ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ಮಗನಿಗಾಗಿ ಅಪ್ಪನ ಶೋಧ

By Kannadaprabha NewsFirst Published Jun 4, 2023, 7:06 AM IST
Highlights

ಬಾಲಸೋರ್‌ ಸಮೀಪ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 260ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, ಶವಗಳನ್ನು ಗುರುತು ಹಿಡಿಯುವುದೇ ದುಸ್ತರವಾಗಿದೆ. ಅಲ್ಲದೆ, ಆಸ್ಪತ್ರೆಯ ಶವಾಗಾರದಲ್ಲಿ ಶವಗಳ ರಾಶಿ ಹಾಕಲಾಗಿದ್ದು, ವಿಡಿಯೋ ವೈರಲ್‌ ಆಗಿದೆ. ಈ ದೃಶ್ಯ ಎಂಥ ಕಟುಕರ ಮನಸ್ಸನ್ನೂ ಕರಗಿಸುವಂತಿದೆ.

ಬಾಲಸೋರ್‌: ಬಾಲಸೋರ್‌ ಸಮೀಪ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 260ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, ಶವಗಳನ್ನು ಗುರುತು ಹಿಡಿಯುವುದೇ ದುಸ್ತರವಾಗಿದೆ. ಅಲ್ಲದೆ, ಆಸ್ಪತ್ರೆಯ ಶವಾಗಾರದಲ್ಲಿ ಶವಗಳ ರಾಶಿ ಹಾಕಲಾಗಿದ್ದು, ವಿಡಿಯೋ ವೈರಲ್‌ ಆಗಿದೆ. ಈ ದೃಶ್ಯ ಎಂಥ ಕಟುಕರ ಮನಸ್ಸನ್ನೂ ಕರಗಿಸುವಂತಿದೆ.

ಅಪಘಾತ ಸಂಭವಿಸಿದ ನಂತರ ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಕೆಲವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅವರ ಶವಗಳನ್ನು ಶವಾಗಾರದ ಕೋಣೆಗಳಲ್ಲಿ ರಾಶಿ ರಾಶಿ ಹಾಕಲಾಗಿದೆ. ಈ ವೇಳೆ ವ್ಯಕ್ತಿಯೊಬ್ಬ ತನ್ನ ಮಗನೇನಾದರೂ ಈ ಶವಗಳಲ್ಲಿ ಇದ್ದಾನಾ ಎಂದು ಗುರುತು ಹಿಡಿಯಲು ಎಲ್ಲ ಕಳೇಬರಗಳ ಮೇಲೂ ಹುಡುಕಾಡುತ್ತಾನೆ. ಇದಲ್ಲದೆ, ಅಲ್ಲಿಗೆ ಭಾರಿ ಪ್ರಮಾಣದ ಜನರ ದಂಡೇ ಹರಿದುಬಂದು ತಮ್ಮವರನ್ನು ಶೋಧಿಸುತ್ತಿವೆ.

ಒಡಿಶಾದ (odisha) ಬಾಲಸೋರ್‌ ಬಳಿ ಶುಕ್ರವಾರ (ಜೂನ್ 2) ಸಂಜೆ ಸಂಭವಿಸಿದ ರೈಲು ದುರಂತದ ನಂತರದ ಚಿತ್ರಣವವಿದು. ಈ ಅಪಘಾತ ಈ ಶತಮಾನದಲ್ಲೇ ಭೀಕರ ದುರಂತವಾಗಿ ಹೊರಹೊಮ್ಮಿದ್ದು, 288 ಜನರ ಜೀವ ಬಲಿ ಪಡೆದಿದೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಅಪಘಾತ ಬಲು ಅಪರೂಪ ಎನ್ನುವ ಹೊತ್ತಿನಲ್ಲೇ ಬಾಹಾನಗ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ಮೂರು ರೈಲುಗಳನ್ನು ಒಳಗೊಂಡ ಘೋರ ದುರಂತ ಇಡೀ ದೇಶವನ್ನೇ ಅಘಾತಕ್ಕೆ ಈಡುಮಾಡಿದೆ. ಜೊತೆಗೆ ರೈಲ್ವೆ ಸುರಕ್ಷತೆಯ ಕುರಿತು ಹಲವು ಪ್ರಶ್ನೆಗಳನ್ನು ಮುಂದೊಡ್ಡಿದೆ.

ಬದಲಾದ ಬೋಗಿ, ಬದುಕುಳಿಯಿತು ಜೀವ; ಅಪಘಾತ ರೈಲಿನಲ್ಲಿದ್ದ 110 ಕನ್ನಡಿಗರು ಸೇಫ್!

ದುರ್ಘಟನೆಯಲ್ಲಿ ಒಟ್ಟು 1175 ಜನರು ಗಾಯಗೊಂಡಿದ್ದು, ಈ ಪೈಕಿ 793 ಜನರು ಚಿಕಿತ್ಸೆ ಪಡೆದು ಮರಳಿದ್ದರೆ, 382 ಜನರು ಇನ್ನೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತದಲ್ಲಿ ಸಂಭವಿಸಿದ ಸಾವು-ನೋವು ಇದನ್ನು ಭಾರತ ಕಂಡ 3ನೇ ಅತಿದೊಡ್ಡ ಮತ್ತು 21ನೇ ಶತಮಾನದ ಅತ್ಯಂತ ಭೀಕರ ರೈಲು ದುರಂತ ಎಂಬ ಕುಖ್ಯಾತಿಗೆ ಪಾತ್ರ ಮಾಡಿದೆ. ಘಟನೆಗೆ ಜಗತ್ತಿನ ಅನೇಕ ಕಡೆಗಳಿಂದ ಆಘಾತ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ (Ashwin Vaishnav), ಒಡಿಶಾ ಸಿಎಂ ನವೀನ್‌ ಪಟ್ನಾಯಕ್‌, ರೈಲ್ವೆ ಖಾತೆ ಮಾಜಿ ಸಚಿವೆ ಮಮತಾ ಬ್ಯಾನರ್ಜಿ (Mamata Benarjee), ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದ್ದಾರೆ. ಮತ್ತೊಂದೆಡೆ ಘಟನೆ ಕುರಿತು ರೈಲ್ವೆ ಸಚಿವಾಲಯದ ಉನ್ನತ ಮಟ್ಟದ ತನಿಖೆ ಆರಂಭವಾಗಿದ್ದು, ಪ್ರಾಥಮಿಕ ತನಿಖೆ ಅನ್ವಯ, ಮಾನವ ವೈಫಲ್ಯವೇ ಅಪಘಾತಕ್ಕೆ ಕಾರಣ ಎಂದು ಕಂಡುಬಂದಿದೆ. ಸ್ಥಳದಲ್ಲಿ ಸೇನಾಪಡೆ ಸೇರಿದಂತೆ ವಿವಿಧ ವಿಪತ್ತು ರಕ್ಷಣಾ ಪಡೆಗಳಿಂದ ಕಾರ್ಯಾಚರಣೆ ನಡೆದಿದೆ.

ಸುಖಕರ ಪ್ರಯಾಣಕ್ಕಿಂತ ಕೊರಮಂಡಲ್ ರೈಲು ಅಪಘಾತವಾಗಿದ್ದೇ ಹೆಚ್ಚು, 2002ರಿಂದ ಇಲ್ಲೀವರೆಗೆ 5 ದುರಂತ!

ಇದೇ ವೇಳೆ ಘಟನೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಪಕ್ಷಗಳ ನಾಯಕರು, ಚಿತ್ರರಂಗ, ಕ್ರೀಡಾರಂಗದ ಖ್ಯಾತನಾಮರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿವಿಧ ದೇಶಗಳ ಗಣ್ಯರು ಕೂಡಾ ಕಂಬನಿ ಮಿಡಿದಿದ್ದಾರೆ. ಈ ದುರಂತವು ದೇಶದ ರೈಲ್ವೆ ವ್ಯವಸ್ಥೆಯಲ್ಲಿನ ಸುರಕ್ಷತೆತೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿರುವ ವಿರೋಧ ಪಕ್ಷಗಳು, ಘಟನೆಯ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿವೆ.

Heartbreaking scene of a father searching for his son among the dead in the Coromandel Express train accident.May God give those souls a place in his feet Om Shanti. pic.twitter.com/JjtwKVtplQ

— Viρiɳ Pαɳԃҽყ 🇮🇳 (@vipinsuryaIND)

 

ಶುಕ್ರವಾರ ರಾತ್ರಿ ಹೌರಾ-ಚೆನ್ನೈ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಬಾಲಸೋರ್‌ ಜಿಲ್ಲೆಯ ಬಾಹಾನಗ ನಿಲ್ದಾಣದಲ್ಲಿ ನಿಂತಿದ್ದ ಗೂಡ್‌್ಸ ರೈಲಿಗೆ ಡಿಕ್ಕಿ ಹೊಡೆದು ಪಕ್ಕದ ಹಳಿಗೂ ಉರುಳಿ ಬಿದ್ದಿತ್ತು. ಆಗ ಆ ಮಾರ್ಗದಲ್ಲಿ ಹೌರಾಗೆ ಸಂಚರಿಸುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ ರೈಲಿಗೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಬೋಗಿಗಳು ಡಿಕ್ಕಿ ಹೊಡೆದಿದ್ದವು.

Why are the bodies of the victims of the Odisha train accident being thrown one after another onto the pickup train? pic.twitter.com/HCSqOWoKKk

— sehruuuu (@seherBt121)

 

click me!