
ಜೈಪುರ(ಫೆ.21): ರೈತ ಪ್ರತಿಭಟನೆ ಬೆಂಬಲಿ ರೈತ ಸಮಾವೇಶ ನಡೆಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಇದರಂತೆ ಆಯಾ ರಾಜ್ಯದ ಕಾಂಗ್ರೆಸ್ ರೈತ ಸಮಾವೇಶ ಆಯೋಜಿಸುತ್ತಿದೆ. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ರೈತ ಸಮಾವೇಶ ಪಕ್ಷಕ್ಕೆ ಇರಿಸುಮುರಿಸು ತಂದಿದೆ.
ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ವಿಡಿಯೋ ವೈರಲ್
ಇದಕ್ಕೆ ಮುಖ್ಯ ಕಾರಣ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಣ ಹಾಗೂ ಬಂಡಾಯ ಎದ್ದು ಮತ್ತೆ ಪಕ್ಷದಲ್ಲಿ ಮುಂದುವರಿದಿರುವ ಸಚಿನ್ ಪೈಲೆಟ್ ಬಣ. ರಾಹುಲ್ ಗಾಂಧಿ ಸೂಚನೆಯಂತೆ ರಾಜಸ್ಥಾನದಲ್ಲಿ ಫೆಬ್ರವರಿ 13 ರಿಂದ 23ರವರೆಗೆ ಹಲವು ಜಿಲ್ಲೆಗಳಲ್ಲಿ ರೈತ ಸಮಾವೇಶ ಹಾಗೂ ರ್ಯಾಲಿಯನ್ನು ಕಾಂಗ್ರೆಸ್ ಆಯೋಜಿಸಿದೆ. ಈ ಸಮಾವೇಶಕ್ಕೆ ಒಂದು ಬಣ ಹಾಜರಾದರೆ ಮತ್ತೊಂದು ಬಣ ಗೈರಾಗಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮುಂದಾಳತ್ವ ವಹಿಸಿದ ರ್ಯಾಲಿಗೆ ಸಚಿನ್ ಪೈಲೆಟ್ ಬಣ ಗೈರಾಗಿದೆ. ಇನ್ನು ಸಚಿನ್ ಪೈಲೆಟ್ ಮುಂದಾಳತ್ವ ವಹಿಸಿ ಆಯೋಜಿಸಿದ ಸಮಾವೇಶಗಳಲ್ಲಿ ಅಶೋಕ್ ಗೆಹ್ಲೋಟ್ ಬಣ ಗೈರಾಗಿದೆ. ಇತ್ತೀಚೆಗೆ ಸಚಿನ್ ಪೈಲೆಟ್ ಆಯೋಜಿಸಿದ ರ್ಯಾಲಿಗೆ ರಾಜ್ಯ ಕಾಂಗ್ರೆಸ್‌ನಿಂಗ ಕೇವಲ 17 ಮಂದಿ ಭಾಗವಿಸಿದ್ದರು.
ಇನ್ನು ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಆಯೋಜಿಸಿದ ರೈತ ಸಮಾವೇಶಕ್ಕೆ, ಸಚಿನ್ ಪೈಲೆಟ್ ಬಣ ಸಂಪೂರ್ಣ ಗೈರಾಗಿದೆ. ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿನ್ ಪೈಲೆಟ್, ಕಾಂಗ್ರೆಸ್ ಸರ್ಕಾರಕ್ಕೆ ಪರ್ಯಾವಾಗಿ ಯಾವುದೇ ರ್ಯಾಲಿ ಆಯೋಜಿಸುತ್ತಿಲ್ಲ. ನಾವು ರೈತರನ್ನು ಬೆಂಬಲಿಸಲು ರ್ಯಾಲಿ ಆಯೋಜಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ