ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ್ರೂ ಶವಗಳ ಜತೆ ಹಲವು ದಿನ ಕಾಲ ಕಳೆದ: ಉಳಿದಿದ್ದೇ ಪವಾಡ..

By BK AshwinFirst Published Jun 7, 2023, 10:55 AM IST
Highlights

ರೈಲು ಅಪಘಾತದ ನಂತರ ರಾಬಿನ್ ನೈಯಾ ಎಂಬುವರು ರೈಲು ಹಳಿಗಳ ಮೇಲೆ ಮಲಗಿದ್ದರಿಂದ ಅವರನ್ನು ಮೃತಪಟ್ಟಿದ್ದಾರೆ ಎಂದು ಭಾವಿಸಿ ಶವಗಳ ನಡುವೆ ಅವರನ್ನು ಹಲವು ದಿನಗಳ ಕಾಲ ಇರಿಸಲಾಗಿದೆ. 

ನವದೆಹಲಿ (ಜೂನ್ 7, 2023): ಕಳೆದ ಶುಕ್ರವಾರ ಸಂಜೆ ಒಡಿಶಾದಲ್ಲಿ ಸಂಭವಿಸಿದ ತ್ರಿವಳಿ ಅಪಘಾತವನ್ನು ಜನತೆ ಇನ್ನೂ ಮರೆತಿಲ್ಲ. ಆದರೆ, ಈ ಘಟನೆಯಲ್ಲಿ ಬದುಕುಳಿದಿದ್ದ ವ್ಯಕ್ತಿಯೊಬ್ಬರು ಶವಗಳ ಜತೆ ಕಾಲ ಕಳೆದಿದ್ದು, ನೀರು - ಆಹಾರ ಇಲ್ಲದೆಯೂ ಜೀವ ಇಟ್ಟುಕೊಂಡಿದ್ರು. ಅವರು ಸುರಕ್ಷಿತವಾಗಿ ಬಂದಿದ್ದು ಹೀಗೆ ನೋಡಿ.. 

ರೈಲು ಅಪಘಾತದ ನಂತರ ರಾಬಿನ್ ನೈಯಾ ಎಂಬುವರು ರೈಲು ಹಳಿಗಳ ಮೇಲೆ ಮಲಗಿದ್ದರಿಂದ ಅವರನ್ನು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದೆ. ಅಲ್ಲದೆ, ರಕ್ಷಣಾ ಕಾರ್ಯಾಚರಣೆಯ ಸಂದರ್ಭದಲ್ಲಿ, ರೈಲು ಅಪಘಾತದ ಸ್ಥಳಕ್ಕೆ ಸಮೀಪವಿರುವ ಒಡಿಶಾದ ಬಾಲಸೋರ್‌ನ ಶಾಲಾ ಕೊಠಡಿಯಲ್ಲಿ ನೂರಾರು ಶವಗಳೊಂದಿಗೆ ಅವರನ್ನು ಎತ್ತಿಕೊಂಡು ಹೋಗಿದ್ದಾರೆ. 35 ವರ್ಷ ವಯಸ್ಸಿನ ಈ ವ್ಯಕ್ತಿ ಕ್ಲಾಸ್ಟ್ರೋಫೋಬಿಕ್ ಶಾಲೆಯ ಕೋಣೆಯಲ್ಲಿ ಹತ್ತಾರು ದೇಹಗಳ ನಡುವೆ ನೋವಿನ ಕ್ಷಣಗಳ ನಡುವೆಯೂ ಬದುಕಿದ್ದಾರೆ.

ಇದನ್ನು ಓದಿ: Breaking: ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು: ನೂರಾರು ಜನರನ್ನು ಬಲಿ ತೆಗೆದುಕೊಂಡ 3 ದಿನಗಳಲ್ಲಿ ಮತ್ತೊಂದು ಅವಘಡ

ರಕ್ಷಣಾ ಕಾರ್ಯಕರ್ತರು ಒಮ್ಮೆ ಶಾಲೆಯ ಕೋಣೆಗೆ ನುಗ್ಗಿ ಅಲ್ಲಿ ರಾಶಿ ಬಿದ್ದಿದ್ದ ಮೃತದೇಹಗಳನ್ನು ಹೊರತೆಗೆಯುತ್ತಿದ್ದಾಗ ಅವರಲ್ಲಿ ಒಬ್ಬರು ದೇಹಗಳ ರಾಶಿಯ ನಡುವೆ ನಡೆದುಕೊಂಡು ಹೋಗುತ್ತಿರುವಾಗ, ಒಂದು ಕೈ ಇದ್ದಕ್ಕಿದ್ದಂತೆ ತನ್ನ ಕಾಲನ್ನು ಹಿಡಿದಂತೆ ಭಾವಿಸಿದರು.  ಮತ್ತು ತದನಂತರ ಅವನು ನೀರನ್ನು ಕೇಳುವ ಸದ್ದಿಲ್ಲದ ನರಳುವಿಕೆಯನ್ನು ಕೇಳಿದನು. "ನಾನು ಬದುಕಿದ್ದೇನೆ, ಸತ್ತಿಲ್ಲ, ದಯವಿಟ್ಟು ನನಗೆ ನೀರು ಕೊಡಿ." ಎಂದು ಆತ ತನಗೆ ಸಾಧ್ಯವಾದಷ್ಟು ಜೋರಾಗಿ ಕಿರುಚಿಕೊಂಡಿದ್ದಾನೆ.

ಮೊದಲಿಗೆ, ಕೆಲಸಗಾರನು ಅಪನಂಬಿಕೆಯಲ್ಲಿ ಇದ್ದು ಹಾಗೂ ಗಾಬರಿಯಾಗಿದ್ರೂ, ನಂತರ 35 ವರ್ಷದ ರಾಬಿನ್ ಅನ್ನು ನೋಡಲು ಧೈರ್ಯ ಮಾಡಿದನು. ಹಾಗೂ,, ಅವನು ಜೀವಂತವಾಗಿದ್ದರೂ ಚಲಿಸಲು ಹೆಣಗಾಡುತ್ತಿದ್ದನು ಮತ್ತು ಉಳಿಸುವಂತೆ ಮನವಿ ಮಾಡಿದನು. ತಕ್ಷಣ ಅವರನ್ನು ರಕ್ಷಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಚಾರ್ನೇಖಲಿ ಗ್ರಾಮದ ನಿವಾಸಿ ರಾಬಿನ್ ನೈಯಾ ಅಪಘಾತದಲ್ಲಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದರೂ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಇದನ್ನೂ ಓದಿ: ಮೋದಿ ಹಿಂಬದಿ ಮಿರರ್‌ ಮಾತ್ರ ನೋಡೋದ್ರಿಂದ ಕಾರು ಅಪಘಾತವಾಗಿದೆ: ಒಡಿಶಾ ರೈಲು ದುರಂತದ ಬಗ್ಗೆ ರಾಹುಲ್‌ ಗಾಂಧಿ ವ್ಯಾಖ್ಯಾನ

ಒಡಿಶಾ ರೈಲು ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ರೈಲ್ವೆ ಇಲಾಖೆ ಸಾವಿನ ಸಂಖ್ಯೆಯನ್ನು 288ಕ್ಕೆ  ನವೀಕರಿಸಿದೆ. ರಾಬಿನ್ ನೈಯಾ ತನ್ನ ಗ್ರಾಮದ ಇತರ ಏಳು ಜನರೊಂದಿಗೆ ಹೌರಾದಿಂದ ಆಂಧ್ರಪ್ರದೇಶಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿ ಕೆಲಸ ಹುಡುಕಿಕೊಂಡು ಪ್ರಯಾಣಿಸುತ್ತಿದ್ದರು. ಎರಡು ದಶಕಗಳಲ್ಲಿ ಸಂಭವಿಸಿದ ಭೀಕರ ರೈಲು ಡಿಕ್ಕಿಯಲ್ಲಿ ಅವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡರು. ಪ್ರಸ್ತುತ, ಗಂಭೀರ ಸ್ಥಿತಿಯಲ್ಲಿರುವ ರಾಬಿನ್ ನೈಯಾ ಮೇದಿನಿಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮೂಳೆಚಿಕಿತ್ಸಕ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

“ನನ್ನ ಸಂಬಂಧಿ ರಾಬಿನ್ ವಲಸೆ ಕಾರ್ಮಿಕರಾಗಿ ಕೆಲಸ ಮಾಡಲು ಆಂಧ್ರಕ್ಕೆ ಪ್ರಯಾಣಿಸುತ್ತಿದ್ದರು. ರೈಲು ಅಪಘಾತಕ್ಕೀಡಾಗುತ್ತಿದ್ದಂತೆ, ಅವರು ಪ್ರಜ್ಞೆ ಕಳೆದುಕೊಂಡರು. ದೇಹಗಳ ರಾಶಿಯ ನಡುವೆ ಅವನು ತನ್ನನ್ನು ಕಂಡುಕೊಂಡನು. ಅವನು ನೀರು ಕೇಳಿ ರಕ್ಷಕನ ಕಾಲು ಹಿಡಿದಿದ್ದು, ನಂತರ ಅವನು ಪತ್ತೆಯಾಗಿದ್ದಾನೆ’’. ರಾಬಿನ್ ನೀರು ಕೇಳಿದನು ಮತ್ತು ತನ್ನ ಜೀವವನ್ನು ಉಳಿಸಲು ಮನವಿ ಮಾಡಿದನು. ನಂತರ ರಕ್ಷಕರು ಅವನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು,ಎಂದು ರಾಬಿನ್‌ ನೈಯಾ ಅವರ ಚಿಕ್ಕಪ್ಪ ಮನಬೇಂದ್ರ ಸರ್ದಾರ್ ಹೇಳಿದರು.

ಇದನ್ನೂ ಓದಿ: ವಿಧ್ವಂಸಕ ಕೃತ್ಯವೋ? ಅಪಘಾತವೋ?: ಒಡಿಶಾ ರೈಲು ದುರಂತದ ಹಿಂದಿನ ಸತ್ಯವೇನು..

click me!