ಮಸೀದಿಗಳಿಗೆ ಟಾರ್ಪಾಲ್‌ ಮುಚ್ಚಿ ಉ.ಪ್ರ.ದಲ್ಲಿ ಹೋಳಿ: ಕೋಮುಸಂಘರ್ಷ ತಡೆಗೆ ಸರ್ಕಾರದ ಐಡಿಯಾ

ಇತ್ತೀಚಿನ ದಿನಗಳಲ್ಲಿ ಹಲವು ಹಿಂದೂ- ಮುಸ್ಲಿಂ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಉತ್ತರಪ್ರದೇಶದಲ್ಲಿ ಹೋಳಿ ಹಬ್ಬದಂದು ನಡೆಯಬಹುದಾದ ಯಾವುದೇ ಅಹಿತಕರ ತಡೆಯಲು ಹಲವು ನಗರಗಳಲ್ಲಿ ಮಸೀದಿಗಳಿಗೆ ಟಾರ್ಪಾಲಿನ್‌ ಹೊದಿಸಲಾಗಿದೆ. 

On Holi eve mosques covered sensitive zones fortified in uttar pradesh

ಲಖನೌ (ಮಾ.14): ಇತ್ತೀಚಿನ ದಿನಗಳಲ್ಲಿ ಹಲವು ಹಿಂದೂ- ಮುಸ್ಲಿಂ ಸಂಘರ್ಷಗಳಿಗೆ ಸಾಕ್ಷಿಯಾಗಿದ್ದ ಉತ್ತರಪ್ರದೇಶದಲ್ಲಿ ಹೋಳಿ ಹಬ್ಬದಂದು ನಡೆಯಬಹುದಾದ ಯಾವುದೇ ಅಹಿತಕರ ತಡೆಯಲು ಹಲವು ನಗರಗಳಲ್ಲಿ ಮಸೀದಿಗಳಿಗೆ ಟಾರ್ಪಾಲಿನ್‌ ಹೊದಿಸಲಾಗಿದೆ. ಬಣ್ಣಗಳಿಂದ ರಕ್ಷಣೆ ಒದಗಿಸುವ ಸಲುವಾಗಿ ಸಂಭಲ್‌ನ ಜಾಮಾ ಮಸೀದಿ ಸೇರಿ ಎಲ್ಲಾ ಪ್ರಮುಖ ಮಸೀದಿಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಿ ರಕ್ಷಣೆ ನೀಡಲಾಗಿದೆ. 

ಮುಸ್ಲಿಮರ ಪಾಲಿಗೆ ಪವಿತ್ರವಾದ ಶುಕ್ರವಾರದಂದೇ ಬಣ್ಣಗಳ ಹಬ್ಬವೂ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಮಸೀದಿಗಳಿಗೆ ಬಣ್ಣ ಎರಚುವ ಘಟನೆಗಳನ್ನು ತಡೆಯಲು ಸ್ಥಳೀಯ ಆಡಳಿತ ಹೊರಡಿಸಿದ ಆದೇಶದ ಮೇರೆಗೆ ಶಹಜಹಾನ್‌ಪುರ ಜಿಲ್ಲೆಯ 67 ಹಾಗೂ ಅಲೀಗಢದ ಎಲ್ಲಾ ಮಸೀದಿಗಳಿಗೆ ಹೀಗೆ ಮಾಡಲಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಹೋಳಿ ಆಚರಣೆ ಹಾಗೂ ಮುಸ್ಲಿಮರ ಪ್ರಾರ್ಥನೆಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಜೊತೆಗೆ, ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಸಂಘರ್ಷ ತಡೆಗೆ ಗಸ್ತು, ಡ್ರೋನ್‌ ನಿಯೋಜನೆ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜೊತೆಗೆ, ಸಾಮಾಜಿಕ ಮಾಧ್ಯಮಗಳ ಮೇಲೂ ಕಣ್ಣಿರಿಸಿದ್ದಾರೆ.

Latest Videos

ಮುಂಬೈ, ದೆಹಲಿ ಮಾದರಿ ಹೋಳಿ: ಇದೇ ಮೊದಲ ಬಾರಿಗೆ ಮುಂಬೈ, ದೆಹಲಿ ಮಾದರಿಯ ಹೋಳಿಯಾಟಕ್ಕೆ ಕೊಪ್ಪಳದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಅಥ್ಲೆಟಿಕ್ಸ್ ಆಯೋಜನೆ ಮಾಡಿರುವ ಈ ಹೋಳಿಯಾಟದ ಕಲ್ಪನೆ ಮತ್ತು ಉಸ್ತುವಾರಿಯನ್ನು ಸಂಸದ ರಾಜಶೇಖರ ಹಿಟ್ನಾಳ ನೋಡಿಕೊಳ್ಳುತ್ತಿದ್ದಾರೆ. ಅವರೇ ಮುತುವರ್ಜಿ ವಹಿಸಿ ಮುಂಬೈ, ದೆಹಲಿ ಮಾದರಿಯ ಹೋಳಿಯಾಟಕ್ಕೆ ಸಿದ್ಧತೆ ಮಾಡಿಸಿದ್ದಾರೆ. ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಮಾ. 14ರಂದು ನಡೆಯುವ ಹೋಳಿ ಹಬ್ಬದ ಅಂಗವಾಗಿ ರೇನ್ ಡ್ಯಾನ್ಸ್‌ಗಾಗಿ ಸಿದ್ಧತೆ ಮಾಡಲಾಗಿದೆ. 

ಪ್ರಧಾನಿ ಮೋದಿ ಕಾಲಿಡುತ್ತಿದ್ದಂತೆ ಮಾರಿಷಸ್‌ನಲ್ಲಿ ಮಳೆ: ಆರೋಗ್ಯ ಸಚಿವ ಸಂತಸ

ಬೃಹತ್ ಕಬ್ಬಿಣದ ಚೌಕಟ್ಟು ನಿರ್ಮಿಸಿ, ಅವುಗಳಿಗೆ ಪೈಪ್‌ಲೈನ್ ಅಳವಡಿಸಿ, ಪಂಪ್ ಸಹ ಅಳವಡಿಸಲಾಗಿದೆ. ಏಕಕಾಲಕ್ಕೆ ನೂರಾರು ಜನರು ರೇನ್ ಡ್ಯಾನ್ಸ್ ಮಾಡುವ ವ್ಯವಸ್ಥೆ ಮಾಡಿದ್ದು, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿದೆ. ಬಣ್ಣ ಆಡಲು ಬರುವವರು ಬಣ್ಣ ತರುವಂತಿಲ್ಲ. ಸಾವಯವ ಬಣ್ಣವನ್ನು ಅಲ್ಲಿಯೇ ವಿತರಣೆ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಕಳಪೆ ಬಣ್ಣಗಳನ್ನು ತರದಂತೆ ಮನವಿ ಮಾಡಲಾಗಿದೆ.

click me!