ವಯೋವೃದ್ಧ ದಂಪತಿಗಳು ಹಾರ್ಮೋನಿಯಂ ಜೊತೆ ವಾದ್ಯವನ್ನು ಬಾರಿಸುತ್ತಾ 'ಚಿಟ್ಟಿ ಆಯಿ ಹೈ' ಹಾಡನ್ನು ಹಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಸಂಜಯ್ ದತ್ (Sanjay datt) ನಟಿಸಿದ 1986 ರ 'ನಾಮ್' (Naam) ಚಲನಚಿತ್ರದ ಪಂಕಜ್ ಉಧಾಸ್ (Pankaj Udhas) ಅವರು ಹಾಡಿದ ಜನಪ್ರಿಯ ಹಾಡಾದ 'ಚಿಟ್ಟಿ ಆಯಿ ಹೈ' ಹಾಡನ್ನು ಸೊಗಸಾಗಿ ಹಾಡಿದ್ದು, ದಂಪತಿಯ ಈ ಹಾಡಿಗೆ ನೋಡುಗರು ಭೇಷ್ ಎಂದಿದ್ದಾರೆ.
ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವೀಡಿಯೊವನ್ನು 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 2 ಲಕ್ಷಕ್ಕೂ ಅಧಿಕ ಜನ ಈ ಹಾಡನ್ನು ಲೈಕ್ ಮಾಡಿದ್ದಾರೆ.
ವೀಡಿಯೋದಲ್ಲಿ ಚಾಪೆಯೊಂದರ ಮೇಲೆ ಕಾಲು ಮಡಚಿ ಕುಳಿತಿರುವ ಈ ದಂಪತಿಯ ಸೊಗಸಾದ ಹಾಡು ನೋಡುಗರನ್ನು ಸೆಳೆಯುತ್ತಿದೆ. ಅಜ್ಜ ಹಾರ್ಮೋನಿಯಂ ಬಾರಿಸುತ್ತಿದ್ದರೆ, ಅಜ್ಜಿ ತನ್ನ ಡ್ಯಾಫ್ಲಿ ಬಾರಿಸುತ್ತಾ ಹಾಡುತ್ತಿದ್ದಾರೆ. ಅವರ ಧ್ವನಿಗಳು ಯಾವುದೇ ಸಂಗೀತಾ ಪರಿಣಿತರಿಗೂ ಕಮ್ಮಿ ಇದ್ದಂತಿರಲಿಲ್ಲ. ಜೊತೆಗೆ ಆವರು ಆಯ್ಕೆ ಮಾಡಿದ ಹಿಟ್ ಹಾಡು ಅವರ ಧ್ವನಿಯ ಮಾಧುರ್ಯವನ್ನು ಇನ್ನಷ್ಟು ಹೆಚ್ಚಿಸಿತ್ತು. ಈ ವೃದ್ಧ ದಂಪತಿಯ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದು, ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ.
ಮಗುವಿನ ಕೋರಿಕೆ ಈಡೇರಿಸಿದ ಅಲೆಕ್ಸಾ... ಅಂಬೆಗಾಲಿಕ್ಕುವ ಕಂದನ ಡಾನ್ಸ್ ನೋಡಿ
ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ಪುಟ್ಟ ಮಕ್ಕಳು ಕೂಡ ತಂತ್ರಜ್ಞಾನವನ್ನು ಅಷ್ಟೇ ಸ್ಮಾರ್ಟ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ವಾಯ್ಸ್ ಆಸಿಸ್ಟೆಂಟ್ ಆಗಿರುವ ಅಲೆಕ್ಸಾಗೆ ಈಗಷ್ಟೇ ಹೆಜ್ಜೆ ಇಡಲು ಕಲಿತ ಮಗುವೊಂದು ತನ್ನ ಇಷ್ಟದ ಹಾಡು ಹಾಕುವಂತೆ ಕೇಳುತ್ತಿದ್ದು ಇದಕ್ಕೆ ಸ್ಪಂದಿಸಿದ ಅಲೆಕ್ಸ್ ಹಾಡು ಪ್ಲೇ ಮಾಡುತ್ತದೆ. ಕೂಡಲೇ ಖುಷಿಯಾದ ಮಗು ನಿಂತಲೇ ಕುಣಿಯಲು ಶುರು ಮಾಡುತ್ತದೆ. ಈ ದೃಶ್ಯ ಈಗ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಮಗುವಿನ ಮುದ್ದಾದ ಡಾನ್ಸ್ ಹಾಗೂ ಸ್ಮಾರ್ಟ್‌ನೆಸ್ ಎಲ್ಲರ ಗಮನ ಸೆಳೆಯುತ್ತಿದೆ.
ವೀಡಿಯೊದಲ್ಲಿ, ಪುಟ್ಟ ಹುಡುಗಿ, ವಾಯ್ಸ್ ಅಸಿಸ್ಟೆಂಟ್ ಆಗಿರುವ ಅಲೆಕ್ಸಾಗೆ ತಾನು ಇಷ್ಟಪಡುವ ಹಾಡನ್ನು ಪ್ಲೇ ಮಾಡಲು ವಿನಂತಿಸುತ್ತಾಳೆ. ಈ ವಿಡಿಯೋದಲ್ಲಿರುವ ಇನ್ನು ಕ್ಯೂಟ್ ಎನಿಸುವ ವಿಷಯವೆಂದರೆ ಪುಟ್ಟ ಕಂದನಿಗೆ ಹಾಡಿನ ಹೆಸರೇನು ಎಂಬುದು ಗೊತ್ತಿಲ್ಲ. ಆದರೂ ಅದರ ಟ್ಯೂನ್ ಅನ್ನು ಅಕೆ ಹಾಡುವುದನ್ನು ಕೇಳಿ ಅಲೆಕ್ಸ್ ಮೂಲ ಹಾಡನ್ನು ಪ್ಲೇ ಮಾಡುತ್ತದೆ.
Kacha Badam : ಸೋಷಿಯಲ್ ಮೀಡಿಯಾಗಳಲ್ಲಿ ಕಚ್ಚಾ ಬಾದಾಮ್ ಕ್ವಾಟ್ಲೆ, ವಿದೇಶಗಳಲ್ಲೂ ಹವಾ!
ಹೇ ಅಲೆಕ್ಸಾ, A-a-aye ಅನ್ನು ಪ್ಲೇ ಮಾಡಿ, ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಇದನ್ನು ಅಮೆರಿಕದ ರೆಗ್ಗೀ ರಾಕ್ ಬ್ಯಾಂಡ್ ( American reggae rock band) ಆಗಿರುವ ಡರ್ಟಿ ಹೆಡ್ಸ್ (Dirty Heads) ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಡು ಪ್ಲೇ ಆಗಲು ಆರಂಭಿವಾದ ಕೂಡಲೇ ಅಂಬೆಗಾಲಿಡುವ ಮಗು ತನ್ನ ಉತ್ಸಾಹವನ್ನು ತಡೆಯಲು ಸಾಧ್ಯವಾಗದೆ ಡಾನ್ಸ್ ಮಾಡಲು ಶುರು ಮಾಡುತ್ತದೆ. ಎರಡು ವಾರಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋಗೆ ಇದುವರೆಗೆ 1.7 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಹಲವಾರು ಮಂದಿ ಕಾಮೆಂಟ್ಸ್ ಕೂಡ ಮಾಡಿದ್ದಾರೆ.
ಇದು ಉತ್ತಮ ಮಕ್ಕಳ ಹಾಡು" ಎಂದು ಇನ್ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಓ ಮೈ ಗಾಡ್ ಆಕೆಯ ಪುಟ್ಟ ಡಾನ್ಸ್ ನೋಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಗು ಫ್ಲೇ ಮಾಡಲು ಹೇಳಿ ಡಾನ್ಸ್ ಮಾಡಿದ ವೆಕೇಶನ್ ಹಾಡು 2017 ರಲ್ಲಿ ಬಿಡುಗಡೆಯಾಗಿತ್ತು, ಹಾಗೆಯೇ ಇದು ಇನ್ಸ್ಟಾಗ್ರಾಮ್ ರೀಲ್‌ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ