ಆರೋಪಿ ಸತ್ತ 2 ದಿನದ ಬಳಿಕ ತಾತ್ಕಾಲಿಕ ಬೇಲ್‌ ನೀಡಿದ ಮುಂಬೈ ಕೋರ್ಟ್‌

By Kannadaprabha NewsFirst Published Jun 7, 2023, 9:20 AM IST
Highlights

ಮೋಸ ಮಾಡಿದ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ 62 ವರ್ಷದ ವ್ಯಕ್ತಿಯೊಬ್ಬನಿಗೆ ಆತನ ಮರಣದ 2 ದಿನದ ಬಳಿಕ ಮುಂಬೈ ಕೋರ್ಟ್‌ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದ ಘಟನೆ ನಡೆದಿದೆ.

ಮುಂಬೈ: ಮೋಸ ಮಾಡಿದ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ 62 ವರ್ಷದ ವ್ಯಕ್ತಿಯೊಬ್ಬನಿಗೆ ಆತನ ಮರಣದ 2 ದಿನದ ಬಳಿಕ ಮುಂಬೈ ಕೋರ್ಟ್‌ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದ ಘಟನೆ ನಡೆದಿದೆ. ಮೇ 9ರಂದು ಆರೋಪಿ ಸುರೇಶ್‌ ಪವಾರ್‌ (Suresh Pawar) ಅವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ್ದು, ತೀರ್ಪು ಕಾಯ್ದಿರಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಸುರೇಶ್‌ ತೀರಿಕೊಂಡಿದ್ದು, 2 ದಿನದ ಬಳಿಕ ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ ವಿಶಾಲ್‌ ಎಸ್‌ ಗಾಯ್ಕೆ ಜಾಮೀನು ಮಂಜೂರು ಮಾಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್‌ ಅವರನ್ನು ಬಂಧಿಸಲಾಗಿತ್ತು.

ರೈಲ್ವೆ ಬಜೆ​ಟ್‌ ವಿಲೀನ ದೊಡ್ಡ ಪ್ರಮಾ​ದ​: ಮೊಯ್ಲಿ

ನವದೆಹಲಿ: ದೇಶದಲ್ಲಿ ರೈಲ್ವೆ ಬಜೆಟ್‌ ಅನ್ನು ಕೇಂದ್ರ ಬಜೆಟ್‌ನೊಂದಿಗೆ ವಿಲೀನ ಮಾಡಿದ್ದೆ ದೊಡ್ಡ ಪ್ರಮಾದ ಎಂದು ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ (M. Veerappa Moily) ಹೇಳಿದ್ದಾರೆ. ಮಂಗಳವಾರ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಕೇವಲ ಹೈಸ್ಪೀಡ್‌ ರೈಲಿನ ಮೇಲೆ ಗಮನ ಹರಿಸಿದೆಯೆ ಹೊರತು ಸಾಮಾನ್ಯ ರೈಲುಗಳ ಮೇಲಿನ ಭದ್ರತೆ, ಆಧುನೀಕರಣದ ಮೇಲಲ್ಲ. ಹೀಗಾಗಿ ಈ ಅಪಘಾತವಾಗಿದೆ. ಮೊದಲು ಸರ್ಕಾರ ಈ ಹಿಂದೆ ಇದ್ದ ಹಾಗೆ ರೈಲ್ವೆ ಬಜೆಟ್‌ ಅನ್ನು ಮರಳಿ ಜಾರಿ ಮಾಡಬೇಕು ಎಂದರು. ಇದರೊಂದಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ (Railway Minister Ashwini Vaishnav) ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇನ್ನ ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನೇ​ತ್‌ (Supriya Sreeneth) ಮಾತ​ನಾ​ಡಿ, ಅಪಘಾತವನ್ನು ಸಿಬಿಐ ತನಿಖೆಗೆ ಹೊರಿಸುವ ಮೂಲಕ ಕೇಂದ್ರ ಸರ್ಕಾರವು ಜನರ ಕಣ್ಣೊರೆಸುವ ತಂತ್ರ ಮಾಡಿದೆ. ಅಪಘಾತ ನಡೆದು ಐದು ದಿನಗಳಾದರೂ ಯಾರ ಮೇಲೂ ಘಟ​ನೆಯ ಹೊಣೆ ಹೊರಿ​ಸಿ​​ಲ್ಲ’ ಎಂದ​ರು.

ಉದ್ಯಮಿ ಆತ್ಮಹತ್ಯೆ ಕೇಸ್‌ನಲ್ಲಿ ಅರವಿಂದ ಲಿಂಬಾವಳಿಗೆ ಬಿಗ್‌ ರಿಲೀಫ್‌: ಡೆತ್‌ನೋಟ್‌ ಆರೋಪಕ್ಕೆ ಸಾಕ್ಷ್ಯಗಳಿಲ್ಲ

ಬಿಹಾರ ಸೇತುವೆ ಕುಸಿತ: ಎಂಜಿ​ನಿ​ಯರ್‌ ಸಸ್ಪೆಂಡ್‌

ಪಟನಾ: ಬಿಹಾರದ 1700 ಕೋಟಿ ರು. ವೆಚ್ಚದ ಚತುಷ್ಪಥ ಸೇತುವೆ ಕುಸಿತ (four-lane bridge collapse case) ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಣ ಕಂಪನಿಗೆ ರಾಜ್ಯ ಸರ್ಕಾರ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದು, ನಿರ್ಮಾಣದ ಹೊಣೆ ಹೊತ್ತಿದ್ದ ಕಾರ್ಯನಿರ್ವಾಹಕ ಎಂಜಿನಿಯರ್‌ನನ್ನು ಅಮಾನತು ಮಾಡಿದೆ.

ಈ ಸೇತುವೆಯ ನಿರ್ಮಾಣ ಹೊಣೆಯನ್ನು ಹರ್ಯಾಣ ಮೂಲದ ಕಂಪನಿ (Haryana-based company) ವಹಿಸಿಕೊಂಡಿದ್ದು, 15 ದಿನದೊಳಗೆ ಉತ್ತರಿಸುವಂತೆ ಸೂಚಿಸಿ ರಸ್ತೆ ನಿರ್ಮಾಣ ಸಂಸ್ಥೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (Additional Chief Secretary) ಪ್ರತ್ಯಯ್‌ ಅಮೃತ್‌ ನೋಟಿಸ್‌ ನೀಡಿದ್ದಾರೆ. ಅಲ್ಲದೇ ಈ ದುರಂತಕ್ಕೆ ಸಂಬಂಧಿಸಿದಂತೆ ನಿಮ್ಮ ಕಂಪನಿಯನ್ನು ಸರ್ಕಾರ ಏಕೆ ಬ್ಲಾಕ್‌ಲಿಸ್ಟ್‌ಗೆ ಹಾಕಬಾರದು ಎಂದೂ ಸಹ ಪ್ರಶ್ನಿಸಲಾಗಿದೆ. ಹಾಗೆಯೇ ಉತ್ತಮ ಗುಣಮಟ್ಟದ ನಿರ್ಮಾಣ ಕಾರ್ಯದ ಮೇಲೆ ಗಮನ ನೀಡದ ಕಾರ್ಯ ನಿರ್ವಾಹಕ ಎಂಜಿನಿಯರ್‌ನನ್ನು ಅಮಾನತು ಮಾಡಲಾಗಿದೆ.

ಪರಪುರುಷನ ಜೊತೆಗಿದ್ದ ಕಾರಣಕ್ಕೆ ಪತ್ನಿ ಹತ್ಯೆಗೈದ ಪತಿ ಜೀವಾವಧಿ ಶಿಕ್ಷೆಯಿಂದ ಪಾರು..!

ಕಳಪೆ ಕಾಮಗಾರಿಯಿಂದಾಗಿ ಸುಮಾರು 1700 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಚತುಷ್ಪಥ ಸೇತುವೆಯ 2 ಭಾಗಗಳು ಭಾನುವಾರ ಕುಸಿದು ಬಿದ್ದಿತ್ತು.

ಜೀವನಾಂಶ ವಿಚಾರಣೆ ವೇಳೆ ಮದುವೆ ಸಿಂಧುತ್ವ ನಿಷ್ಕರ್ಷೆ ಸಲ್ಲ: ಹೈಕೋರ್ಟ್‌ ಮಹತ್ವದ ಆದೇಶ

click me!