸರು ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ.
Covid Vaccination: ಮಕ್ಕಳಿಗೆ ಲಸಿಕೆ ಹಾಕಿಸಲು ವಿದೇಶಕ್ಕೆ ಹಾರುತ್ತಿರುವ ಪೋಷಕರು!
ಜ.3ರ ಸೋಮವಾರದಿಂದಲೇ ಮಕ್ಕಳ ಲಸಿಕೆ ಅಭಿಯಾನ ಆರಂಭವಾಗಲಿದೆ. ಎಲ್ಲಾ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ದೇಶದಲ್ಲಿ 7.4 ಕೋಟಿ ಮಕ್ಕಳು ಲಸಿಕೆಗೆ ಅರ್ಹವಿದ್ದು, 15 ಕೋಟಿ ಹೆಚ್ಚುವರಿ ಲಸಿಕೆ ಡೋಸ್ ಅಗತ್ಯ ಬೀಳಲಿದೆ. ಈ ಬಗ್ಗೆ ಶನಿವಾರ ಟ್ವೀಟ್ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ (Mansukh Mandaviya) ಅವರು, ‘ಹೊಸ ವರ್ಷದ ಶುಭ ಸಂದರ್ಭದಲ್ಲಿ ಮಕ್ಕಳ ನೋಂದಣಿಯ ಕೋವಿನ್ ಪೋರ್ಟಲ್‌ಗೆ ಚಾಲನೆ ನೀಡಲಾಗಿದೆ. ಕುಟುಂಬ ಸದಸ್ಯರು ತಮ್ಮ ಕುಟುಂಬದಲ್ಲಿರುವ ಅರ್ಹ ಮಕ್ಕಳ ಹೆಸರುಗಳನ್ನು ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ಮಕ್ಕಳು ಲಸಿಕೆ ಪಡೆಯಲು ಆನ್‌ಲೈನ್ ಕೋವಿನ್ ಪೋರ್ಟಲ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು. ಅಥವಾ ನೇರವಾಗಿ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದು. ಮಕ್ಕಳಿಗಾಗಿ ಪ್ರತ್ಯೇಕ ಲಸಿಕಾ ಕೇಂದ್ರಗಳು, ಪ್ರತ್ಯೇಕ ಸಿಬ್ಬಂದಿ ಮತ್ತು ಪ್ರತ್ಯೇಕ ಸಾಲುಗಳನ್ನು ಮಾಡಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
Covid Vaccination : ಮೈಸೂರು ನಗರದಲ್ಲಿ ಶೇ.100 ಮೊದಲ ಡೋಸ್ ಲಸಿಕೆ
12 ವರ್ಷ ಮೇಲ್ಪಟ್ಟವರಿಗೆ ಝೈಕೋವ್-ಡಿ ಲಸಿಕೆ!: ಸದ್ಯ ಝೈಕೋವ್-ಡಿ ಲಸಿಕೆಯನ್ನು (ZyCoV-D vaccine) 12 ವರ್ಷ ಮೇಲ್ಪಟ್ಟಎಲ್ಲಾ ಮಕ್ಕಳಿಗೂ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮತ್ತೊಂದೆಡೆ ಕೋವ್ಯಾಕ್ಸಿನ್ 2 ವರ್ಷ ಮೇಲ್ಪಟ್ಟಎಲ್ಲಾ ವಯೋಮಾನದ ಮಕ್ಕಳಿಗೂ ನೀಡಬಹುದಾದ ಲಸಿಕೆ ಅಭಿವೃದ್ಧಿಪಡಿಸಿದೆ. ಅದಕ್ಕೆ ಶೀಘ್ರವೇ ಅನುಮೋದನೆ ಸಿಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಕ್ಕಳಿಗೂ ಲಸಿಕೆ ಅಭಿಯಾನ ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.
ಇನ್ನು 60 ವರ್ಷದ ದಾಟಿದವರು ಈಗಾಗಲೇ ಎರಡೂ ಡೋಸ್ ಪಡೆದುಕೊಂಡು 6-9 ತಿಂಗಳು ತುಂಬುತ್ತಾ ಇರುವ ಹಿನ್ನೆಲೆಯಲ್ಲಿ ಅವರಿಗೆ ಬೂಸ್ಟರ್ ಡೋಸ್ ನೀಡಬೇಕಾ ಎಂಬ ಚಿಂತನೆ ಸರ್ಕಾರದ ಮಟ್ಟದಲ್ಲಿದೆ. ಈ ಬಗ್ಗೆಯೂ ತಾಂತ್ರಿಕ ಸಲಹಾ ಸಮಿತಿ ತನ್ನ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.