ಒಡಿಶಾ ರೈಲು ದುರಂತ: ವಿದ್ಯುತ್‌ ತಂತಿ ತಗುಲಿ 40 ಮಂದಿ ಸಾವು

By Kannadaprabha NewsFirst Published Jun 7, 2023, 8:46 AM IST
Highlights

ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತದಲ್ಲಿ ರೈಲ್ವೆ ಹಳಿ ಮೇಲಿರುವ ವಿದ್ಯುತ್‌ ತಂತಿ ತಗುಲಿ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲಿನ 40 ಮಂದಿ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಹೇಳಿ​ದ್ದಾ​ರೆ.

ಭುವನೇಶ್ವರ: ಶುಕ್ರವಾರ ನಡೆದ ಭೀಕರ ತ್ರಿವಳಿ ರೈಲು ದುರಂತದಲ್ಲಿ ರೈಲ್ವೆ ಹಳಿ ಮೇಲಿರುವ ವಿದ್ಯುತ್‌ ತಂತಿ ತಗುಲಿ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲಿನ 40 ಮಂದಿ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಹೇಳಿ​ದ್ದಾ​ರೆ. ಅಪಘಾತ ವೇಳೆ ಕೋರಮಂಡಲ ಎಕ್ಸ್‌ಪ್ರೆಸ್‌ ರೈಲು ಗೂಡ್ಸ್ ಗಾಡಿ ಮೇಲೆ ಏರಿ ನಿಂತ ಪರಿಣಾಮ ಮುಂದಿನ ಬೋಗಿಗಳು ವಿದ್ಯುತ್‌ ತಂತಿಗೆ ತಾಗಿ ತಂತಿ ತುಂಡಾಗಿ ಬೋಗಿ ಮೇಲೆ ಬಿದ್ದಿದೆ. ಇದರಿಂದಾಗಿ ಕನಿಷ್ಠ 40 ಮಂದಿ ಸಾವನ್ನಪ್ಪಿರಬಹುದು. ಈ ಕುರಿತು ಸರ್ಕಾರಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿದೆ ಎಂದು ಸಬ್‌ ಇನ್ಸ್‌​ಪೆ​ಕ್ಟ​ರ್‌ ಕುಮಾರ ನಾಯಕ್‌ ತಿಳಿಸಿದ್ದಾರೆ.

ರೈಲು ದುರಂತ: ಮೃತರ ಸಂಖ್ಯೆ 288ಕ್ಕೆ ಏರಿಕೆ

ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ (Balasore) ನಡೆದ ಭೀಕರ ತ್ರಿವಳಿ ರೈಲು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಲವು ಗಾಯಾಳುಗಳು ಮೃತಪಟ್ಟಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. ಇನ್ನು ‘288 ಮೃತರನ್ನು ಹೊರತುಪಡಿಸಿ ಅಪಘಾತದಲ್ಲಿ 1,100 ಜನ ಗಾಯಗೊಂಡಿದ್ದಾರೆ’ ಎಂದು ಖುರ್ದಾ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಿಂಕೇಶ್‌ ರಾಯ್‌ (Rinkesh Roy) ತಿಳಿಸಿದ್ದಾರೆ.

ಕಲ್ಲು ಹೃದಯವೂ ಕರಗೀತು..! ಮೃತದೇಹಗಳ ರಾಶಿಯಲ್ಲಿ ಮುಸುಕು ತೆಗೆದು ಮಗನಿಗಾಗಿ ಹುಡುಕಾಡಿದ ತಂದೆ!

ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆ ಆಗಿದೆ ಎಂದು ರಾಜ್ಯ ಸರ್ಕಾರ (State Govt) ತಿಳಿಸಿದೆ. ಅಪಘಾತದ ಬಳಿಕ 288 ಜನರು ಮೃತಪಟ್ಟಿದ್ದಾರೆ ಎನ್ನಲಾಗಿತ್ತದರೂ ಕೆಲ ಶವಗಳನ್ನು ಎರಡು ಬಾರಿ ಎಣಿಸಲಾಗಿದೆಯಾದ್ದರಿಂದ ಒಟ್ಟು ಮೃತರ ಸಂಖ್ಯೆ 275 ಎಂದು ಸರ್ಕಾರ ಘೋಷಿಸಿತ್ತು. ಆದರೆ ಈಗ ಗಾಯಾಳುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೃತರ ಸಂಖ್ಯೆ ಮತ್ತೆ ಏರಿಕೆ ಆಗಿದೆ.

ಸದ್ಯ 288 ಮೃತದೇಹಗಳ ಪೈಕಿ ಇನ್ನೂ 101 ಶವಗಳನ್ನು ಗುರುತಿಸಬೇಕಾಗಿದೆ. ಸಂಬಂಧಿಕರು ಬಂದು ಗುರುತಿಸದ ಈ ಶವಗಳನ್ನು ಸ್ಥಳೀಯ ಆಸ್ಪತ್ರೆಗಳ ಶವಾಗಾರಗಳಲ್ಲಿ ಸಂರಕ್ಷಿಸಿ ಇರಿಸಲಾಗಿದೆ.  ಒಡಿಶಾ, ಪಶ್ಚಿಮ ಬಂಗಾಳ (West Bengal), ಜಾರ್ಖಂಡ್‌, ಛತ್ತೀಸ್‌ಗಢ, ಬಿಹಾರ (Bihar), ತೆಲಂಗಾಣ (telangana) ಮತ್ತು ಆಂಧ್ರ ಪ್ರದೇಶದ (Andhra Pradesh) ರಾಜ್ಯಗಳಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ರೈಲ್ವೆ ಮುಂದಾಗಿದೆ.

ಬಾಲಸೋರ್ ರೈಲು ದುರಂತ: ನೂರಾರು ಜನರ ಪ್ರಾಣ ರಕ್ಷಿಸಿದ ಸ್ಥಳೀಯರು: ಜೀವ ಉಳಿಸಿದ ಸಹಸ್ರಾರು ರಕ್ತದಾನಿಗಳು

click me!