ವಿಶ್ವಾಸ ಮತಕ್ಕೂ ಮುನ್ನ ಮತ್ತೊರ್ವ MLA ರಾಜೀನಾಮೆ; ಪುದುಚೇರಿ ಕಾಂಗ್ರೆಸ್‌ನಲ್ಲಿ ತಳಮಳ!

Published : Feb 21, 2021, 04:01 PM ISTUpdated : Feb 21, 2021, 05:19 PM IST
ವಿಶ್ವಾಸ ಮತಕ್ಕೂ ಮುನ್ನ ಮತ್ತೊರ್ವ MLA ರಾಜೀನಾಮೆ; ಪುದುಚೇರಿ ಕಾಂಗ್ರೆಸ್‌ನಲ್ಲಿ ತಳಮಳ!

ಸಾರಾಂಶ

ರಾಹುಲ್ ಗಾಂಧಿ ಭೇಟಿ ಬಳಿಕ ಪುದುಚೇರಿ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ. ರಾಹುಲ್ ಭೇಟಿ ಮರುದಿನವೇ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. ಇದೀಗ ವಿಶ್ವಾಸ ಮತಕ್ಕೂ ಮುನ್ನ ಮತ್ತೊರ್ವ ಶಾಸಕ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ.

ಪುದುಚೇರಿ(ಫೆ.21):  ಪುದುಚೇರಿ ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ ನಡೆಯುತ್ತಿದೆ. ಪಕ್ಷದ ನಡತೆಯಿಂದ ಬೇಸತ್ತು ಒಬ್ಬರ ಹಿಂದೊಬ್ಬರು ನಾಯಕರು ರಾಜೀನಾಮೆ ನೀಡುತ್ತಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಹುಮತವನ್ನೇ ಕಸಿದುಕೊಂಡಿದೆ.  ಇದೀಗ ಮತ್ತೋರ್ವ ಶಾಸಕ ರಾಜೀನಾಮೆ ನೀಡಿದ್ದು, ಪುದುಚೇರಿ ಶಾಸಕಾಂಗ ಸಭೆ ಸಂಖ್ಯಾಬಲ 13ಕ್ಕೆ ಕುಸಿದಿದೆ.

ಫೆ.22ಕ್ಕೆ ವಿಶ್ವಾಸಮತ ಯಾಚನೆಗೆ ಪುದುಚೇರಿ ಸಿಎಂಗೆ ಸೂಚನೆ.

ಪುದುಚೇರಿ ಕಾಂಗ್ರೆಸ್‌ನಲ್ಲಿ 4 ಬಾರಿ ಶಾಸಕನಾಗಿ ಆಯ್ಕೆಯಾದ ಕೆ ಲಕ್ಷ್ಮಿನಾರಾಯಣನ್ ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಡತೆ ಹಾಗೂ ಸರಿಯಾದ ಸ್ಥಾನ ಮಾನ ನೀಡಿದ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ ಕೆ ಲಕ್ಷ್ಮಿನಾರಾಯಣನ್ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

ಈ ರಾಜೀನಾಮೆಯಲ್ಲಿ ಪುದುಚೇರಿ ಶಾಸಕಾಂಗದ ಸಂಖ್ಯಾಬಲ 27 ರಿಂದ 13ಕ್ಕೆ ಕುಸಿದಿದೆ.  ಕಾಂಗ್ರೆಸ್‌ ಹಿರಿಯ ನಾಯಕ, 4 ಬಾರಿ ಗೆದ್ದಿದ್ದರೂ, ಒಂದೇ ಒಂದು ಭಾರಿ ಸಚಿವ ಸ್ಥಾನ ನೀಡಿಲ್ಲ. ಬೇರೆ ಪಕ್ಷ ಸೇರುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೆ ಲಕ್ಷ್ಮಿನಾರಾಯಣನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು