ದೇಶಾದ್ಯಂತ ಏಕರೂಪದ ರೇಷನ್‌ ಕಾರ್ಡ್‌

Kannadaprabha News   | Asianet News
Published : Dec 20, 2019, 10:50 AM IST
ದೇಶಾದ್ಯಂತ ಏಕರೂಪದ ರೇಷನ್‌ ಕಾರ್ಡ್‌

ಸಾರಾಂಶ

ದೇಶಾದ್ಯಂತ ಏಕರೂಪದ ರೇಷನ್‌ ಕಾರ್ಡ್‌ ಬರಲಿದೆ | ಒಂದೇ ಮಾದರಿಯ ರೇಷನ್‌ ಕಾರ್ಡ್‌ನ ರೂಪರೇಷೆ ಸಿದ್ಧ | ಇನ್ನು ಹೊಸ ಕಾರ್ಡ್‌ ನೀಡಲು ಇದೇ ಮಾದರಿ ಅನುಸರಿಸಿ: ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸೂಚನೆ

ನವದೆಹಲಿ (ಡಿ. 20): ದೇಶಾದ್ಯಂತ ಏಕರೂಪದ ರೇಷನ್‌ ಕಾರ್ಡ್‌ ಇರಬೇಕು. ಒಂದೇ ಮಾದರಿಯಲ್ಲಿ ರೇಷನ್‌ ಕಾರ್ಡ್‌ಗಳು ರೂಪುಗೊಳ್ಳಬೇಕು. ಇನ್ನು ಮುಂದೆ ಹೊಸದಾಗಿ ನೀಡಲಾಗುವ ರೇಷನ್‌ ಕಾರ್ಡ್‌ಗಳು ಇದೇ ಮಾದರಿಯಲ್ಲಿರಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

‘ಏಕ ದೇಶ, ಏಕ ಪಡಿತರ ಕಾರ್ಡ್‌’ ಉಪಕ್ರಮದತ್ತ ಕೇಂದ್ರ ಸರ್ಕಾರ ಇರಿಸಿರುವ ಮೊದಲ ಮಹತ್ವದ ಹೆಜ್ಜೆ ಇದಾಗಿದೆ. ಪ್ರಾಯೋಗಿಕವಾಗಿ ಇದನ್ನು ಸರ್ಕಾರ ಈಗ ಅನುಷ್ಠಾನಗೊಳಿಸುತ್ತಿದೆ. ಜೂನ್‌ 1, 2020ರ ಒಳಗೆ ದೇಶಾದ್ಯಂತ ಇದರ ಜಾರಿಗೆ ಕೇಂದ್ರ ಸರ್ಕಾರ ಬಯಸಿದೆ.

ಜನವರಿಯಲ್ಲಿ ಅಯೋಧ್ಯೆ ದೇಗುಲ ನಿರ್ಮಾಣ ಟ್ರಸ್ಟ್?

ಈ ಉಪಕ್ರಮದ ಪ್ರಕಾರ, ಯಾವುದೇ ರೇಷನ್‌ ಕಾರ್ಡುದಾರನಿರಲಿ, ಆತ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ದೇಶದ ಯಾವುದೇ ಪಡಿತರ ಅಂಗಡಿಯಲ್ಲಿ ತನ್ನ ಬಳಿ ಇರುವ ಪಡಿತರ ಕಾರ್ಡ್‌ ಬಳಸಿಕೊಂಡು ರೇಷನ್‌ ಪಡೆಯಬಹುದಾಗಿದೆ.

‘ಇದು ದೇಶಾದ್ಯಂತ ಜಾರಿಯಾಗಬೇಕು ಎಂದರೆ ರೇಷನ್‌ ಕಾರ್ಡ್‌ಗಳು ಒಂದೇ ಸ್ವರೂಪದಲ್ಲಿ ಇರಬೇಕು. ಅದಕ್ಕೆಂದೇ ಒಂದು ಮಾದರಿ ಸ್ವರೂಪವನ್ನು ಸಿದ್ಧಪಡಿಸಲಾಗಿದ್ದು, ಇದರ ಮೂಲಕ ಆಹಾರ ಭದ್ರತಾ ಕಾಯ್ದೆಯಡಿ ರೇಷನ್‌ ವಿತರಿಸಬಹುದಾಗಿದೆ. ರಾಜ್ಯಗಳು ಇನ್ನು ಮುಂದೆ ವಿತರಿಸುವ ರೇಷನ್‌ ಕಾರ್ಡ್‌ಗಳು ಇದೇ ಮಾದರಿಯಲ್ಲಿರಬೇಕು ಎಂದು ಸೂಚಿಸಲಾಗಿದೆ’ ಎಂದು ಆಹಾರ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಒಂದು ದೇಶ, ಒಂದು ಪಡಿತರ ಚೀಟಿ ಜೂ.1 ರಿಂದ

ಹೊಸ ಕಾರ್ಡ್‌ ಹೀಗಿದೆ:

ಈ ರೇಷನ್‌ ಕಾರ್ಡ್‌ಗಳಲ್ಲಿ ಕಾರ್ಡುದಾರನ ಕನಿಷ್ಠ ವಿವರಗಳು ಇರಬೇಕು. ಅಗತ್ಯಕ್ಕೆ ತಕ್ಕಂತೆ ರಾಜ್ಯ ಸರ್ಕಾರಗಳು ಹೆಚ್ಚಿನ ಮಾಹಿತಿ ಸೇರಿಸಲೂ ಅವಕಾಶವಿದೆ. ಬೇರೆ ರಾಜ್ಯಗಳಲ್ಲೂ ಕಾರ್ಡ್‌ ಬಳಕೆ ಮಾಡುವಂತಾಗಲು ದ್ವಿಭಾಷೆಯಲ್ಲಿ ಅದು ಸಿದ್ಧಗೊಳ್ಳಬೇಕು. ಮಾತೃಭಾಷೆಯ ಜತೆಗೆ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಅದು ವಿವರಗಳನ್ನು ಹೊಂದಿರಬೇಕು.

ಕಾರ್ಡ್‌ ಸಂಖ್ಯೆ ಕಡ್ಡಾಯವಾಗಿ 10 ಅಂಕಿಗಳದ್ದಾಗಿರಬೇಕು. ಮೊದಲ ಎರಡು ಡಿಜಿಟ್‌ಗಳು ರಾಜ್ಯದ ಕೋಡ್‌ (ಸಂಕೇತಾಕ್ಷರ) ಹೊಂದಿರಬೇಕು. ನಂತರ ರೇಷನ್‌ ಕಾರ್ಡುದಾರನ ಸಂಖ್ಯೆ ಇರಬೇಕು.

ಆಹಾರ ಭದ್ರತಾ ಕಾಯ್ದೆಯಡಿ 81.35 ಕೋಟಿ ಜನರಿಗೆ ರೇಷನ್‌ ವಿತರಿಸಬೇಕು ಎಂದು ಸರ್ಕಾರ ಗುರಿ ಹೊಂದಿದ್ದು, 75 ಕೋಟಿ ಫಲಾನುಭವಿಗಳು ಈವರೆಗೆ ಆಯ್ಕೆಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು