ಬ್ರಿಟಿಷರಂತೆ ಕೇಜ್ರಿವಾಲ್‌ ನೇತೃತ್ವದ ಎಎಪಿ ಲೂಟಿ ಮಾಡಲು ಪಂಜಾಬ್‌ಗೆ ಬಂದಿದೆ : ಸಿಎಂ ಚನ್ನಿ

Suvarna News   | Asianet News
Published : Feb 13, 2022, 10:36 AM ISTUpdated : Feb 13, 2022, 01:15 PM IST
ಬ್ರಿಟಿಷರಂತೆ ಕೇಜ್ರಿವಾಲ್‌ ನೇತೃತ್ವದ ಎಎಪಿ ಲೂಟಿ ಮಾಡಲು ಪಂಜಾಬ್‌ಗೆ ಬಂದಿದೆ : ಸಿಎಂ ಚನ್ನಿ

ಸಾರಾಂಶ

  ಪಂಜಾಬ್‌ ಚುನಾವಣೆಗೆ ದಿನಗಣನೆ ಫೆ.20 ರಂದು ನಡೆಯಲಿದೆ ಪಂಜಾಬ್ ಚುನಾವಣೆ ಎಎಪಿ ವಿರುದ್ಧ ಚರಣ್‌ಜಿತ್ ಸಿಂಗ್ ವಾಗ್ದಾಳಿ

ಪಂಜಾಬ್‌(ಫೆ.13): ಪಂಜಾಬ್‌ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಎಎಪಿ ವಿರುದ್ಧ ವಾಗ್ದಾಳಿ ನಡೆಸಿರುವ ಪಂಜಾಬ್ ಸಿಎಂ  ಚರಣ್‌ಜಿತ್‌ ಸಿಂಗ್‌ ಚನ್ನಿ ಭಾರತಕ್ಕೆ ಬ್ರಿಟಿಷರು ಲೂಟಿ ಮಾಡಲು ಬಂದಂತೆ ಪಂಜಾಬ್‌ಗೆ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರೀವಾಲ್‌ ಹಾಗೂ ಅವರ ದೆಹಲಿ ಕುಟುಂಬವಾದಂತಹ ರಾಘವ್‌ ಚಡ್ಡಾ ಮುಂತಾದವರು ಪಂಜಾಬ್‌ನ್ನು ಲೂಟಿ ಮಾಡಲು ಬಂದಿದ್ದಾರೆ. ಆದರೆ ಪಂಜಾಬ್‌, ಬ್ರಿಟಿಷರು ಮೊಘಲರಿಗೆ ಮಾಡಿದಂತೆ ಹೊರಗಿನವರಿಗೆ(ಎಎಪಿ) ಅವರ ನಿಜವಾದ ಜಾಗ ತೋರಿಸಲಿದೆ ಎಂದು  ಚರಣ್‌ಜಿತ್‌ ಸಿಂಗ್‌ ಚನ್ನಿ ಹೇಳಿದರು. 

117 ಸದಸ್ಯ ಬಲದ ಪಂಜಾಬ್‌ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 20ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಮಾರ್ಚ್‌ 10 ರಂದು ಫಲಿತಾಂಶ ಹೊರ ಬರಲಿದೆ.  ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯ (Punjab Assembly Elections) ನಡುವೆಯೇ ಎಲ್ಲಾ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವ ಯತ್ನದಲ್ಲಿವೆ. ಏತನ್ಮಧ್ಯೆ, ಇಂಡಿಯಾ ನ್ಯೂಸ್- ಜನ್ ಕಿ ಬಾತ್ PMOO (India News-Jan ki Baat) ಮಾದರಿಯನ್ನು ಆಧರಿಸಿ ಅಭಿಪ್ರಾಯ ಸಂಗ್ರಹ ಸಮೀಕ್ಷೆಯನ್ನು ನಡೆಸಿದೆ.  ಇದರ ಪ್ರಕಾರ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು (Aam Aadmi Party) ಗೆಲುವನ್ನು ಸಾಧಿಸುವ ನಿರೀಕ್ಷೆ ಇದೆ. 60-66 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಶೇಕಡಾ 41ರಿಂದ - 42% ಮತ ಹಂಚಿಕೆಯಾಗುವ ಅಂದಾಜು ಇದೆ ಎಂದು ಸಮೀಕ್ಷೆ ತಿಳಿಸಿದೆ. 

Punjab Elections: ಕಾಂಗ್ರೆಸ್‌ಗೆ ಮುಖಭಂಗ, ಸಮೀಕ್ಷೆಯಲ್ಲಿ ಅಚ್ಚರಿಯ ಫಲಿತಾಂಶ!

ಇತ್ತೀಚೆಗಷ್ಟೇ ಕಾಂಗ್ರೆಸ್‌ ಚರಣ್‌ಜಿತ್‌ ಸಿಂಗ್‌ ಚನ್ನಿ (Channi) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು, ಕಾಂಗ್ರೆಸ್ ಕೇವಲ 33-39 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಹೀಗಿದ್ದರೂ 34% - 35% ಮತ ಹಂಚಿಕೆಯನ್ನು ನಿರೀಕ್ಷಿಸಲಾಗಿದೆ. ಮಾಲ್ವಾ ಮತ್ತು ಮಜಾದಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಲಾಭವನ್ನು ಗಳಿಸುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ಕಾಂಗ್ರೆಸ್ ದೋವಾಬ್‌ನಿಂದ ಲಾಭ ಪಡೆಯುವ ನಿರೀಕ್ಷೆಯಿದೆ. ಈ ಸಮೀಕ್ಷೆಗಾಗಿ ಸುಮಾರು 8 ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಜನವರಿ 31 ರಿಂದ ಫೆಬ್ರವರಿ 5 ರ ನಡುವೆ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ, 18-25 ವರ್ಷ ವಯಸ್ಸಿನ 10%, 25-35 ವರ್ಷದ 30%, 35-45 ವರ್ಷ ವಯಸ್ಸಿನ 45% ಮತ್ತು 55+ ವರ್ಷ ವಯಸ್ಸಿನ 15% ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.

Punjab Elections: 'ದಿ ಗ್ರೇಟ್ ಖಲಿ' ಬಿಜೆಪಿಗೆ: ಕೃಷಿ ಕಾನೂನು ವಿರೋಧಿಸಿದ್ದ ರಾಣಾರಿಂದ ಮೋದಿ ಹೊಗಳಿಕೆ!

ಸಮೀಕ್ಷೆಯ ಪ್ರಕಾರ, ಎಎಪಿ 41-42%, ಕಾಂಗ್ರೆಸ್ 34-35%, SAD 14-17%, ಬಿಜೆಪಿ ಮೈತ್ರಿಕೂಟ 7% ಮತ್ತು ಇತರರು 1-2% ಗಳಿಸುವ ನಿರೀಕ್ಷೆಯಿದೆ. ಇದಲ್ಲದೇ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಗರಿಷ್ಠ 117 ಸ್ಥಾನಗಳನ್ನು ಪಡೆಯುತ್ತಿದೆ. ರಾಜ್ಯದಲ್ಲಿ ಎಎಪಿ 60-66, ಕಾಂಗ್ರೆಸ್ 33-39, ಎಸ್‌ಎಡಿ 14-18, ಬಿಜೆಪಿ ಮೈತ್ರಿಕೂಟ 0-4 ಗಳಿಸುವ ನಿರೀಕ್ಷೆಯಿದೆ. ಪ್ರದೇಶವಾರು ನೋಡಿದರೆ, ಮಾಲ್ವಾದಲ್ಲಿ ಒಟ್ಟು 69 ಸ್ಥಾನಗಳಿವೆ. ಇಲ್ಲಿ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿದೆ. ಎಎಪಿ 39, ಕಾಂಗ್ರೆಸ್ 20, ಎಸ್‌ಎಡಿ 9 ಮತ್ತು ಬಿಜೆಪಿ ಮೈತ್ರಿಕೂಟ 1 ಸ್ಥಾನ ಪಡೆಯಬಹುದು. ಅದೇ ರೀತಿ ಮಂಜಾ ಪ್ರದೇಶದಲ್ಲಿ ಒಟ್ಟು 25 ಸೀಟುಗಳಿವೆ. ಇಲ್ಲಿಯೂ ಆಪ್ ಜನರ ಫೇವರಿಟ್ ಆಗಿದೆ. ಮಾಂಜಾದಲ್ಲಿ ಎಎಪಿ 18, ಕಾಂಗ್ರೆಸ್ 6, ಎಸ್‌ಎಡಿ 1 ಸ್ಥಾನ ಪಡೆಯಬಹುದು. ಇಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಒಂದೇ ಒಂದು ಸ್ಥಾನ ಸಿಗುವ ಲಕ್ಷಣ ಕಾಣುತ್ತಿಲ್ಲ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!