ಭಾರತ ಮತ್ತೆ ನಮ್ಮ ಮೇಲೆ ದಾಳಿ ಮಾಡಬಹುದು: ವಿಶ್ವಸಂಸ್ಥೆಗೆ ಪಾಕ್‌

By Suvarna NewsFirst Published Dec 20, 2019, 8:24 AM IST
Highlights

ಭಾರತ ಮತ್ತೆ ನಮ್ಮ ಮೇಲೆ ದಾಳಿ ಮಾಡಬಹುದು: ವಿಶ್ವಸಂಸ್ಥೆಗೆ ಪಾಕ್‌ | ಕಾಶ್ಮೀರ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನಿಸಬಹುದು | ಕ್ಷಿಪಣಿ ರೆಡಿ ಇವೆ: ಪಾಕಿಸ್ತಾನ ವಿದೇಶಾಂಗ ಸಚಿವರಿಂದ ಪತ್ರ

ಇಸ್ಲಾಮಾಬಾದ್‌ (ಡಿ. 20): ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಬಾಲಾಕೋಟ್‌ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದ ಬಳಿಕ ನೆರೆಯ ಪಾಕಿಸ್ತಾನ ಆತಂಕದಲ್ಲೇ ದಿನ ದೂಡುತ್ತಿರುವಂತಿದೆ. ಇದಕ್ಕೆ ಇಂಬು ನೀಡುವಂತೆ ವಿಶ್ವಸಂಸ್ಥೆಗೆ ಪತ್ರ ಬರೆದಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ, ಭಾರತ ತಮ್ಮ ದೇಶದ ಮೇಲೆ ದಾಳಿ ನಡೆಸಬಹುದು ಎಂದು ಅಲವತ್ತುಕೊಂಡಿದ್ದಾರೆ.

ಪೌರತ್ವ ಕಾಯ್ದೆ: ಯುಎನ್ ಜನಾಭಿಪ್ರಾಯ ಸಂಗ್ರಹಕ್ಕೆ ಮಮತಾ ಆಗ್ರಹ!

ಕಾಶ್ಮೀರದಲ್ಲಿ ಗಂಭೀರ ಪರಿಸ್ಥಿತಿ ಇದೆ. ಅದರಿಂದ ವಿಶ್ವ ಸಮುದಾಯದ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಬಹುದು. ಈಗಾಗಲೇ ಕ್ಷಿಪಣಿಗಳನ್ನು ಭಾರತ ನಿಯೋಜಿಸಿದೆ. ವಿವಿಧ ಮಾದರಿಯ ಹಲವು ಕ್ಷಿಪಣಿಗಳನ್ನು ಪರೀಕ್ಷೆಗೆ ಒಳಪಡಿಸಿದೆ ಎಂದು ಹೇಳಿದ್ದಾರೆ.

ಪೌರತ್ವ ಕಿಚ್ಚು: ಅಮಿತ್ ಶಾ ಎಮರ್ಜೆನ್ಸಿ ಭದ್ರತಾ ಸಭೆ!

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ದೊರೆಯುತ್ತಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಗೊಳಿಸಿದ ಬಳಿಕ ಖುರೇಷಿ ಅವರು ಬರೆದಿರುವ 7ನೇ ಪತ್ರ ಇದಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಅವರಿಗೆ ಡಿ.12ರಂದು ಖುರೇಷಿ ಕೊನೆಯ ಪತ್ರ ಬರೆದಿದ್ದಾರೆ.

click me!