ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಮುಂದುವರೆದಿದ್ದು, ಶನಿವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 1,46,221 ಪ್ರಕರಣ ದಾಖಲಾಗಿದ್ದು, 285 ಸೋಂಕಿತರು ಸಾವನ್ನಪ್ಪಿದ್ದಾರೆ.
ನವದೆಹಲಿ (ಜ. 09): ದೇಶದಲ್ಲಿ ಕೋವಿಡ್ (Covid 19) ಪ್ರಕರಣಗಳ ಏರಿಕೆ ಮುಂದುವರೆದಿದ್ದು, ಶನಿವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ 1,46,221 ಪ್ರಕರಣ ದಾಖಲಾಗಿದ್ದು, 285 ಸೋಂಕಿತರು (Coronavirus) ಸಾವನ್ನಪ್ಪಿದ್ದಾರೆ. ಶನಿವಾರದ ಸೋಂಕಿನ ಪ್ರಮಾಣವು ಕಳೆದ 222 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ಈ ನಡುವೆ ಸಕ್ರಿಯ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದ್ದು, ಪ್ರಮಾಣವು 4.72 ಲಕ್ಷಕ್ಕೆ ಮುಟ್ಟಿದೆ.
ಇದು ಕಳೆದ 187 ದಿನಗಳಲ್ಲೇ ಗರಿಷ್ಠವಾಗಿದೆ. ಶನಿವಾರದ ಹೊಸ ಸೋಂಕು, ಸಾವಿನೊಂದಿಗೆ ಚೇತರಿಕೆ ಪ್ರಮಾಣ ಶೇ.97.30ಕ್ಕೆ ಇಳಿದಿದೆ. ದೈನಂದಿನ ಪಾಸಿಟಿವಿಟಿ ದರ ಶೇ.9.28ಕ್ಕೆ ಮತ್ತು ವಾರದ ಪಾಸಿಟಿವಿಟಿ ದರ ಶೇ.5.66ಕ್ಕೆ ಏರಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3.53 ಕೋಟಿಗೆ ಮತ್ತು ಸಾವಿನ ಸಂಖ್ಯೆ 4.83 ಲಕ್ಷಕ್ಕೆ ತಲುಪಿದೆ.
Coronavirus : ನಾವಂದುಕೊಂಡಂತಿಲ್ಲ ಓಮಿಕ್ರೋನ್, WHO ಕೊಟ್ಟ ಶಾಕಿಂಗ್ ಮಾಹಿತಿ
ಒಮಿಕ್ರೋನ್ ಸೋಂಕಿತರ ಸಂಖ್ಯೆ 3071ಕ್ಕೆ ಏರಿಕೆ: ದೇಶದಲ್ಲಿ ಶನಿವಾರ ಮತ್ತೆ 65 ಜನರಲ್ಲಿ ಹೊಸದಾಗಿ ಒಮಿಕ್ರೋನ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3071ಕ್ಕೆ ತಲುಪಿದೆ. ಈ ಪೈಕಿ ಅತಿ ಹೆಚ್ಚು ಪ್ರಕರಣ ಮಹಾರಾಷ್ಟ್ರ (876)ದಲ್ಲಿ ದಾಖಲಾಗಿದೆ. ನಂತರದ ಸ್ಥಾನಗಳಲ್ಲಿ ದೆಹಲಿ (513), ಕರ್ನಾಟಕ (333), ರಾಜಸ್ಥಾನ (291), ಕೇರಳ (284), ಗುಜರಾತ್ (204) ರಾಜ್ಯಗಳಿವೆ.
ಬೂಸ್ಟರ್ ಡೋಸ್‌ಗೆ ಇಂದಿನಿಂದ ನೋಂದಣಿ ಆರಂಭ: ಕೋರೋನಾ ವಾರಿಯರ್‌ಗಳು ಮತ್ತು 60 ವರ್ಷ ದಾಟಿದ ಕಾಯಿಲೆ ಪೀಡಿತರಿಗೆ ಬೂಸ್ಟರ್ ಡೋಸ್(Booster Dose) (ಮುಂಜಾಗ್ರತಾ ಡೋಸ್) ಲಸಿಕೆ ನೋಂದಣಿ ಶನಿವಾರ ಸಂಜೆಯಿಂದ ಆರಂಭವಾಗಲಿದೆ. ಸ್ಥಳದಲ್ಲೇ ನೋಂದಣಿ ಕಾರ್ಯ ಜ.10ರಿಂದ ಆರಂಭವಾಗಲಿದೆ. ಈಗಾಗಲೇ 2 ಡೋಸ್ ಪಡೆದಿರುವುದರಿಂದ ನೇರವಾಗಿ ಲಸಿಕಾ ಕೇಂದ್ರಗಳಿಗೆ ಹೋಗಿಯೂ ಲಸಿಕೆ ಪಡೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಜನರಿಗೆ ಜ.10ರಿಂದ ಲಸಿಕಾ ಅಭಿಯಾನ(Vaccinde Drive) ಆರಂಭವಾಗಲಿದೆ.
ಕರ್ನಾಟಕದಲ್ಲಿ ಕೊರೋನಾ ಸ್ಫೋಟ, ಶೇ.4ರ ಮೇಲೇರಿದ ಪಾಸಿಟಿವಿಟಿ ದರ
ಕರ್ನಾಟಕದಲ್ಲಿ ಶುಕ್ರವಾರ (ಜ.7) ಒಂದೇ ದಿನ 8449 ಕೊರೋನಾ ಪಾಸಿಟಿವ್ (Coronavirus) ಕೇಸ್ ಪತ್ತೆಯಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 30,31,052 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈವರೆಗೆ 29,62,548 ಮಂದಿ ಚೇತರಿಸಿಕೊಂಡಿದ್ದಾರೆ. ಕೊರೋನಾದಿಂದ ಒಟ್ಟು 38,362 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 30,113 ಸಕ್ರಿಯ ಪ್ರಕರಣಗಳಿವೆ. ಇನ್ನು ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 4.15 ಇದ್ದು, ಸೋಂಕಿನಿಂದ ಮೃತಪಡುವವರ ಪ್ರಮಾಣ ಶೇ 0.04 ಇದೆ.
Lockdown ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಆಗುತ್ತಾ? ಸ್ಪಷ್ಟನೆ ಕೊಟ್ಟ ಸಚಿವ ಸುಧಾಕರ್
ದಿನೇ ದಿನೇ ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ದ್ವಿಗುಣವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಮುಖವಾಗಿ ಬೆಂಗಳೂರು ನಗರದಲ್ಲೇ ಕಳೆದ 24 ಗಂಟೆಗಳಲ್ಲಿ 6812 ಕೇಸ್ ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. 352 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ನಗರದಲ್ಲಿ ಒಟ್ಟು 12,83,186 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು 16,417 ಮಂದಿ ಕೊವಿಡ್ನಿಂದ ಮೃತಪಟ್ಟಿದ್ದಾರೆ. 12,41,398 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 25,370 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.