ಕಾಂಗ್ರೆಸ್​ನ​ 72 ವರ್ಷಗಳ ದಾಖಲೆ ಮುರಿದು ಬೀಗಿದ ಪ್ರಧಾನಿ ನರೇಂದ್ರ ಮೋದಿ: ಏನಿದು ರೆಕಾರ್ಡ್​

Published : Jun 02, 2026, 08:43 PM IST
Nehru and PM Modi

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 10 ರಂದು, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸತತ ಅತಿ ದೀರ್ಘ ಅವಧಿಯ ಪ್ರಧಾನಿ ಎಂಬ ದಾಖಲೆಯನ್ನು ಮುರಿಯಲಿದ್ದಾರೆ. 2014ರಲ್ಲಿ ಅಧಿಕಾರ ವಹಿಸಿಕೊಂಡ ಮೋದಿ, 4,397 ದಿನಗಳ ನೆಹರೂ ಅವರ ನಿರಂತರ ಅಧಿಕಾರಾವಧಿಯನ್ನು ಮೀರಿಸಲಿದ್ದು, ಈ ಮೂಲಕ ಭಾರತೀಯ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಇದಾಗಲೇ ಕೆಲವು ದಾಖಲೆಗಳನ್ನು ಬರೆದಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್​​ನ 72 ವರ್ಷಗಳ ಇತಿಹಾಸವನ್ನು ಮತ್ತೊಮ್ಮೆ ಮೋದಿ ಮುರಿಯಲಿದ್ದಾರೆ. ಇದು ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರಿನಲ್ಲಿ ಇರುವ ರೆಕಾರ್ಡ್​ ಆಗಿದೆ. ಇದೇ 10ರಂದು ನರೇಂದ್ರ ಮೋದಿ ಅವರು ಈ ದಾಖಲೆ ಮುರಿಯಲಿದ್ದಾರೆ. ಈ ಮೂಲಕ ಭಾರತೀಯ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಲಿದ್ದಾರೆ.

ಅತಿ ದೀರ್ಘ ಅವಧಿಯ ಪ್ರಧಾನಿ

ಅದೇನೆಂದರೆ, ಇಲ್ಲಿಯವರೆಗೆ ಭಾರತದ ಸತತ ಅತಿ ದೀರ್ಘ ಅವಧಿಯ ಪ್ರಧಾನಿ ಎಂಬ ಖ್ಯಾತಿ ಇದದ್ದು ಜವಾಹರಲಾಲ ನೆಹರೂ ಅವರಿಗೆ. 1952 ರ ಮೇ 13ರಂದು ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ ನೆಹರು ದೇಶದ ಮೊದಲ ಚುನಾಯಿತ ಪ್ರಧಾನಿಯಾದರು. ನಂತರ ಅವರು ಮೇ 27, 1964 ರಂದು ನಿಧನರಾಗುವವರೆಗೂ ನಿರಂತರವಾಗಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ, ಅವರ ಅಧಿಕಾರಾವಧಿ 4,397 ದಿನಗಳು. ಈ ದಾಖಲೆ ಇದುವರೆಗೆ ಯಾರೂ ಮುರಿದಿರಲಿಲ್ಲ. ಇದೀಗ ಜೂನ್​ 10ರಂದು ಆ ದಾಖಲೆಯನ್ನು ನರೇಂದ್ರ ಮೋದಿ ಮುರಿಯಲಿದ್ದಾರೆ. 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ ಅವರು, ಜೂನ್ 9, 2026 ರಂದು ಪ್ರಧಾನಿಯಾಗಿ 4,397 ದಿನಗಳು ಮುಗಿಯುತ್ತವೆ. ಈ ಹಿನ್ನೆಲೆಯಲ್ಲಿ ಸತತವಾಗಿ ಪ್ರಧಾನಿಯಾಗಿರುವ ದಾಖಲೆಯನ್ನು ಜೂನ್​ 10 ಮುರಿಯಲಿದ್ದಾರೆ.

ಇಂದಿರಾಗಾಂಧಿ ದಾಖಲೆ ಮುರಿದಿದ್ದರು

ಅಷ್ಟಕ್ಕೂ ಇದಾಗಲೇ ಮೋದಿ ಅವರು, 2025ರ ಜುಲೈನಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯವರ 4,077 ದಿನಗಳ ದಾಖಲೆಯನ್ನು ಮುರಿದಿದ್ದರು. ಆಗ ನೆಹರೂ ಬಳಿಕ ಇಂದಿರಾಗಾಂಧಿ ಹೆಚ್ಚು ಅವಧಿಯ ಪ್ರಧಾನಿ ಎಂಬ ಸ್ಥಾನವನ್ನು ಮೋದಿ ಕಸಿದುಕೊಂಡು ಎರಡನೆಯ ಸ್ಥಾನಕ್ಕೆ ಹೋಗಿದ್ದರು. ಈಗ 2ರಿಂದ 1ನೇ ಸ್ಥಾನಕ್ಕೆ ಏರಲಿದ್ದಾರೆ.

 

ದೀರ್ಘ ಅವಧಿ ನೆಹರು ಹೆಸರಲ್ಲಿ

ಸೆಪ್ಟೆಂಬರ್ 2, 1946 ರಂದು, ನೆಹರು ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರವನ್ನು ರಚಿಸಲಾಯಿತು, ಅದರಲ್ಲಿ ಅವರು ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಈ ಸ್ಥಾನವು ಪ್ರಾಯೋಗಿಕವಾಗಿ ಪ್ರಧಾನ ಮಂತ್ರಿ ಹುದ್ದೆಗೆ ಸಮಾನವಾಗಿತ್ತು. ಆಗಸ್ಟ್ 15, 1947 ರಂದು ಭಾರತ ಸ್ವಾತಂತ್ರ್ಯ ಪಡೆದಾಗ, ಆಗಿನ ಗವರ್ನರ್-ಜನರಲ್ ಲಾರ್ಡ್ ಮೌಂಟ್ ಬ್ಯಾಟನ್, ನೆಹರು ಅವರನ್ನು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದನ್ನು ಗಣನೆಗೆ ತೆಗೆದುಕೊಂಡರೆ, ಒಟ್ಟಾರೆಯಾಗಿ ಇನ್ನೂ ಜವಾಹರಲಾಲ್ ನೆಹರು ಅವರೇ ನಂಬರ್​ 1 ಆಗಿದ್ದಾರೆ. ಅವರ ಒಟ್ಟು ಅಧಿಕಾರಾವಧಿಯು ಸುಮಾರು 6,131 ದಿನಗಳಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಂದು ಸಿಗರೇಟ್‌ಗಿಂತಲೂ ಕಡಿಮೆ ಬೆಲೆಗೆ ಬ್ರ್ಯಾಂಡೆಡ್ ಸೈಕಲ್; 88 ವರ್ಷಗಳ ಹಿಂದಿನ 'ಸೈಕಲ್ ಖರೀದಿ ಬಿಲ್' ವೈರಲ್!
ತಮಿಳುನಾಡಿನಲ್ಲಿ ಮತ್ತೆ ಬಿರುಗಾಳಿ? ವಿಜಯ್ ಸಿಎಂ ಆಗಿರೋ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟ ರೆಡಿ, ಅಜಿತ್ ಅಲ್ಲ!