IIT Madras Analysis: ಫೆಬ್ರವರಿ 1ರಿಂದ 15ರೊಳಗೆ ಕೋವಿಡ್‌ ಪರಾಕಾಷ್ಠೆ

By Kannadaprabha NewsFirst Published Jan 9, 2022, 8:05 AM IST
Highlights

ದೇಶದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ‘ಆರ್‌-ನಾಟ್‌’ (ಒಬ್ಬ ಸೋಂಕಿತ ಎಷ್ಟುಮಂದಿಗೆ ವೈರಾಣು ಪಸರಿಸುತ್ತಾನೆ ಎಂಬ ಲೆಕ್ಕ) ದರ ಸಾರ್ವಕಾಲಿಕ ದಾಖಲೆಯ 4ಕ್ಕೇರಿದೆ ಎಂದು ಮದ್ರಾಸ್‌ ಐಐಟಿಯ ಪ್ರಾಥಮಿಕ ಅಧ್ಯಯನ ತಿಳಿಸಿದೆ. ಇದೇ ವೇಳೆ, ಈಗ ಕಾಣಿಸಿಕೊಂಡಿರುವ ಕೊರೋನಾ ಅಲೆ ಫೆ.1ರಿಂದ 15ರೊಳಗೆ ಉತ್ತುಂಗ ತಲುಪಲಿದೆ. 

ನವದೆಹಲಿ (ಜ. 09): ದೇಶದಲ್ಲಿ ಕೋವಿಡ್‌ (Covid 19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ‘ಆರ್‌-ನಾಟ್‌’ (ಒಬ್ಬ ಸೋಂಕಿತ ಎಷ್ಟುಮಂದಿಗೆ ವೈರಾಣು ಪಸರಿಸುತ್ತಾನೆ ಎಂಬ ಲೆಕ್ಕ) ದರ ಸಾರ್ವಕಾಲಿಕ ದಾಖಲೆಯ 4ಕ್ಕೇರಿದೆ ಎಂದು ಮದ್ರಾಸ್‌ ಐಐಟಿಯ (Madras IIT) ಪ್ರಾಥಮಿಕ ಅಧ್ಯಯನ ತಿಳಿಸಿದೆ. ಇದೇ ವೇಳೆ, ಈಗ ಕಾಣಿಸಿಕೊಂಡಿರುವ ಕೊರೋನಾ (Coronavirus) ಅಲೆ ಫೆ.1ರಿಂದ 15ರೊಳಗೆ ಉತ್ತುಂಗ ತಲುಪಲಿದೆ. 

ಗಮನಾರ್ಹ ಎಂದರೆ, ಈ ಬಾರಿಯ ಅಲೆ ಮೊದಲೆರಡು ಅಲೆಗಳಿಗಿಂತ ವಿಭಿನ್ನವಾಗಿರಲಿದ್ದು, ಇದು ಪರಾಕಾಷ್ಠೆ ಮುಟ್ಟಿದಾಗ ಭಾರಿ ಸಂಖ್ಯೆಯ ಸೋಂಕಿತರು ಕಾಣಿಸಿಕೊಳ್ಳಲಿದ್ದಾರೆ ಎಂದು ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಡಿ.25ರಿಂದ ಡಿ.31ರವರೆಗಿನ ವಾರದಲ್ಲಿ ರಾಷ್ಟ್ರೀಯ ‘ಆರ್‌-ನಾಟ್‌’ ದರ 2.9ರಷ್ಟಿತ್ತು. ಜ.1ರಿಂದ 6ರವರೆಗಿನ ವಾರದಲ್ಲಿ ಇದು 4ಕ್ಕೆ ಹೆಚ್ಚಳವಾಗಿದೆ ಎಂದು ಕಂಪ್ಯೂಟರ್‌ ಮಾದರಿಯನ್ನು ವಿಶ್ಲೇಷಣೆಗೊಳಪಡಿಸಿ ಮದ್ರಾಸ್‌ ಐಐಟಿ ತಿಳಿಸಿದೆ.

IIT Kanpur Study : ಭಾರತದಲ್ಲಿ ಫೆಬ್ರವರಿ ವೇಳೆಗೆ ಉತ್ತುಂಗಕ್ಕೇರಲಿದೆ Covid-19 ಮೂರನೇ ಅಲೆ!

‘ಆರ್‌- ನಾಟ್‌’ ದರ ಪ್ರಸರಣ, ಅದರ ವೇಗ ಹಾಗೂ ಸೋಂಕು ಹರಡುವ ಸಮಯ ಎಂಬ ಮೂರು ಅಂಶಗಳ ಮೇಲೆ ಅವಲಂಬಿತವಾಗಿದೆ. ಕ್ವಾರಂಟೈನ್‌ ಅಥವಾ ನಿರ್ಬಂಧ ಕ್ರಮಗಳ ಹೆಚ್ಚಳದಿಂದಾಗಿ ಮುಂದಿನ ದಿನಗಳಲ್ಲಿ ಇದು ಇಳಿಕೆಯಾಗಬಹುದು. ನಮ್ಮದು ಎರಡು ವಾರಗಳ ಅಧ್ಯಯನ ಅಷ್ಟೆ. ಸರ್ಕಾರಗಳು ಎಷ್ಟುದಿಟ್ಟಕ್ರಮಗಳನ್ನು ಕೈಗೊಳ್ಳುತ್ತವೋ ಅದರ ಮೇಲೆ ಈ ಸಂಖ್ಯೆ ಬದಲಾಗಬಹುದು ಎಂದು ಐಐಟಿ ಮದ್ರಾಸ್‌ನ ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ ಜಯಂತ್‌ ಝಾ (Dr.Jayant.Jha) ತಿಳಿಸಿದ್ದಾರೆ. ಕೋವಿಡ್‌ ಎರಡನೇ ಅಲೆ ಉತ್ತುಂಗ ತಲುಪಿದ್ದಾಗ ಆರ್‌-ನಾಟ್‌ ದರ 1.69ರಷ್ಟಿತ್ತು. ಆದರೆ ಇದೀಗ ಅದು 2.69ಕ್ಕೆ ಹೆಚ್ಚಳವಾಗಿದೆ. ಇದಕ್ಕೆ ಒಮಿಕ್ರೋನ್‌ ವೈರಾಣು ಕಾರಣವಿರಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರವಷ್ಟೇ ತಿಳಿಸಿತ್ತು.

ಫೆಬ್ರವರಿಯಲ್ಲಿ ಉತ್ತುಂಗ: ಮೊದಲ ಎರಡು ಅಲೆಗಳ ಜತೆ ಹೋಲಿಕೆ ಮಾಡಿದರೆ ಈಗಿನ ಅಲೆ ವಿಭಿನ್ನವಾಗಿದೆ. ಏಕೆಂದರೆ ಈ ಬಾರಿ ಲಸಿಕೆ ಅಭಿಯಾನ ನಡೆಯುತ್ತಿದೆ. ಮತ್ತೊಂದೆಡೆ ಸಾಮಾಜಿಕ ಅಂತರದಂತಹ ಕೋವಿಡ್‌ ನಿಯಮಗಳನ್ನು ಕಡಿಮೆ ಪಾಲಿಸಲಾಗುತ್ತಿದೆ. ಮೊದಲ ಅಲೆಯಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಆದರೆ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಪ್ರಕರಣ ವರದಿಯಾಗುತ್ತಿದ್ದರೂ ಸಾಕಷ್ಟುನಿರ್ಬಂಧಗಳನ್ನು ಹೇರಲಾಗಿಲ್ಲ. ನಮಗಿರುವ ಲಾಭ ಎಂದರೆ ಶೇ.50ರಷ್ಟುಮಂದಿ ಲಸಿಕೆ ಪಡೆದಿರುವುದು. ಆದಾಗ್ಯೂ ಈ ಬಾರಿ ಕೋವಿಡ್‌ ಅಲೆ ಉತ್ತುಂಗಕ್ಕೇರಿದಾಗ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದಿದ್ದಾರೆ.

Omicron Threat: ಒಂದೇ ದಿನದಲ್ಲಿ 1.46 ಲಕ್ಷ ಕೇಸು, 285 ಸಾವು

ಗುಡ್‌ ನ್ಯೂಸ್‌ ಕೊಟ್ಟ ಕಾನ್ಪುರ ಐಐಟಿ ಪ್ರೊಫೆಸರ್: ನಿರಂತರವಾಗಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಮತ್ತು ಅದರ ಹೊಸ ರೂಪಾಂತರವಾದ ಓಮಿಕ್ರಾನ್ ಬಗ್ಗೆ ಪರಿಹಾರ ಸುದ್ದಿ ಇದೆ. ಈ ಸಂಚಿಕೆಯಲ್ಲಿ, ಐಐಟಿ ಕಾನ್ಪುರದ ಹಿರಿಯ ವಿಜ್ಞಾನಿ ಮತ್ತು ಪದ್ಮಶ್ರೀ ಪ್ರೊಫೆಸರ್ ಮನೀಂದ್ರ ಅಗರವಾಲ್ ಅವರು ಕೊರೋನದ ಮೂರನೇ ಅಲೆಯು ಎರಡನೇ ಅಲೆಯಷ್ಟು ಮಾರಕವಾಗುವುದಿಲ್ಲ ಮತ್ತು ಏಪ್ರಿಲ್ ವೇಳೆಗೆ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಪ್ರೊ. ಮಾರ್ಗಸೂಚಿಗಳನ್ನು ಅನುಸರಿಸದೆ ಹೆಚ್ಚಿನ ಸಂಖ್ಯೆಯ ಜನರು ಚುನಾವಣಾ ಸಮಾವೇಶಗಳನ್ನು ತಲುಪುತ್ತಾರೆ, ಅಂತಹ ಪರಿಸ್ಥಿತಿಯಲ್ಲಿ ಸೋಂಕಿನ ಅಪಾಯವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಎಚ್ಚರಿಕೆಯ ಅವಶ್ಯಕತೆಯಿದೆ ಎಂದು ವಾರ್ನ್ ಮಾಡಿದ್ದಾರೆ.

click me!