ನಾಡಿಗೆ ಬಂದ ಕಾಡಾನೆಯ ಬಾಲ ಎಳೆದ ಕಿಡಿಗೇಡಿ: ಕಾಡುಪ್ರಾಣಿಗಳಂತೆ ವರ್ತಿಸಿದ ಜನರ ಬಗ್ಗೆ ತೀವ್ರ ಆಕ್ರೋಶ

Published : Oct 16, 2025, 02:46 PM IST
elephant

ಸಾರಾಂಶ

elephant's tail pulled: ಪಶ್ಚಿಮ ಬಂಗಾಳದಲ್ಲಿ ಯುವಕನೊಬ್ಬ ಕಾಡಾನೆಯ ಬಾಲ ಹಿಡಿದು ಎಳೆದು ಹುಚ್ಚಾಟ ಮೆರೆದಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಾಣಿ ಹಿಂಸೆಯ ಈ ಕೃತ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಆನೆಯ ಬಾಲ ಎಳೆದ ಕಿಡಿಗೇಡಿ

ಪಶ್ಚಿಮ ಬಂಗಾಳ: ಇದೇ ಕಾರಣಕ್ಕೆ ನೋಡಿ ಗಂಡಸರು ಬೇಗ ಸಾಯ್ತಾರೆ ಅಂತ ಹೇಳಿ ಹಲವು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದನ್ನು ನೀವು ನೋಡಿರಬಹುದು. ಈ ಬಹುತೇಕ ವೀಡಿಯೋಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ಸಾವಿನ ಮನೆ ಸೇರುವಂತಹ ಮಾಡಬಾರದ ಸಾಹಸಗಳನ್ನು ಈ ಕೆಲ ಪುರುಷರು ಮಾಡ್ತಿರ್ತಾರೆ. ಹೋರಿಯನ್ನು ಕೆಣಕಲು ಹೋಗುವುದು ರೂಮ್‌ನೊಳಗೆಯೇ ಪಟಾಕಿ ಹಾರಿಸುವುದು ಗ್ಯಾಸ್ ಸಿಲಿಂಡರ್ ಮೂಲಕ ಸಾಹಸ ಮಾಡಲು ಯತ್ನಿಸುವುದು ಇತ್ಯಾದಿ. ಅದೇ ರೀತಿ ಇಲ್ಲೊಬ್ಬ ಯುವಕ ಕಾಡಾನೆಯ ಬಾಲ ಎಳೆಯುವುದಕ್ಕೆ ಹೋಗಿದ್ದಾನೆ. ಅದೃಷ್ಟವಶಾತ್ ಆತನ ಅದರಷ್ಟ ಚೆನ್ನಾಗಿತ್ತು ಬದುಕುಳಿದಿದ್ದಾನೆ.

ಕಾಡಾಂಚಿನಲ್ಲಿದ್ದ ಕಾಡಾನೆಗಳ ಮೇಲೆ ಕಲ್ಲು ತೂರಾಟ

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದ್ದು, ಯುವಕನ ವಿರುದ್ಧ ಭಾರಿ ಆಕ್ರೋಶ ಕೇಳಿ ಬರ್ತಿದೆ. ವೈರಲ್ ಆದ ವೀಡಿಯೋದಲ್ಲಿ ಯುವಕನೋರ್ವ ಕಾಡೊಳಗಿದ್ದ ಕಾಡಾನೆಯ ಬಾಲ ಹಿಡಿದು ಎಳೆದಿದ್ದಾನೆ. ಕೂಡಲೇ ಆನೆ ತಿರುಗಿ ನೋಡುತ್ತಿದ್ದಂತೆ ಆತ ಓಡಿ ಬಂದಿದ್ದಾನೆ. ವೈರಲ್ ಆದ ವೀಡಿಯೋದಲ್ಲಿ ಕಾಡಿನ ನಡುವಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಹುಶಃ ಇದು ಕಾಡಾಂಚಿನ ಗ್ರಾಮದಂತೆ ಕಾಣುತ್ತಿದ್ದು, ನಾಡಿನ ಸಮೀಪ ಬಂದ ಕಾಡಾನೆಯನ್ನು ನೋಡಿ ಅಲ್ಲಿ ಜನ ಸಾಕಷ್ಟು ಸೇರಿದ್ದಾರೆ. ಅಲ್ಲೊಬ್ಬ ಯುವಕ ಹುಚ್ಚಾಟವಾಡಿದ್ದು, ಕಾಡಾನೆಯ ಬಾಲ ಹಿಡಿದು ಎಳೆದಿದ್ದಾನೆ. ಈತ ಇಳಿಜಾರಿನಲ್ಲಿ ಇದ್ದಿದ್ದರಿಂದ ಆತ ಬಚವಾಗಿದ್ದು, ಆನೆ ಆ ಇಳಿಜಾರಿನಲ್ಲಿ ಇದಿದ್ದರಿಂದ ಆನೆಯ ಕೆಂಗಣ್ಣಿನಿಂದ ಪಾರಾಗಿದ್ದಾನೆ. ಒಂದು ವೇಳೆ ಆನೆಗೆ ಆತ ಸರಿ ನೇರವಾದ ದಾರಿಯಲ್ಲಿ ಸಿಕ್ಕಿದ್ದರೆ ಆತ ಕೈಲಾಸ ಸೇರುವಂತಾಗಿರುತ್ತಿದ್ದಿದ್ದಂತು ಪಕ್ಕಾ.

ವೀಡಿಯೋ ವೈರಲ್ ಆಗ್ತಿದ್ದಂತೆ ಭಾರಿ ಆಕ್ರೋಶ:

ಪಶ್ಚಿಮ ಬಂಗಾಳದ ಮೆದಿನಿಪುರ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಆನೆಯ ಬಾಲವನ್ನು ಹಿಡಿದು ಎಳೆದಿರುವುದು ಮಾತ್ರವಲ್ಲದೇ ಆನೆಯತ್ತ ಯುವಕರು ಕಲ್ಲು ಎಸೆಯುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. @streetdogsofbombay ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಜನರ ಗುಂಪು ಕಲ್ಲುಗಳನ್ನು ಎಸೆದಿರುವುದಲ್ಲದೇ ತಮಾಷೆಗಾಗಿ ಆನೆಯ ಬಾಲವನ್ನು ಎಳೆದಿದ್ದಾರೆ. ಅಲ್ಲಿ ಎರಡು ಆನೆಗಳು ಇದ್ದವು, ಜನರ ಸೇರುವಿಕೆಯಿಂದಾಗಿ ಅಲ್ಲಿ ಭಾರಿ ಗೊಂದಲ ಉಂಟಾಗಿತ್ತು. ಈಗ ಹೇಳಿ ಇಲ್ಲಿ ನಿಜವಾಗಿಯೂ ಕಾಡುಪ್ರಾಣಿಗಳು ಯಾರು ಎಂದು ದೈತ್ಯ ಜೀವಿಗಳೇ ಅಥವಾ ಪ್ರಾಣಿಗಳಂತೆ ವರ್ತಿಸುತ್ತಿರುವ ಮನುಷ್ಯರೇ ಎಂದು ಕಾಮೆಂಟ್ ಮಾಡಿದ್ದಾರೆ.

ಭಾರತದ ವನ್ಯಜೀವಿ ಕಾಯ್ದೆಯಡಿ ಕಾಡುಪ್ರಾಣಿಗಳನ್ನು ಪ್ರಚೋದಿಸುವ ಯಾವುದೇ ರೀತಿಯ ಕೃತ್ಯವೂ ಶಿಕ್ಷಾರ್ಹ ಅಪರಾಧವಾಗಿದೆ. ಈ ವೀಡಿಯೋ ವೈರಲ್ ಆಗ್ತಿದ್ದಂತೆ ಆನೆ ಬಾಲ ಎಳೆದ ಕಿಡಿಗೇಡಿ ವಿರುದ್ಧ ಕಠೀನ ಕ್ರಮಗಳನ್ನು ಕೈಗೊಳ್ಳುವಂತೆ ಸೋಶಿಯಲ್ ಮೀಡಿಯಾ ಬಳಕೆದಾರರು ಆಗ್ರಹಿಸಿದ್ದಾರೆ. ಇಲ್ಲಿ ಆನೆಗಳು ನಾಗರಿಕ ಲಕ್ಷಣಗಳನ್ನು ಹೊಂದಿದ್ದರೆ ಮನುಷ್ಯರು ಕಾಡುಪ್ರಾಣಿಗಳಂತೆ ವರ್ತಿಸಿದರು ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದರು. ಇವರು ಎಷ್ಟು ಹಿಂದುಳಿದಿದ್ದಾರೆ. ಶಿಕ್ಷಣ ತುಂಬಾ ಅಗತ್ಯ. ಆದರೆ ಅಲ್ಲಿ ಅನಕ್ಷರಸ್ಥ ಜನರು ಕೂಡ ಕಾಡುಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ಘಟನೆ ತುಂಬಾ ಬೇಸರದ ಸಂಗತಿ. ಭಾರತದ ಕಾನೂನು ಪ್ರಾಣಿಗಳ ವಿಚಾರದಲ್ಲಿ ಸ್ವಲ್ಪವೂ ಕಠಿಣವಾಗಿಲ್ಲ, ಇಂತಹ ಘಟನೆಗಳು ಆಗಾಗ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಇದನ್ನು ನೋಡಿ ಬಹಳ ಬೇಸರ ಆಯ್ತು. ಇವರು ಮನುಷ್ಯರು ಎಂದು ಹೇಳುವುದಕ್ಕೆ ನಾಚಿಕೆ ಆಗ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.

ಇದನ್ನೂ ಓದಿ:  ರೈಲಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಹೆರಿಗೆ ಮಾಡಿಸಿದ ಯುವಕ

ಇದನ್ನೂ ಓದಿ: ಕೊನೆಗೂ ಕ್ಯಾನ್ಸರೇ ಗೆದ್ದುಬಿಡ್ತು... ಕ್ಯಾನ್ಸರ್ ಪೀಡಿತ 21ರ ಹರೆಯದ ಯುವಕನ ವಿದಾಯದ ಪೋಸ್ಟ್ ಭಾರಿ ವೈರಲ್

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ