ಅಸ್ಟ್ರಾಜೆನೆಕಾ ಲಸಿಕೆ 1 ಶಾಟ್‌ನಿಂದ 80% ಕಮ್ಮಿಯಾಗುತ್ತದೆ ಕೊರೋನಾ ಸಾವಿನ ರಿಸ್ಕ್

Suvarna News   | Asianet News
Published : May 11, 2021, 03:05 PM ISTUpdated : May 11, 2021, 03:12 PM IST
ಅಸ್ಟ್ರಾಜೆನೆಕಾ ಲಸಿಕೆ 1 ಶಾಟ್‌ನಿಂದ 80% ಕಮ್ಮಿಯಾಗುತ್ತದೆ ಕೊರೋನಾ ಸಾವಿನ ರಿಸ್ಕ್

ಸಾರಾಂಶ

ಅಸ್ಟ್ರಾಜೆನೆಕಾ ಲಸಿಕೆ 1 ಶಾಟ್‌ನಲ್ಲಿ ಕಮ್ಮಿಯಾಗುತ್ತೆ 80% ಕೊರೋನಾ ರಿಸ್ಕ್ ರೋಗದಿಂದ ಸಾವು ಸಂಭವಿಸುವ ಅಪಾಯ 80%ರಷ್ಟು ಕಡಿಮೆ

ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯ ರೋಲ್‌ಔಟ್ ಮಾಹಿತಿಯು ಒಂದು ಡೋಸ್‌ನಿಂದ ಶೇಕಡಾ 80ರಷ್ಟು ಸೋಂಕಿತರ ಸಾವಿನ ಅಪಾಯವನ್ನು ತಡೆಯಬಹುದು ಎಂದುಪಬ್ಲಿಕ್ ಹೆಲ್ತ್ ಇಂಗ್ಲೆಂಡ್ ತಿಳಿಸಿದೆ.

ಫಿಜರ್-ಬಯೋಟೆಕ್ ಲಸಿಕೆಯ ಎರಡು ಡೋಸ್‌ಗಳ ನಂತರ ಕೊರೋನಾ ಸಾವಿನ ಸಾಧ್ಯತೆಯ ಅಪಾಯ ಇನ್ನಷ್ಟು ಕಡಿಮೆಯಾಗಿ ರಕ್ಷಣಾ ಸಾಧ್ಯತೆ 80% ರಿಂದ 97% ಕ್ಕೆ ಏರುತ್ತದೆ ಎಂದು ಅದು ಹೇಳಿದೆ.

ಸೀರಂಗೆ ಆಸ್ಟ್ರಾಜೆನೆಕಾ ಲೀಗಲ್‌ ನೋಟಿಸ್‌!

ಈಗಿನ ಪರಿಸ್ಥಿಯ ಆಧಾರದ ಮೇಲೆ ಅಸ್ಟ್ರಾಜೆನೆಕಾ ಲಸಿಕೆಯಿಂದ ಸಾವಿನ ಅಪಾಯ ತಪ್ಪಿಸುವ ಸಾಧ್ಯತೆ ಕುರಿತು ಈ ಅಧ್ಯಯನವು ಮೊದಲನೆಯದ್ದಾಗಿದೆ ಎಂದು ಪಿಹೆಚ್‌ಇ ಹೇಳಿದೆ.

ಅಧ್ಯಯನವು ಡಿಸೆಂಬರ್ ಮತ್ತು ಏಪ್ರಿಲ್ ನಡುವಿನ ಕೊರೋನಾ -19 ಹೊಸ ರೋಗಲಕ್ಷಣದ ಪ್ರಕರಣಗಳನ್ನು ಮತ್ತು ವ್ಯಾಕ್ಸಿನೇಷನ್ ಸ್ಥಿತಿಯಿಂದ ಪಾಸಿಟಿವ್ ಬಂದು 28 ದಿನಗಳಲ್ಲಿ ಮರಣ ಹೊಂದಿದ ಜನರನ್ನು ಪರಿಶೀಲನೆ ಮಾಡಲಾಗಿದೆ.

ಅಸ್ಟ್ರಾಜೆನೆಕಾ ಲಸಿಕೆಯ ಒಂದು ಡೋಸ್ ಪಡೆದ ಜನರು ಸಾವಿನ ಅಪಾಯದಿಂದ ಶೇ 55%ರಷ್ಟು ರಕ್ಷಿಸಲ್ಪಟ್ಟಿದ್ದಾರೆ. ಈ ಲಸಿಕೆಯ ಒಂದೇ ಡೋಸ್‌ ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಸಾವಿನ ವಿರುದ್ಧ ಸುಮಾರು 80% ರಕ್ಷಣೆಗೆ ಸಮನಾಗಿರುತ್ತದೆ ಎಂದು ಪಿಹೆಚ್‌ಇ ಹೇಳಿಕೆಯಲ್ಲಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!