ಅಮೆರಿಕ ಏರ್‌ಪೋರ್ಟ್‌ನಲ್ಲಿ ಭಾರತೀಯನ ಬ್ಯಾಗ್‌ನಲ್ಲಿ ಸಿಕ್ತು ಸೆಗಣಿ ಬೆರಣಿ

By Suvarna NewsFirst Published May 11, 2021, 2:19 PM IST
Highlights
  • ಅಮೆರಿಕ ಏರ್ಪೋರ್ಟ್‌ನಲ್ಲಿ ಸಿಕ್ತು ಬೆರಣಿ
  • ಭಾರತೀಯನ ಬ್ಯಾಗ್‌ನಲ್ಲಿತ್ತು ಸೆಗಣಿಯ ಗಟ್ಟಿ
  • ಅಲ್ಲೇ ಬ್ಯಾಗ್‌ನಿಂದ ತೆಗೆದು ಬೆರಣಿ ನಾಶ ಮಾಡಿಸ ಸಿಬ್ಬಂದಿ

ಭಾರತೀಯ ಪ್ರಯಾಣಿಕನ ಬ್ಯಾಗ್‌ನಲ್ಲಿದ್ದ ಸೆಗಣಿ ಬೆರಣಿಯನ್ನು ಅಮೆರಿಕ ಏರ್ಪೋರ್ಟ್ ಸಿಬ್ಬಂದಿ ವಶಪಡಿಸಿಕೊಂಡು ನಾಶ ಮಾಡಿದ್ದಾರೆ. ಅಮೆರಿಕದ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆಂಟರು ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತದಿಂದ ಪ್ರಯಾಣಿಕರ ಉಳಿದ ಸಾಮಾನು ಸರಂಜಾಮುಗಳಲ್ಲಿ ಬೆರಣಿ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಸುವಿನ ಸಗಣಿ ಬೆರಣಿಯನ್ನು ಅಮೆರಿಕದಲ್ಲಿ ನಿಷೇಧಿಸಲಾಗಿದೆ. ಸೆಗಣಿ ಹೆಚ್ಚು ಸಾಂಕ್ರಾಮಿಕ ಕಾಲು ಬಾಯಿ ರೋಗದ ಸಂಭಾವ್ಯ ವಾಹಕಗಳಾಗಿವೆ ಎಂಬು ಅವರು ಬಲವಾಗಿ ನಂಬುವುತ್ತಾರೆ. ಅವುಗಳನ್ನು ಸಂಪೂರ್ಣ ನಾಶವಾಗಿವೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಸಿಬಿಪಿ) ಸೋಮವಾರ ತಿಳಿಸಿದೆ.

ಕೊರೋನಾ ಹೋಗ್ಲಿ ಅಂತ ಸೆಗಣಿ ಹಚ್ಚೋರಿಗೆ ವೈದ್ಯರ ಮಹತ್ವದ ಎಚ್ಚರಿಕೆ

ಏಪ್ರಿಲ್ 4 ರಂದು ಏರ್ ಇಂಡಿಯಾ ವಿಮಾನದ ಪ್ರಯಾಣಿಕರೊಬ್ಬರ ಬಾಕಿಯಾದ ಬ್ಯಾಗ್‌ನಲ್ಲಿ ಸಿಬಿಪಿ ಕೃಷಿ ತಜ್ಞರು ಎರಡು ಹಸುವಿನ ಬೆರಣಿ ನೋಡಿದ್ದಾರೆ ಎಂದು ಮಾಧ್ಯಮ ಪ್ರಕಟಣೆ ತಿಳಿಸಿದೆ.

ಕಾಲು ಬಾಯಿ ರೋಗವು ಜಾನುವಾರು ಮಾಲೀಕರು ಹೆಚ್ಚು ಭಯಪಡುವ, ಗಂಭೀರ ಆರ್ಥಿಕ ಪರಿಣಾಮಗಳನ್ನು ಹೊಂದಿರುವ ಪ್ರಾಣಿಗಳ ಕಾಯಿಲೆಗಳಲ್ಲಿ ಒಂದಾಗಿದೆ ಎಂದು ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.

click me!