ರಜೆ ಮುಗಿಸಿ ಹೊರಟ ಯೋಧನ ಮೇಲೆ ಟೋಲ್ ಸಿಬ್ಬಂದಿಯಿಂದ ಹಲ್ಲೆ: ಟೋಲ್ ಪ್ಲಾಜಾ ಧ್ವಂಸ ಮಾಡಿದ ಸ್ಥಳೀಯರು

Published : Aug 18, 2025, 04:15 PM ISTUpdated : Aug 18, 2025, 06:40 PM IST
Meerut Toll Plaza

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಯೋಧರೊಬ್ಬರು ಊರಿಗೆ ಬಂದು ರಜೆ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಟೋಲ್‌ಗೇಟ್‌ವೊಂದರಲ್ಲಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗಿದೆ.

ಜಮ್ಮು ಕಾಶ್ಮೀರದಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿದ್ದ ಯೋಧರೊಬ್ಬರು ಊರಿಗೆ ಬಂದು ರಜೆ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಟೋಲ್‌ಗೇಟ್‌ವೊಂದರಲ್ಲಿ ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆದಿದೆ. ಈ ಘಟನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆ  ಆಕ್ರೋಶಗೊಂಡ ಸ್ಥಳೀಯರು ಟೋಲ್ ಫ್ಲಾಜಾವನ್ನೇ ಧ್ವಂಸಗೊಳಿಸಿದ್ದಾರೆ. ಉತ್ತರ ಪ್ರದೇಶದ ಮೀರತ್‌ನ ಸರೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಭೂನಿ ಟೋಲ್ ಪ್ಲಾಜಾದಲ್ಲಿ ಭಾನುವಾರ ರಾತ್ರಿ ಯೋಧನ ಮೇಲೆ ಹಲ್ಲೆ ನಡೆದಿದೆ. ಟೋಲ್ ಸಿಬ್ಬಂದಿ ಸೈನಿಕನನ್ನು ಲೈಟ್‌ ಕಂಬಕ್ಕೆ ಕಟ್ಟಿ ಕೋಲುಗಳಿಂದ ಹೊಡೆಯುವುದನ್ನು ಮತ್ತು ಒಂದು ಹಂತದಲ್ಲಿ ಇಟ್ಟಿಗೆಯಿಂದಲೂ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಜಮ್ಮುಕಾಶ್ಮೀರದಲ್ಲಿ ಕೆಲಸ ಮಾಡುತ್ತಿದ್ದ ಯೋಧ:

ಕಪಿಲ್ ಕವದ್ ಹಲ್ಲೆಗೊಳಗಾದ ಸೈನಿಕ. ಇವರು ಜಮ್ಮು ಕಾಶ್ಮೀರದಲ್ಲಿ ಯೋಧನಾಗಿ ಕೆಲಸ ಮಾಡುತ್ತಿದ್ದರು. ರಜೆ ಮುಗಿಸಿ ವಾಪಸ್ ಕರ್ತವ್ಯಕ್ಕೆ ಮರಳುತ್ತಿದ್ದ ವೇಳೆ ಈ ಅವಾಂತರ ನಡೆದಿದೆ. ತಮ್ಮ ಗ್ರಾಮದಿಂದ ಸ್ನೇಹಿತನ ಜೊತೆ ದೆಹಲಿಗೆ ಮರಳುತ್ತಿದ್ದ ವೇಳೆ ಕರ್ನಲ್ ಹೈವೇಯಲ್ಲಿರುವ ಟೋಲ್ ಪ್ಲಾಜಾದ ಬಳಿ ಸಮೀಪಿಸಿದಾಗ ಟ್ರಾಫಿಕ್ ಜಾಮ್ ಹಾಗೂ ಟೋಲ್ ಶುಲ್ಕಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು, ಟೋಲ್ ಸಿಬ್ಬಂದಿ ಯೋಧನನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ. ಟೋಲ್ ಸಿಬ್ಬಂದಿ ಯೋಧ ಕಪಿಲ್ ಮೇಲೆ ಕೈಯಿಂದ ಗುದ್ದುತ್ತಿರುವುದಲ್ಲದೇ ಒದೆಯುವುದು ಕೋಲಿನಿಂದ ಥಳಿಸುತ್ತಿರುವುದು ಒಂದು ಹಂತದಲ್ಲಿ ಇಟ್ಟಿಗೆಯನ್ನು ಕೂಡ ಓರ್ವ ಕೈಯಲ್ಲಿ ಎತ್ತಿಕೊಂಡು ಹಲ್ಲೆಗೆ ಮುಂದಾಗುತ್ತಿರುವುದನ್ನು ಕಾಣಬಹುದು.

ಸಿಟ್ಟಿಗೆದ್ದ ಗ್ರಾಮಸ್ಥರಿಂದ ಟೋಲ್ ಧ್ವಂಸ:

ಕಪಿಲ್, ಸರೂರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಟ್ಕಾ ಗ್ರಾಮದ ನಿವಾಸಿಯಾಗಿದ್ದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಹಾನಿ ಮಾಡುವ ಉದ್ದೇಶದಿಂದ ಆರಂಭವಾದ ಗಲಾಟೆ ನಂತರ ಹಲ್ಲೆಗೆ ಕಾರಣವಾಯಿತು ಎಂದು ಮೀರತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆಕಪಿಲ್ ಕುಟುಂಬದವರ ದೂರಿನ ಮೇರೆಗೆ ಸರೂರ್‌ಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಗಮನಿಸಿ ಪೊಲೀಸರು ಒಟ್ಟು ಆರು ಪ್ರಮುಖ ಶಂಕಿತರನ್ನು ಬಂಧಿಸಿದ್ದಾರೆ. ವೀಡಿಯೊದಲ್ಲಿ ಕಾಣುತ್ತಿರುವ ಇತರರಿಗೆ ಹುಡುಕಾಟ ನಡೆದಿದೆ. ಆದರೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಿಟ್ಟಿಗೆದ್ದ ಗ್ರಾಮಸ್ಥರು ಟೋಲ್ ಪ್ಲಾಜಾವನ್ನೇ ಧ್ವಂಸಗೊಳಿಸಿದ್ದಾರೆ.

ನಿನ್ನೆ ರಾತ್ರಿ, ಕೆಲವರು ಒಬ್ಬ ವ್ಯಕ್ತಿಯನ್ನು ಥಳಿಸುತ್ತಿರುವ ವೀಡಿಯೊ ಸಿಕ್ಕಿದೆ. ಪೊಲೀಸರು ತನಿಖೆ ನಡೆಸಿದಾಗ, ದೂರುದಾರನು ಜವಾನನಾಗಿದ್ದು, ಅವನು ಟೋಲ್ ಕಾರ್ಮಿಕರೊಂದಿಗೆ ಯಾವುದೋ ವಿಷಯಕ್ಕೆ ವಾಗ್ವಾದ ನಡೆಸಿದ್ದಾನೆ ಎಂದು ಕಂಡುಬಂದಿದೆ. ಟೋಲ್ ನೌಕರರು ಆತನನ್ನು ಥಳಿಸಿದ್ದಾರೆ. ವಿಷಯದ ಗಂಭೀರತೆಯನ್ನು ಗಮನಿಸಿ, ಪ್ರಕರಣ ದಾಖಲಿಸಲಾಗಿದೆ. ವೀಡಿಯೊದ ಆಧಾರದ ಮೇಲೆ 6 ಜನರನ್ನು ಬಂಧಿಸಲಾಗಿದೆ ಎಂದು ಎಸ್‌ಎಸ್‌ಪಿ ವಿಪಿನ್ ತಾಂಡಾ ಹೇಳಿದ್ದಾರೆ.

ಯೋಧನ ಮೇಲೆ ಹಲ್ಲೆಗೆ ತೀವ್ರ ಖಂಡನೆ:

ಈ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದ್ದು, ಅನೇಕರು ಯೋಧನ ಮೇಲೆ ಹಲ್ಲೆ ಆಗಿರುವುದಕ್ಕೆ ತೀವ್ರ ಆಕ್ರೋ ವ್ಯಕ್ತಪಡಿಸಿದ್ದಾರೆ. ಒಳಗಿದ್ದ ಇಂತಹವರಿಗೂ ಒಂದು ಆಪರೇಷನ್ ಸಿಂದೂರ್ ರೀತಿ ಆಗಬೇಕು ಎಂದು ಒಬ್ಬರು ಹೇಳಿದ್ದಾರೆ. ಇಂತಹ ದೇಶಕ್ಕಾಗಿ ಆ ಯೋಧ ಗಡಿಯಲ್ಲಿ ಹೊರಡುತ್ತಿದ್ದಾನೆ ಎಂತಹ ವಿಪರ್ಯಾಸ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಯೋಧರ ಮೇಲೆ ಹಲ್ಲೆ ಮಾಡುವವರನ್ನು ಗಡಿಯಲ್ಲಿ ತೆಗೆದುಕೊಂಡು ಹೋಗಿ ಬಿಡಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಈ ದೇಶಕ್ಕೆ ವೈಯಕ್ತಿಕ ಮಟ್ಟದಲ್ಲಿಯೂ ಸಹ ಕೆಲವು ಗಂಭೀರ ಸುಧಾರಣೆಗಳು ಅಗತ್ಯವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸ್ಟ್ಯಾಂಡ್ ಇದ್ದರೂ ಕೊಡದೇ ನಿರ್ಲಕ್ಷ್ಯ: ಮೊಮ್ಮಗನಿಗಾಗಿ ಗ್ಲುಕೋಸ್ ಬಾಟಲ್ ಹಿಡಿದು ಅರ್ಧಗಂಟೆ ನಿಂತ ವೃದ್ಧೆ
ಇದನ್ನೂ ಓದಿ: ಪತ್ನಿ ನೀಡಿದ ವಿಚಿತ್ರ ಚಿಕಿತ್ಸೆಯಿಂದ ಮತ್ತೆ ನಡೆದಾಡಲು ಶುರು ಮಾಡಿದ ಪಾರ್ಶ್ವವಾಯು ಪೀಡಿತ ಪತಿ

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು
ರಸಗುಲ್ಲಾ ಖಾಲಿ ಆಯ್ತು ಎಂದು ಮುರಿದು ಬಿತ್ತು ಮದ್ವೆ: ಮದುವೆ ಮನೆಯಾಯ್ತು ರಣಾಂಗಣ