
ನವದೆಹಲಿ [ನ.29]: ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಗಗನ ಮುಟ್ಟಿದ್ದು, ಗುರುವಾರ ಕೇಜಿಗೆ ಸರಾಸರಿ 70ರು.ಗೆ ಬಿಕರಿಯಾಗಿದೆ. ಆದರೆ ಗೋವಾದ ಪಣಜಿಯಲ್ಲಿ ಕೇಜಿ ಈರುಳ್ಳಿಗೆ 110ರು. ಇದ್ದು ದೇಶದಲ್ಲೇ ಅತ್ಯಧಿಕ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಗ್ರಾಹಕ ಸಚಿವಾಲಯದ ದಾಖಲೆಗಳ ಪ್ರಕಾರ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅತೀ ಕಡಿಮೆ, ಅಂದರೆ ಕೇಜಿಗೆ 38 ರುಪಾಯಿ ಇದ್ದು, ದೆಹಲಿಯಲ್ಲಿ 76ರು., ಮುಂಬೈನಲ್ಲಿ 92ರು., ಕೋಲ್ಕತಾದಲ್ಲಿ 100ರು., ಚೆನ್ನೈನಲ್ಲಿ 80ರು. ದಾಖಲಾಗಿದೆ. ಇದೇ ವೇಳೆ ಈರುಳ್ಳಿ ಕಳ್ಳರ ಕಾಟವೂ ಹೆಚ್ಚಾಗಿದ್ದು, ಸೂರತ್‌ನ ತರಕಾರಿ ವ್ಯಾಪಾರಿಯೊಬ್ಬರ ಅಂಗಡಿಯಿಂದ 250 ಕೇಜಿ ಈರುಳ್ಳಿ ಕಳವಾಗಿದೆ.
ಕಣ್ಣೆದುರೇ ಇದ್ದ ಹಣದ ಬಾಕ್ಸ್ ಬಿಟ್ಟು ಈರುಳ್ಳಿ ಕದ್ದೋಡಿದ ಕಳ್ಳರು!...
ಅನಾವೃಷ್ಟಿಯಿಂದಾಗಿ ಈ ಬಾರಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಪರಿಣಾಮ ಉತ್ಪಾದನೆ ಕುಂಠಿತಗೊಂಡು ದೇಶಾದ್ಯಂತ ಬೆಲೆ ಗಗನಕ್ಕೇರಿ ಕುಳಿತಿದೆ. ಈ ಸಮಸ್ಯೆಯಿಂದ ಪಾರಾಗಲು ಈಗಾಗಲೇ ಕೇಂದ್ರ ಸರ್ಕಾರ ವಿದೇಶಗಳಿಂದ 6000 ಟನ್ ಈರುಳ್ಳಿ ಆಮದಿಗೆ ಅನುಮತಿ ನೀಡಿದೆ.
ದರ ಎಲ್ಲೆಲ್ಲಿ ಎಷ್ಟು?
ಮಧ್ಯಪ್ರದೇಶ: 38 ರು.
ದೆಹಲಿ: 76 ರು.
ಮುಂಬೈ 92 ರು.
ಕೋಲ್ಕತಾ: 100
ಚೆನ್ನೈ: 80 ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ