ಅಮರನಾಥ ಯಾತ್ರೆ ಮೇಲೆ ದಾಳಿಗೆ ಉಗ್ರ ಸಂಚು: ಪಾಕ್‌​ನಿಂದ ಇಬ್ಬರು ಉಗ್ರರ ನಿಯೋ​ಜ​ನೆ

Published : Jun 07, 2023, 07:30 AM IST
ಅಮರನಾಥ ಯಾತ್ರೆ ಮೇಲೆ ದಾಳಿಗೆ ಉಗ್ರ ಸಂಚು:  ಪಾಕ್‌​ನಿಂದ ಇಬ್ಬರು ಉಗ್ರರ ನಿಯೋ​ಜ​ನೆ

ಸಾರಾಂಶ

ಜಮ್ಮು-ಕಾಶ್ಮೀರದಲ್ಲಿ ಪವಿತ್ರ ಅಮರನಾಥ ಯಾತ್ರೆ ವೇಳೆ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆರಸಲು ಪಾಕಿಸ್ತಾನ ಮೂಲ ಭಯೋತ್ಪಾದಕರು ಯೋಜಿಸಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಪವಿತ್ರ ಅಮರನಾಥ ಯಾತ್ರೆ ವೇಳೆ ಯಾತ್ರಿಕರ ಮೇಲೆ ಭಯೋತ್ಪಾದಕ ದಾಳಿ ನಡೆರಸಲು ಪಾಕಿಸ್ತಾನ ಮೂಲ ಭಯೋತ್ಪಾದಕರು ಯೋಜಿಸಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಯಾತ್ರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ಎಸಗಿ ಯಾತ್ರೆಗೆ ಅಡ್ಡಿಪಡಿಸಲು ಭಯೋತ್ಪಾದಕರು ಮುಂದಾಗಿದ್ದು ಈಗಾಗಲೇ ಈ ದಾಳಿಯ ಹೊಣೆಯನ್ನು ರಫೀಕ್‌ ನಾಯ್‌ (Rafiq Nai) ಮತ್ತು ಮೊಹಮ್ಮದ್‌ ಅಮಿನ್‌ ಬಟ್‌ಗೆ (Mohammad Amin Butt) ನೀಡಲಾಗಿದೆ ಎಂದು ಗುಪ್ತ​ಚರ ಮೂಲ​ಗಳು ಹೇಳಿ​ವೆ.

ಇದ​ಲ್ಲದೆ, ಇವ​ರಿ​ಬ್ಬ​ರಿಗೆ ರಜೌ​ರಿ-ಪೂಂಛ್‌ (Rajouri-Poonch) ಪೀರ್‌ ಪಂಜಾಲ್‌ ಹಾಗೂ ಚೆನಾಬ್‌ ಕಣಿ​ವೆಯಲ್ಲಿ ಭಯೋ​ತ್ಪಾ​ದಕ ಚಟು​ವ​ಟಿಕೆ ನಡೆ​ಸು​ವಂತೆ ಕೂಡ ಪಾಕಿ​ಸ್ತಾನದ ಗುಪ್ತ​ಚರ ಸಂಸ್ಥೆ (Pakistan's intelligence agency) ಐಎ​ಸ್‌​ಐ ಸೂಚಿ​ಸಿದೆ ಎಂದು ಅವು ತಿಳಿ​ಸಿ​ವೆ. ಬಟ್‌ ಪೂಂಛ್‌ ಜಿಲ್ಲೆ​ಯ​ವ​ನಾ​ಗಿದ್ದು, ಬಟ್‌ ದೋಡಾ ಜಿಲ್ಲೆ​ಯ​ವ​ನಾ​ಗಿ​ದ್ದಾನೆ. ಆದರೆ ಈಗ ಇವರು ಪಾಕ್‌ ಆಕ್ರ​ಮಿತ (Pakistan occupied Kashmir)ಪ್ರದೇ​ಶಕ್ಕೆ ತೆರಳಿ ಭಯೋ​ತ್ಪಾ​ದನೆ ತರ​ಬೇತಿ ಪಡೆ​ಯು​ತ್ತಿ​ದ್ದಾ​ರೆ.

Amarnath Yatra 2023: ಹಿಮದ ಶಿವಲಿಂಗದ ಮೊದಲ ಫೋಟೋ ವೈರಲ್, ಈ ಸ್ಥಳದ ಬಗ್ಗೆ ನಿಮಗೆಷ್ಟು ಗೊತ್ತು?

ಜುಲೈ 1 ರಂದು ಪ್ರಾರಂಭಗೊಳ್ಳಲಿರುವ ಅಮರನಾಥ ಯಾತ್ರೆ ಆಗಸ್ಟ್‌ 31 ರಂದು ಮುಕ್ತಾಯಗೊಳ್ಳಲಿದ್ದು 62 ದಿನಗಳ ಕಾಲ ನಡೆಯಲಿದೆ. ಈ ವೇಳೆ ಭಾರೀ ಸಂಖ್ಯೆಯ ಭಕ್ತರು ಅಮರನಾಥ ಯಾತ್ರೆಗೆ ಆಗಮಿಸುತ್ತಾರೆ. ಯಾತ್ರಗೆ ಈಗಾಗಲೇ ಸಿದ್ಧತೆ ಆರಂಭವಾಗಿದ್ದು, ಮಂಗಳವಾರ ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯು ಸನ್ನದ್ಧತೆಯನ್ನು ಪರಿಶೀಲಿಸಿತ್ತು. ಕಳೆದ ವರ್ಷ ಈ ಪ್ರದೇಶದಲ್ಲಿ ಪ್ರವಾಹಕ್ಕೆ 60 ಜನ ಬಲಿಯಾಗಿದ್ದರು. 

Amarnath Yatra 2023ಗೆ ನೋಂದಣಿ ಆರಂಭ, ಇಲ್ಲಿದೆ ಸಂಪೂರ್ಣ ವಿವರ..m

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್