
ಜಾರ್ಖಂಡ್(ಫೆ.21): ಕೇಂದ್ರ ಸರ್ಕಾರದ ಕೃಷಿ ಮಸೂದೆ ಅಸ್ತ್ರವನ್ನು ಮುಂದಿಟ್ಟುಕೊಂಡಿರುವ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನಾ ರ್ಯಾಲಿ ಆಯೋಜಿಸುತ್ತಿದೆ. ಹೀಗೆ ಜಾರ್ಖಂಡ್ ಸರೈಕೇಲಾದಲ್ಲಿ ಕಾಂಗ್ರೆಸ್ ಬಹುದೊಡ್ಡ ರ್ಯಾಲಿ ಆಯೋಜಿಸಿದೆ. ಈ ರ್ಯಾಲಿಗೆ ಕಾಂಗ್ರೆಸ್ ಮುಖಂಡರು, ಬಳುಕುವ ಬಳ್ಳಿ ಡ್ಯಾನ್ಸರ್ ಕರೆತಂದು ವೇದಿಕೆಯಲ್ಲಿ ಡ್ಯಾನ್ಸ್ ಮಾಡಿಸಿದ್ದಾರೆ. ಇದು ವಿವಾದಕ್ಕೂ ಕಾರಣವಾಗಿದೆ.
ರಾಜ್ ಕುಮಾರ್ ಪ್ರತಿಮೆ ಬಗ್ಗೆ ನಾಲಿಗೆ ಹರಿಬಿಟ್ಟ ಹ್ಯಾರಿಸ್, ಬಳಿಕ ಕ್ಷಮೆಯಾಚನೆ.
ಕಾಂಗ್ರೆಸ್ ನಾಯಕರು ಇದ್ದ ವೇದಿಕೆಯಲ್ಲಿ ಯುವತಿ ಬಾಲಿವುಡ್‌ನ ಲೈಲಾ ಮೇ ಲೈಲಾ ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಇತ್ತ ಪ್ರತಿಭಟನಾ ರ್ಯಾಲಿಯಲ್ಲಿ ಸೇರಿದ ಜನರು ಶಿಳ್ಳೆ ಹೊಡೆದು ಆನಂದಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗಿದೆ. ಇತ್ತ ಜಾರ್ಖಂಡ್ ಬಿಜೆಪಿ ಈ ವಿಡಿಯೋವನ್ನು ಟ್ವೀಟ್ ಮಾಡಿದೆ. ಇದು ಕಾಂಗ್ರೆಸ್ ಸಂಸ್ಕೃತಿ, ಮಹಿಳಾ ಸಬಲೀಕರಣ ಎಂದು ವ್ಯಂಗ್ಯವಾಡಿದೆ.
ಪೆಟ್ರೋಲ್ ಬೆಲೆ ಏರಿಕೆ: ವಿರೋಧಿಸದ್ದಕ್ಕೆ ಬಿಗ್‌ಬಿ, ಅಕ್ಷಯ್‌ಗೆ ಕಾಂಗ್ರೆಸ್ ಬೆದರಿಕೆ
ಮುಂದಿನ ಕಾಂಗ್ರೆಸ್ ರ್ಯಾಲಿಯಲ್ಲಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಬರುತ್ತಾರಾ ಎಂದು ಬಿಜೆಪಿ ಪ್ರಶ್ನಿಸಿದೆ. ಇನ್ನು ಕೃಷಿ ಕಾಯ್ದೆ ವಿರೋಧಿಸಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆಯೋಜಿಸಿದ ಜನಾಕ್ರೋಶ ರ್ಯಾಲಿಯ ವಿಡಿಯೋ ಎಂದು ಬಿಜೆಪಿ ನಾಯಕ ಸುರೇಶ್ ನಕುವಾ ಟ್ವೀಟ್ ಮಾಡಿದ್ದಾರೆ.
ಇನ್ನು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ ಈ ರ್ಯಾಲಿಯಲ್ಲಿ ಯುವತಿಯರನ್ನು ಕರೆಸಿ ಈ ರೀತಿ ಡ್ಯಾನ್ಸ್ ಮಾಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ