ಭುವನೇಶ್ವರ: ಶ್ರೀಗಂಧಕ್ಕೆ ದೇಶ ವಿದೇಶಗಳಲ್ಲಿ ಭಾರಿ ಮೌಲ್ಯವಿದ್ದು, ಶ್ರೀಗಂಧ ಮರ ದೊಡ್ಡದಾಗಿ ಬೆಳೆಯುವ ಮೊದಲೇ ಅದನ್ನು ಕಡಿದು ಕಳ್ಳಸಾಗಣೆ ಮಾಡಲಾಗುತ್ತಿದೆ. ಈಗ ಆಘಾತಕಾರಿ ವಿಚಾರವೇನೆಂದರೆ ರಾಜಭವನದ ಆವರಣದೊಳಗೆ ಇದ್ದ ಶ್ರೀಗಂಧದ ಮರವನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಒಡಿಶಾದ ರಾಜಭವನದ ಆವರಣದಲ್ಲಿ ಈ ಘಟನೆ ನಡೆದಿದೆ. ಒಡಿಶಾದ ರಾಜ್ಯಪಾಲರು (Governor) ತಂಗುವ ರಾಜಭವನದ ಆವರಣದಲ್ಲಿ ಹೀಗಾಗಿದೆ. ಅತ್ಯಂತ ಹೆಚ್ಚು ಭದ್ರತೆ ಇರುವ ಈ ಪ್ರದೇಶದಲ್ಲಿಯೇ ಪರಿಸ್ಥಿತಿ ಹೀಗಾದರೆ ಜನ ಸಾಮಾನ್ಯರು ಶ್ರೀಗಂಧ ಬೆಳೆದರೆ ಕತೆ ಏನಾಗಬಹುದು ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೇ ಇದು ರಾಜ್ಯಪಾಲರು ಹಾಗೂ ರಾಜಭವನದ ಸಿಬ್ಬಂದಿಯ ಭದ್ರತೆಯ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡಿದೆ.
ಭುವನೇಶ್ವರದ (Bhubaneswar) ಅತ್ಯಂತ ಭದ್ರತೆಯ ರಾಜಭವನ (Raj Bhawan) ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಮಂಗಳವಾರ ಮರ ಕಡಿಯಲಾಗಿದ್ದು, ರಾಜಭವನದ ವತಿಯಿಂದ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು (CCTV footages) ಪರಿಶೀಲಿಸುತ್ತಿದ್ದು, ಇದುವರೆಗೆ ಕಳ್ಳರ ಸುಳಿವು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
2 ಲಕ್ಷದ ಶ್ರೀಗಂಧ ಮರಕ್ಕೆ ಹೈವೆ ಅಧಿಕಾರಿಗಳು ಕೊಡೋದು 1 ಸಾವಿರ: ಸಂಕಷ್ಟದಲ್ಲಿ ಅನ್ನದಾತ
ಕೆಲವರ ಬಗ್ಗೆ ಅನುಮಾನವಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜನ ಸಾಮಾನ್ಯರು ಕೂಡ ಶ್ರೀಗಂಧ ಬೆಳೆಯಬಹುದಾಗಿದೆ. ಆದರೆ ಇವುಗಳ ಕೊಯ್ಲು ಮತ್ತು ಸಾಗಣೆಯ ಸಮಯದಲ್ಲಿ ಅರಣ್ಯ ಇಲಾಖೆಯಿಂದ ಅನುಮತಿಯ ಅಗತ್ಯವಿದೆ, ಸಾಮಾನ್ಯವಾಗಿ ಶ್ರೀಗಂಧದ ಎಣ್ಣೆ, ಸುಗಂಧ ದ್ರವ್ಯ, ಶ್ರೀಗಂಧದ ಸೋಪುಗಳ ತಯಾರಿಕೆಗೆ ಬಳಸಲಾಗುತ್ತದೆ. ಪ್ರಸ್ತುತ ಭಾರತ ಶ್ರೀಗಂಧದ ರಫ್ತಿಗೆ ನಿಷೇಧ ಹೇರಿದೆ. ದೇಶದಲ್ಲಿ ಶ್ರೀಗಂಧದ (sandalwood)ತಳಿಗಳನ್ನು ರಕ್ಷಿಸುವ ಸಲುವಾಗಿ ಈ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
Chikkamagaluru ಶ್ರೀಗಂಧ ಮರಗಳಿಗೆ ವೈಜ್ಞಾನಿಕ ಪರಿಹಾರಕ್ಕೆ ವಾರದ ಗಡುವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ