
ನವದೆಹಲಿ (ಮೇ.15): ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಪಾಕಿಸ್ತಾನದ ಉಗ್ರ ನೆಲೆಗಳು, ವಾಯುನೆಲೆಗಳು, ಸೇನಾ ಘಟಕಗಳ ಮೇಲೆ ಭಾರತದ ಮೇ 7-8ರಂದು ರಾತ್ರಿ ನಡೆಸಿದ್ದ ಭೀಕರ ದಾಳಿಯ ಅಂಶಗಳನ್ನು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಹಂಚಿಕೊಂಡಿದೆ. ಅಂದು ಭಾರತದ ಹಲವು ನಗರಗಳ ಮೇಲೆ ಪಾಕ್ ನಡೆಸಿದ ದಾಳಿಯನ್ನು ವಿಫಲವಾಗಿ ತಡೆದಿದ್ದ ಭಾರತೀಯ ಸೇನೆ, ಇದೇ ವೇಳೆ ಕೇವಲ 23 ನಿಮಿಷಗಳಲ್ಲಿ ಪಾಕಿಸ್ತಾನದ ಹಲವು ಗುರಿಗಳನ್ನು ಧ್ವಂಸ ಮಾಡಿತ್ತು ಎಂದು ಹೇಳಿದೆ.
ಮೇ 7ರಂದು ರಾತ್ರಿ ಮತ್ತು 8ರ ಮುಂಜಾನೆ ಪಾಕ್ ಪಡೆಗಳು ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದವು. ಆದರೆ ಅದನ್ನು ಅದನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಹಿಮ್ಮೆಟ್ಟಿಸಿತ್ತು. ಅಂತೆಯೇ, ಪಾಕ್ ರಕ್ಷಣೆಗೆ ನಿಂತಿದ್ದ ಚೀನಾ ನಿರ್ಮಿತ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ, ಜ್ಯಾಂ ಮಾಡಿ, ಗುರಿಗಳನ್ನು ನಿಖರವಾಗಿ ಉಡಾಯಿಸಿ ಇಡೀ ಕಾರ್ಯಾಚರಣೆಯನ್ನು 23 ನಿಮಿಷಗಳಲ್ಲಿ ಮುಗಿಸಿತು. ಈ ಮೂಲಕ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಪ್ರದರ್ಶಿಸಿತು’ ಎಂದು ಸರ್ಕಾರ ಮಾಹಿತಿ ನೀಡಿದೆ.
ಇದನ್ನೂ ಓದಿ: Colonel Sofiya Qureshi ಕುಟುಂಬಸ್ಥರ ಮೇಲೆ ದಾಳಿ ಎಂಬ ಫೇಕ್ ಪೋಸ್ಟ್; ಕ್ರಿಮಿ ಅನೀಸ್ ಉದ್ದೀನ್ ಸ್ಥಳ ಗುರುತು ಪತ್ತೆ!
ನಾಶವಾದ ಪಾಕ್ ಅಸ್ತ್ರಗಳು:
ಭಾರತದ ಅಸ್ತ್ರಗಳು ಪಾಕ್ ಹಾರಿಸಿದ ಚೀನಾ ನಿರ್ಮಿತ ಪಿಎಲ್-15 ಕ್ಷಿಪಣಿ, ಟರ್ಕಿಯ ಯಿಹಾ ಮಾನವರಹಿತ ವೈಮಾನಿಕ ವಾಹನ(ಯುಎವಿ), ದೂರ ಸಾಗುವ ರಾಕೆಟ್ ಕ್ವಾಡ್‌ಕಾಪ್ಟರ್, ಡ್ರೋನ್‌ಗಳನ್ನು ಹೊಡೆದುಹಾಕಿವೆ.
ಭಾರತ ಬಳಸಿದ ಅಸ್ತ್ರಗಳು:
ರಷ್ಯಾದ ಪೆಚೋರಾ, ಒಎಸ್‌ಎ-ಎಕೆ, ಕಡಿಮೆ ಮಟ್ಟದ ವಾಯು ರಕ್ಷಣಾ ಗನ್‌ಗಳ ಜತೆಗೆ ಸ್ವದೇಶಿ ನಿರ್ಮಿತ ಆಕಾಶ್ ವಾಯುರಕ್ಷಣಾ ವ್ಯವಸ್ಥೆಯನ್ನು ಭಾರತ ಪಾಕ್ ದಾಳಿಯನ್ನು ತಡೆಯಲು ಮತ್ತು ಪ್ರತಿದಾಳಿ ಮಾಡಲು ಬಳಸಿತು ಎಂದು ಸರ್ಕಾರ ಮಾಹಿತಿ ನೀಡಿದೆ.
ಭಾರತ ಪ್ರತಿದಾಳಿ ಮಾಡಿದ್ದು ಹೀಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ