2024ರ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುವುದರೊಂದಿಗೆ ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆಚರಿಸಲು ದೇಶದಲ್ಲಿ ಚಾಲನೆ ಸಿಕ್ಕಿದಂತಾಗಿದೆ. 144 ಕೋಟಿ ಜನರೊಂದಿಗೆ ಭಾರತ ಸದ್ಯ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ.
ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಿಸುವುದರೊಂದಿಗೆ ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆಚರಿಸಲು ದೇಶದಲ್ಲಿ ಚಾಲನೆ ಸಿಕ್ಕಿದಂತಾಗಿದೆ. 144 ಕೋಟಿ ಜನರೊಂದಿಗೆ ಭಾರತ ಸದ್ಯ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ವಿಶ್ವದ ಅತಿದೊಡ್ಡ ಪ್ರಜಾತಂತ್ರ ವ್ಯವಸ್ಥೆಗೆ ಚುಕ್ಕಾಣಿ ಹಿಡಿಯುವ ನೇತಾರರ ಆಯ್ಕೆಗೆ ಇದೀಗ 7 ಹಂತದ ಚುನಾವಣೆ ಘೋಷಣೆಯಾಗಿದೆ. 144 ಕೋಟಿ ಜನರ ಪೈಕಿ 97 ಕೋಟಿ ಜನರು ಮತದಾನದ ಅವಕಾಶ ಹೊಂದಿದ್ದಾರೆ. ಇಷ್ಟು ಮಾತ್ರವಲ್ಲ ಚುನಾವಣೆಗೆ ಬಳಸುವ ಸಿಬ್ಬಂದಿ, ಮತಗಟ್ಟೆ ಸಂಖ್ಯೆ, ನೊಂದಾಯಿತ ರಾಜಕೀಯ ಪಕ್ಷಗಳು, ಭದ್ರತಾ ವ್ಯವಸ್ಥೆ, ಚುನಾವಣಾ ವೆಚ್ಚ ಹೀಗೆ ಪ್ರತಿಯೊಂದು ವಿಷಯದಲ್ಲೂ ಈ ಚುನಾವಣೆ ವಿಶ್ವದಲ್ಲೇ ಕಂಡುಕೇಳರಿಯದ ಪ್ರಮಾಣದ್ದು ಎನ್ನಿಸಿಕೊಳ್ಳಲಿದೆ. ಹೀಗಾಗಿಯೇ ಮುಂದಿನ ಒಂದೂವರೆ ತಿಂಗಳ ಕಾಲ ಇಡೀ ವಿಶ್ವದ ಗಮನ ಭಾರತದತ್ತ ಇರಲಿದೆ.
ಯುರೋಪ್ ಒಕ್ಕೂಟಕ್ಕಿಂತ ಅಧಿಕ
ಯುರೋಪ್ ಒಕ್ಕೂಟದ ಜನಸಂಖ್ಯೆಗಿಂತ ಭಾರತೀಯ ಮತದಾರರೇ ಹೆಚ್ಚಿದ್ದಾರೆ. ಯುರೋಪಿಯನ್ ಒಕ್ಕೂಟ ಒಟ್ಟು ಜನಸಂಖ್ಯೆ 74 ಕೋಟಿ ಆಗಿದೆ, ಆದರೆ ಭಾರತದ ಮತದಾರರ ಸಂಖ್ಯೆ 97 ಕೋಟಿ ಆಗಿದೆ.
Video 10.5 ಲಕ್ಷ ಮತಗಟ್ಟೆ, 55 ಲಕ್ಷ ಇವಿಎಂ: ಏ.19ರಿಂದ ಜೂ.1ರ ವರೆಗೆ ಲೋಕಸಭಾ ಚುನಾವಣೆ!
ಅಮೆರಿಕದ ಜನಸಂಖ್ಯೆಗಿಂತ 3 ಪಟ್ಟು ಅಧಿಕ ಮತದಾರರು
ಅಮೆರಿಕ ಒಟ್ಟು ಜನಸಂಖ್ಯೆ ಹೆಚ್ಚುಕಡಿಮೆ 34 ಕೋಟಿ. ಮತದಾರರ ಸಂಖ್ಯೆ 16 ಕೋಟಿ. ಆದರೆ ಭಾರತದಲ್ಲಿ ಅರ್ಹ ಮತದಾರರ ಪ್ರಮಾಣವೇ 97 ಕೋಟಿ. ಅಂದರೆ ಅಮೆರಿಕದ ಒಟ್ಟು ಜನಸಂಖ್ಯೆಗಿಂತ ಹೆಚ್ಚುಕಡಿಮೆ 3 ಪಟ್ಟು ಅಧಿಕ.
ವಿಶ್ವದ ದೊಡ್ಡ ಚುನಾವಣೆ ಹೇಗೆ?
2024ರ ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ ಎಪ್ರಿಲ್ 26 ಹಾಗೂ ಮೇ7 ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚಿತ್ರದುರ್ಗ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ಸೆಂಟ್ರಲ್ನಲ್ಲಿ ಮೊದಲ ಹಂತದಲ್ಲಿ ಮತದಾನವಾಗಲಿದೆ. 2ನೇ ಹಂತದ ಚುನಾವಣೆ ಮೇ 7 ರಂದು ಶಿವಮೊಗ್ಗ, ದಾವಣಗೆರೆ, ಹಾವೇರಿ, ಉತ್ತರ ಕನ್ನಡ, ಬಳ್ಳಾರಿ, ಧಾರವಾಡ, ಕೊಪ್ಪಳ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ರಾಯಚೂರು, ಬಿಜಾಪುರ ಕಲಬುರಗಿ ಮತ್ತು ಬೀದರ್ ಕ್ಷೇತ್ರಗಳಲ್ಲಿ ನಡೆಯಲಿದೆ.
ಇದೇ ಮೊದಲ ಬಾರಿಗೆ ವೋಟ್ ಫ್ರಮ್ ಹೋಮ್ ಅವಕಾಶ, ಯಾರು ಮನೆಯಿಂದ ಮತದಾನಕ್ಕೆ ಅರ್ಹ?