ಮೋದಿ ಟೆಫ್ಲಾನ್‌ ರೀತಿ, ವೈಯಕ್ತಿಕ ನಿಂದನೆ ಮಾಡಿದ್ರೆ ಅದು ವಿಪಕ್ಷಗಳಿಗೆ ಹಾನಿ: ಓಮರ್‌ ಅಬ್ದುಲ್ಲಾ!

By Santosh NaikFirst Published Mar 17, 2024, 10:17 AM IST
Highlights

ಪ್ರಧಾನಿ ನರೇಂದ್ರ ಮೋದಿ ನಾನ್‌ ಸ್ಟಿಕ್‌ ತವಾದ ಮೇಲಿರುವ ಟೆಫ್ಲಾನ್‌ ಕೋಟಿಂಗ್‌ ರೀತಿ. ಅವರ ಮೇಲೆ ಯಾವುದೇ ವೈಯಕ್ತಿಕ ನಿಂದನೆ ಮಾಡಿದ್ರೂ ಅದೂ ತಿರುಗಿ ವಿಪಕ್ಷಗಳಿಗೆ ತಾಗುತ್ತದೆ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಓಮರ್‌ ಅಬ್ದುಲ್ಲಾ ಹೇಳಿದ್ದಾರೆ.
 

ನವದೆಹಲಿ (ಮಾ.17): ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ, ಶನಿವಾರ ದೇಶದ ವಿಪಕ್ಷಗಳು ಎಲ್ಲಿ ಮೋಸ ಹೋಗುತ್ತಿದೆ ಎನ್ನುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಪ್ರತಿ ಬಾರಿಯೂ ವಿಪಕ್ಷಗಳು ಪ್ರಧಾನಿ ಮೋದಿ ಅವರ ಮೇಲೆ ವೈಯಕ್ತಿಕ ನಿಂದನೆ ಮಾಡಲು ಮುಂದಾಗುತ್ತದೆ. ಆದರೆ, ಇದು ಬೂಮರಾಂಗ್‌ ಆಗುತ್ತದೆ ಎಂದು ಹೇಳಿದ್ದಾರೆ. ಬೂಮರಾಂಗ್‌ ಎಂದರೆ, ಅವರು ಹೇಳಿದ ತಿರುಗಿ ಅವರಿಗೆ ವಾಪಾಸ್‌ ಬರುವುದು. ಇಂಡಿಯಾ ಟುಡೇ ಕಾನ್ಕ್ಲೇವ್ 2024 ರಲ್ಲಿ ಮಾತನಾಡಿದ ಒಮರ್ ಅಬ್ದುಲ್ಲಾ, ಹಿರಿಯ ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ದೆಹಲಿ ಶಿಕ್ಷಣ ಸಚಿವ ಐತಿಶಿ ಅವರೊಂದಿಗೆ ಮುಂಬರುವ ಚುನಾವಣೆಗೆ ಪ್ರತಿಪಕ್ಷ ಇಂಡಿಯಾ ಮೈತ್ರಿಯ ಕಾರ್ಯತಂತ್ರದ ಕುರಿತು ಚರ್ಚಿಸಿದರು.

ನಾವು ಕಾಲ ಕಾಲಕ್ಕೆ ಮಾಡುವ ಒಂದು ತಪ್ಪು ಏನೆಂದರೆ, ನಾವು ಸಂಪೂರ್ಣ ವಿಚಾರವನ್ನು ತಿಳಿಸುವ ಹಾದಿಯಲ್ಲಿ ಮೋಧಿ ವಿರೋಧಿ ಎಂದೇ ಗುರುತಿಸಿಕೊಳ್ಳುತ್ತಿದ್ದೇವೆ. ಪ್ರತಿ ಬಾರಿ ನಾವು ಪ್ರಧಾನಿ ಮೋದಿಯವರ ಮೇಲೆ ವೈಯಕ್ತಿಕ ದಾಳಿಯನ್ನು ಪ್ರಾರಂಭಿಸಿದಾಗ ಅದು ನಮ್ಮ ಮೇಲೆ ಬೂಮರಾಂಗ್ ಆಗುತ್ತದೆ. ಅದೀಗ ಕೆಲಸ ಮಾಡೋದಿಲ್ಲ. ಇದನ್ನು ನಾನು ನನ್ನ ಅನುಭವದಿಂದ ಹೇಳುತ್ತಿದ್ದೇನೆ ಎಂದು ಓಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಚೌಕಿದಾರ್‌ ಚೋರ್‌ ಹೇ, ಅದಾನಿ-ಅಂಬಾನಿ ವಿಚಾರಗಳು ಈಗ ವರ್ಕ್‌ ಆಗೋದಿಲ್ಲ. ಅದನ್ನು ನಾವು ಒಪ್ಪಿಕೊಳ್ಳಬೇಕಿದೆ. ಅದೇನೇ ರೀಸನ್‌ ಇರಲಿ. ಪ್ರಧಾನಿ ಮೋದಿ ಅವರು ಟೆಫ್ಲಾನ್‌ ಕೋಟಿಂಗ್‌ ಹೊಂದಿದ್ದಾರೆ. ಅವರ ವಿರುದ್ಧವಾಗಿ ನೀವು ಏನೇ ಹೇಳಿದರೂ ಅದು ನಿಲ್ಲೋದಿಲ್ಲ. ಇದನ್ನು ನೀವು ಒಪ್ಪಿ ಅಥವಾ ಬಿಡಿ. ಇದೇ ಅತ್ಯ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಒಂದು ಪಕ್ಷವಾಗಿ ಬಿಜೆಪಿ ಶ್ರೀಮಂತವಾಗಿದೆ ಎಂದು ಅವರು ಹೇಳಿದ್ದಾರೆ.  ಹಾಗಂತ ನೀವು ಪ್ರಧಾನಿ ಬಳಿ ಹಣವಿದೆ, ಅವರು ದುಡ್ಡು ಮಾಡಿಕೊಂಡಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಇದನ್ನು ಸಾಬೀತು ಮಾಡಲು ಯಾವುದೇ ಪುರಾವೆಗಳಿಲ್ಲ. ಭಾರತದ ಹೆಚ್ಚಿನ ಭಾಗ ಬಡವಾಗಿದ್ದರೂ, ಬಿಜೆಪಿ ಶ್ರೀಮಂತವಾಗಿದೆ ಎಂದು ಹೇಳಲು ಎಲ್ಲಾ ದಾಖಲೆಗಳಿವೆ. ಶೇ.50 ರಷ್ಟು ಚುನಾವಣಾ ಬಾಂಡ್‌ಗಳ ಹಣಗಳು ಬಿಜೆಪಿಗೆ ಹೋಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಓಮರ್‌ ಅಬ್ದುಲ್ಲಾ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟವು ಗೆಲ್ಲಲು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಮತ್ತು ಅದು ಗೆಲ್ಲುತ್ತದೆಯೋ ಇಲ್ಲವೋ ಎಂಬುದನ್ನು ಸಾರ್ವಜನಿಕರು ನಿರ್ಧರಿಸಬೇಕು ಮತ್ತು ಚುನಾವಣಾ ಫಲಿತಾಂಶಗಳು ಪ್ರಕಟವಾಗುವ ಜೂನ್ 4 ರವರೆಗೆ ಕಾಯುವುದು ಉತ್ತಮ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಶನಿವಾರ ಹೇಳಿದ್ದಾರೆ.

"ಕಳೆದ ಒಂಬತ್ತು ವರ್ಷಗಳಿಂದ ಈ ದೇಶವು ಕಂಡ ಸಂದರ್ಭಗಳಿಂದಾಗಿ ಇಂಡಿಯಾ ಮೈತ್ರಿಕೂಟ ಮುಂದೆ ಬಂದಿತ್ತು. ದುರದೃಷ್ಟವಶಾತ್, ದೇಶದ ಸಾಂವಿಧಾನಿಕ ಘಟಕಗಳ ಮೇಲೆ ವ್ಯವಸ್ಥಿತ ಮತ್ತು ನಿರಂತರ ದಾಳಿ ನಡೆಯುತ್ತಿದೆ. ರಚನೆಯ ಹಿಂದಿನ ಆಲೋಚನೆ ಎನ್‌ಡಿಎಗೆ ಅಸಾಧಾರಣ ಸವಾಲನ್ನು ನೀಡಲು ಮತ್ತು ಚುನಾವಣೆಯಲ್ಲಿ ಅವರನ್ನು ಸೋಲಿಸಲು ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಇಂಡಿಯಾ ಮೈತ್ರಿ ಮಾಡಿಕೊಂಡಿತ್ತು ಎಂದು ಸಚಿನ್ ಪೈಲಟ್ ಹೇಳಿದ್ದಾರೆ.

ನಾನು ಸಚಿವನಾಗದೇ ಇದ್ದಿದ್ದರೆ, ಮೋದಿಯನ್ನ ತುಂಡು ತುಂಡು ಮಾಡ್ತಿದ್ದೆ, ಡಿಎಂಕೆ ನಾಯಕನ ಹೇಳಿಕೆ

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.37ರಷ್ಟು ಮತಗಳನ್ನು ಪಡೆದಿತ್ತು. ಇದರರ್ಥ ಮೂರನೇ ಎರಡರಷ್ಟು ಮತದಾರರು ಬಿಜೆಪಿ ವಿರುದ್ಧ ಮತ ಚಲಾಯಿಸಿದ್ದಾರೆ. ಹಾಗಾಗಿ 300 ಪಾರ್, 400, 500 ಎಂಬ ಘೋಷಣೆಗಳು ಮುಖ್ಯವಲ್ಲ. ಭಾರತದ ಮೂರನೇ ಎರಡರಷ್ಟು ಬಿಜೆಪಿಗೆ ಮತ ಹಾಕಿಲ್ಲ ಎನ್ನುವುದೇ ಮುಖ್ಯ ಎಂದಿದ್ದಾರೆ.

ಸದಾ ಸುಳ್ಳು ಬೊಗಳುವ ರಾಜನ ಸುಳ್ಳು ಹೇಳಲೂ ಬಾರದ ದಡ್ಡ ಗೂಂಡಾಪಡೆ ಎಸ್‌ಬಿಐ: ಕಿಶೋರ್‌

ಆಮ್ ಆದ್ಮಿ ಪಕ್ಷ ರಚನೆಯಾದಾಗಿನಿಂದ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರದ ಬಗ್ಗೆ ವಿರೋಧ ಹೊಂದತ್ತು. ಆದರೆ, ಈಗ ಇಂಡಿಯಾ ಮೈತ್ರಿ ಭಾಗವಾಗಿರುವ ಬಗ್ಗೆ ಮಾತನಾಡಿದ ದೆಹಲಿಯ ಸಚಿವೆ ಅತಿಶಿ, ದೇಶವು ಈ ಕ್ಷಣದಲ್ಲಿ ದೊಡ್ಡ ಅಪಾಯವನ್ನು ಎದುರಿಸುತ್ತಿದೆ ಮತ್ತು ಅದಕ್ಕಾಗಿಯೇ ಇಂಡಿಯಾ ಮೈತ್ರಿಯನ್ನು ರಚಿಸಲಾಗಿದೆ ಎಂದು ಹೇಳಿದರು. “ಇಂಡಿಯಾ ಮೈತ್ರಿಕೂಟದಲ್ಲಿರುವ ಒಂದು ಪಕ್ಷದೊಂದಿಗೆ ನನಗೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ನಾವೆಲ್ಲರೂ ದೇಶದ ಸಂವಿಧಾನವನ್ನು ರಕ್ಷಿಸಲು ಬಯಸುತ್ತೇವೆ' ಎಂದು ಹೇಳಿದ್ದಾರೆ.
 

click me!