ಈಗ ರೈಲ್ವೆ ಮಂತ್ರಿ ಯಾರಿಗೂ ಗೊತ್ತಿಲ್ಲ, ಎಲ್ಲಾ ಹಸಿರು ಧ್ವಜಗಳನ್ನು ಒಬ್ಬರೇ ನಾರ್ಸಿಸಿಸ್ಟಿಕ್ ಪ್ರಚಾರ ಮಂತ್ರಿ ತೋರಿಸಿದ್ದಾರೆ ಎಂದು ಆರ್‌ಜೆಡಿ ಮೋದಿ ಸರ್ಕಾರವನ್ನು ಟೀಕೆ ಮಾಡಿದೆ.
ನವದೆಹಲಿ (ಜೂನ್ 3, 2023): ಒಡಿಶಾದಲ್ಲಿ ಶುಕ್ರವಾರ ಸಂಜೆ ಭೀಕರ ತ್ರಿವಳಿ ರೈಲು ಅಪಘಾತ ನಡೆದಿದೆ. ಈ ಅಪಘಾತದ ಕುರಿತು ಪ್ರಧಾನಿ ಮೋದಿ ವಿರುದ್ಧ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಟೀಕೆ ಮಾಡಿದೆ. ಅಲ್ಲದೆ,ರೈಲ್ವೆ ಬಜೆಟ್ ಅನ್ನು ಸಾಮಾನ್ಯ ಬಜೆಟ್‌ನೊಂದಿಗೆ ವಿಲೀನಗೊಳಿಸಿರುವುದನ್ನು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದೆ. ಹಾಗೂ, ಇಡೀ ದೇಶಕ್ಕೆ ರೈಲ್ವೆ ಸಚಿವರ ಹೆಸರು ತಿಳಿದಿರುವ ಸಮಯವಿತ್ತು. ಆದರೆ ಈಗ ಎಲ್ಲಾ ಹಸಿರು ಬಾವುಟಗಳನ್ನು ಕೇವಲ "ನಾರ್ಸಿಸಿಸ್ಟಿಕ್ ಪ್ರಚಾರ ಮಂತ್ರಿ" ತೋರಿಸಿದ್ದಾರೆ ಎಂದು ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರ ಪಕ್ಷ ಹೇಳಿದೆ.
“ದುರಂತ ರೈಲು ಅಪಘಾತ. ರೈಲ್ವೆ ಸಚಿವರ ಹೆಸರು ದೇಶಕ್ಕೆ ಗೊತ್ತಿದ್ದ ಕಾಲವೊಂದಿತ್ತು. ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸಲಾಗುತ್ತಿತ್ತು. ರೈಲ್ವೆಯನ್ನು ಖಾಸಗೀಕರಣ ಮಾಡಿರಲಿಲ್ಲ. ಯುವಕರು ರೈಲ್ವೆಯಲ್ಲಿ ಲಕ್ಷಗಟ್ಟಲೆ ಉದ್ಯೋಗಗಳನ್ನು ಪಡೆಯುತ್ತಿದ್ದರು’’ ಎಂದು ಆರ್‌ಜೆಡಿ ಟ್ವೀಟ್ ಮಾಡಿದೆ. ಅದರೆ ಈಗ ರೈಲ್ವೆ ಮಂತ್ರಿ ಯಾರಿಗೂ ಗೊತ್ತಿಲ್ಲ! ಎಲ್ಲಾ ಹಸಿರು ಧ್ವಜಗಳನ್ನು ಒಬ್ಬರೇ ನಾರ್ಸಿಸಿಸ್ಟಿಕ್ ಪ್ರಚಾರ ಮಂತ್ರಿ ತೋರಿಸಿದ್ದಾರೆ’’ ಎಂದೂ ಆರ್‌ಜೆಡಿ ತನ್ನ ಟ್ವೀಟ್‌ನಲ್ಲಿ ಹೇಳಿದೆ.
दुःखद रेल हादसा।
एक दौर था जब देश रेल मंत्री का नाम जानता था। रेल बजट अलग पेश होता था।
रेलवे का निजीकरण नहीं हुआ था।
युवाओं को रेलवे में लाखों नौकरियाँ मिलती थी।
अब कोई रेल मंत्री को नहीं जानता!
सारी हरी झंडी केवल और केवल एक आत्ममुग्ध प्रचारमंत्री दिखाता है।
ಇದನ್ನು ಓದಿ: ಕೈಕಾಲುಗಳಿಲ್ಲದ ದೇಹಗಳು, ರಕ್ತದ ಹೊಳೆ: ಪ್ರತ್ಯಕ್ಷದರ್ಶಿಗಳು ಹಂಚಿಕೊಂಡ ರೈಲು ಅಪಘಾತ ಸ್ಥಳದ ಭಯಾನಕ ಕಥೆ ಹೀಗಿದೆ..
ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿರುವುದನ್ನು ಇದು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.
ಇನ್ನೊಂದೆಡೆ, ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಂ ರಮೇಶ್ ಅವರು, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಲವು ನ್ಯಾಯಸಮ್ಮತ ಪ್ರಶ್ನೆಗಳನ್ನು ಎತ್ತಬೇಕಾಗಿದೆ, ಆದರೆ ನಾಳೆಯವರೆಗೆ ಕಾಯಬೇಕು ಎಂದು ಹೇಳಿದ್ದಾರೆ.. “ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತವು ನಿಜವಾಗಿಯೂ ಭಯಾನಕವಾಗಿದೆ. ಇದು ಅತ್ಯಂತ ದೊಡ್ಡ ಸಂಕಟದ ವಿಚಾರ. ರೈಲು ಜಾಲದ ಕಾರ್ಯನಿರ್ವಹಣೆಯಲ್ಲಿ ಸುರಕ್ಷತೆಯು ಯಾವಾಗಲೂ ಅಗ್ರಗಣ್ಯ ಆದ್ಯತೆಯಾಗಿರಬೇಕು ಎಂಬುದನ್ನು ಇದು ಬಲಪಡಿಸುತ್ತದೆ. ಹಲವು ನ್ಯಾಯಸಮ್ಮತ ಪ್ರಶ್ನೆಗಳನ್ನು ಎತ್ತಬೇಕಾಗಿದೆ, ಆದರೆ ನಾಳೆಯವರೆಗೆ ಕಾಯಬೇಕು ”ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನದ ಉಸ್ತುವಾರಿ ಜೈರಾಮ್ ರಮೇಶ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಒಡಿಶಾ ರೈಲು ಅಪಘಾತ ಎಫೆಕ್ಟ್: 48 ರೈಲುಗಳು ರದ್ದು, 39 ರೈಲುಗಳ ಮಾರ್ಗ ಬದಲಾವಣೆ; ವಿವರ ಇಲ್ಲಿದೆ..
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 3 ರೈಲುಗಳ ಪೈಕಿ ಎರಡು ರೈಲುಗಳು ಡಿಕ್ಕಿ ಹೊಡೆಯುವ ಜತೆಗೆ ಹಳಿ ತಪ್ಪಿವೆ. ಅಲ್ಲದೆ, ನಿಂತಿದ್ದ ಸರಕು ಸಾಗಣೆ ರೈಲಿನ ಮೇಲೂ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಸುಮಾರು 280 ಜನರು ಮೃತಪಟ್ಟಿದ್ದಾರೆ ಮತ್ತು 900ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಪಘಾತ ಸ್ಥಳದಲ್ಲಿ 200 ಆಂಬ್ಯುಲೆನ್ಸ್‌ಗಳು, 50 ಬಸ್‌ಗಳು ಮತ್ತು 45 ಮೊಬೈಲ್ ಆರೋಗ್ಯ ಘಟಕಗಳು ಜೊತೆಗೆ 1,200 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿವೆ, ಎಂದು ಭುವನೇಶ್ವರದ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿ ದೊಡ್ಡ ರೈಲು ಅಪಘಾತಗಳ ವಿವರ ಹೀಗಿದೆ..