ಎಸಿ ಕಂಪ್ರೆಷರ್‌ ಸ್ಫೋಟಗೊಂಡು ಮೆಕಾನಿಕ್‌ ಸಾವು, ಬೈಕರ್ ಜಸ್ಟ್‌ ಮಿಸ್: ಭಯಾನಕ ವೀಡಿಯೋ

Published : Mar 13, 2025, 07:58 PM ISTUpdated : Mar 14, 2025, 10:32 AM IST
 ಎಸಿ ಕಂಪ್ರೆಷರ್‌ ಸ್ಫೋಟಗೊಂಡು ಮೆಕಾನಿಕ್‌ ಸಾವು, ಬೈಕರ್ ಜಸ್ಟ್‌ ಮಿಸ್: ಭಯಾನಕ ವೀಡಿಯೋ

ಸಾರಾಂಶ

ದೆಹಲಿಯಲ್ಲಿ ಎಸಿ ಕಂಪ್ರೆಷರ್ ಸ್ಫೋಟಗೊಂಡು ಮೆಕಾನಿಕ್ ಸಾವನ್ನಪ್ಪಿದ್ದಾರೆ. ರಿಪೇರಿ ವೇಳೆ ಸಂಭವಿಸಿದ ಈ ದುರ್ಘಟನೆಯಲ್ಲಿ ಬೈಕರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ವೈರಲ್ ಆಗಿದೆ.

ಎಸಿಯ ಕಂಪ್ರೆಷರ್‌ ಸ್ಫೋಟಗೊಂಡು ಮೆಕಾನಿಕ್ ಸಾವನ್ನಪ್ಪಿ, ಬೈಕರ್ ಒಬ್ಬ ಸಾವಿನ ದವಡೆಯಿಂದ ಕೂದಲೆಳೆ ಅಂತರದಲ್ಲಿ ಪಾರಾದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. 

ರಿಪೇರಿ ವೇಳೆ ಸ್ಫೋಟಗೊಂಡ ಎಸಿ
 ಎಸಿ ರಿಪೇರಿ ಕೆಲಸ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಭಯಾನಕ ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್‌ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯ ಕೃಷ್ಣಾ ನಗರದಲ್ಲಿ ಈ ಘಟನೆ ನಡೆದಿದೆ. 

ಏರ್‌ ಕಂಡೀಷನ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮೆಕಾನಿಕ್ ಸಾವು
ಮೃತ ಮೆಕಾನಿಕ್‌ ಅವರನ್ನು ಮನೋಹರ್ ಲಾಲ್ ಎಂದು ಗುರುತಿಸಲಾಗಿದೆ. ಇವರು ಏರ್‌ ಕಂಡೀಷನ್‌ ಘಟಕವೊಂದರಲ್ಲಿ ಕೆಲಸ ಮಾಡುತ್ತಿದ್ದರು ಘಟನೆ ನಡೆದ ವೇಳೆ ಮತ್ತೊಬ್ಬರು ಸಮೀಪದಲ್ಲಿ ನಿಲ್ಲಿಸಿದ್ದ ಬೈಕ್ ಮೇಲೇ ಕುಳಿತಿದ್ದರು. ಅದೃಷ್ಟವಶಾತ್ ಅವರು ಈ ಅನಾಹುತದಿಂದ ಪಾರಾಗಿದ್ದಾರೆ. ಸ್ಫೋಟ ಸಂಭವಿಸಿದ ವೇಳೆ ಮೆಕಾನಿಕ್ ಮನೋಹರ್‌ ಲಾಲ್ ಅವರು ಸ್ಫೋಟದ ತೀವ್ರತೆಗೆ ನೆಲಕ್ಕೆ ತಳ್ಳಲ್ಪಟ್ಟಿದ್ದಾರೆ. ಇದೇ ವೇಳೆ ಅಲ್ಲಿದ್ದ ಬೈಕ್ ಸವಾರ ಸುರಕ್ಷಿತ ಸ್ಥಳಕ್ಕೆ ಹೋಗಿದ್ದರಿಂದ ಅಪಾಯದಿಂದ ಎಸ್ಕೇಪ್ ಆಗಿದ್ದಾರೆ. ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದ ಮನೋಹರ್‌ ಲಾಲ್ ಅವರು ನೋವಿನಿಂದ ಒದ್ದಾಡುತ್ತಾ ಎದ್ದು ನಿಲ್ಲಲ್ಲು ಪ್ರಯತ್ನಿಸಿದ್ದಾರೆ. ಅಲ್ಲದೇ ಎದ್ದು ನಿಂತು ಎರಡು ಹೆಜ್ಜೆ ಇಡಲು ಪ್ರಯತ್ನಿಸಿದ್ದು, ಅಷ್ಟರಲ್ಲಿ ಕುಸಿದು ಬಿದ್ದಿದ್ದಾರೆ. 

ಗ್ಯಾರೇಜ್​ ನಡೆಸುವ ಮೆಕಾನಿಕ್​ನ ಮಗಳು ಫಸ್ಟ್​ ರ‍್ಯಾಂಕ್

ಪ್ರಜ್ಞಾಹೀನರಾಗಿ ಕುಸಿದು ಬಿದ್ದ ಮನೋಹರ್ ಲಾಲ್ ಅವರ ಬಳಿ ವ್ಯಕ್ತಿಯೊಬ್ಬ ಓಡಿ ಬಂದಿದ್ದಾರೆ. ನಂತರ ಅಲ್ಲಿ ಘಟನೆ ತಿಳಿದು ಸಾಕಷ್ಟು ಜನ ಸೇರಿದ್ದು, ಮನೋಹರ್ ಲಾಲ್ ದೇಹದಲ್ಲಿ ಯಾವುದೇ ಚಲನೆ ಕಾಣದಾಗಿದೆ.  ಎಸಿ ಕಂಪ್ರೇಷರ್ ಸ್ಪೋಟಗೊಳ್ಳುವುದು ಇದೇ ಮೊದಲಲ್ಲ, ಕೆಲ ದಿನಗಳ ಹಿಂದೆ ಪಂಜಾಬ್‌ನ ಮೊಹಾಲಿಯ ನೀಲಂ ಆಸ್ಪತ್ರೆಯಲ್ಲಿ ಎಸಿ ಸ್ಫೋಟಗೊಂಡು ಒಬ್ಬರು ಗಾಯಗೊಂಡು ಇನ್ನೊಬ್ಬರು ಸಾವನ್ನಪ್ಪಿದ್ದರು. ಈ ಘಟನೆಯೂ ಎಸಿ ರಿಪೇರಿ ಮಾಡುತ್ತಿದ್ದಾಗಲೇ ನಡೆದಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ