ಸಿಎಂ ಆದರೇನು ರೈತನ ಮಗ... ಹೊಲದಲ್ಲಿ ದುಡಿಯುವ ಮಹಾ ಸಿಎಂ..! ವಿಡಿಯೋ ವೈರಲ್

Published : Nov 03, 2022, 09:47 PM IST
ಸಿಎಂ ಆದರೇನು ರೈತನ ಮಗ... ಹೊಲದಲ್ಲಿ ದುಡಿಯುವ ಮಹಾ ಸಿಎಂ..! ವಿಡಿಯೋ ವೈರಲ್

ಸಾರಾಂಶ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ತಮ್ಮ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಸತಾರಾ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ತಮ್ಮ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಊರು ಸತಾರಾ ಜಿಲ್ಲೆಗೆ ಎರಡು ದಿನಗಳ ಭೇಟಿಗೆ ತೆರಳಿದ ಮಹಾರಾಷ್ಟ್ರ ಸಿಎಂ ಅಲ್ಲಿ ಸ್ಥಳೀಯ ರೈತರೊಂದಿಗೆ ಸಂವಾದ ನಡೆಸಿದ್ದಾರೆ. ಜೊತೆಗೆ ಹೊಲದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ ಅರಿಶಿನ ಬೆಳೆ ಇರುವ ಹೊಲದಲ್ಲಿ ಸಿಎಂ ಕೃಷಿ ಯಂತ್ರವೊಂದನ್ನು ತಳ್ಳುತ್ತಾ ಅರಿಶಿಣ ಗೀಡಗಳ ನಡುವೆ ಸಾಗುವುದನ್ನು ಕಾಣಬಹುದು. 

ತಮ್ಮ ಸ್ವಗ್ರಾಮ ಮಹಾಬಲೇಶ್ವರಕ್ಕೆ ತೆರಳಿದ ಸಿಎಂ ಅಲ್ಲಿ ತಮ್ಮ ಹೊಲದಲ್ಲಿನ ಬೆಳೆಯನ್ನು ಪರಿಶೀಲನೆ ಮಾಡಿದರು. ಸಿಎಂ ಶ್ರೀಗಂಧ, ಸ್ಟ್ರಾಬೆರಿ (strawberry) ಹಾಗೂ ಅರಿಶಿಣ (turmeric) ಬೆಳೆಯನ್ನು ಬೆಳೆಯುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಮಾಹಾರಾಷ್ಟ್ರ ಸರ್ಕಾರದ ಸಿಎಂ ಏಕನಾಥ್ ಶಿಂಧೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಂದ ನಾಲ್ಕು ಕೋಟಿಗೂ ಅಧಿಕ ಜನರಿಗೆ ವೈಯಕ್ತಿಕ ದೀಪಾವಳಿ ವಿಡಿಯೋ ಸಂದೇಶವನ್ನು ಕಳುಹಿಸಿ ಸುದ್ದಿಯಾಗಿದ್ದರು. ದೆಹಲಿ ಮೂಲದ ಸಂಸ್ಥೆಯೊಂದು ಅಭಿವೃದ್ಧಿಪಡಿಸಿದ ಕೃತಕ ಇಂಟೆಲಿಜೆನ್ಸ್ (Artificial Intelligence) ಬಳಸಿ ಈ ಡಿಜಿಟಲ್ ಸಂದೇಶವನ್ನು ಕಳುಹಿಸಲಾಗಿದೆ. 

ಮಹಾರಾಷ್ಟ್ರದಲ್ಲಿ ಮತ್ತೆ ಉಂಟಾಗುತ್ತಾ ರಾಜಕೀಯ ಬಿಕ್ಕಟ್ಟು, ಹೊಸ ಬಾಂಬ್‌ ಸಿಡಿಸಿದ ಉದ್ಧವ್‌ ಠಾಕ್ರೆ!

ಈ ವರ್ಷ ಜೂನ್‌ನಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) (Maha Vikas Aghadi) ಮೈತ್ರಿ ವಿರುದ್ಧ ಬಂಡಾಯವೆದ್ದ ಏಕನಾಥ್ ಶಿಂಧೆ ಹಾಗೂ ಅವರ ಬಣದ ಶಾಸಕರು ನಂತರ ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ  ಸರ್ಕಾರ ರಚಿಸಿದ್ದರು. ಪರಿಣಾಮ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ನೇತೃತ್ವದ ಎಂವಿಎ ಸರ್ಕಾರವು ಪತನಗೊಂಡಿತು. ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣ ವಚನ ಸ್ವೀಕರಿಸಿದರೆ, ಬಿಜೆಪಿಯ ದೇವೇಂದ್ರ ಫಡ್ನವೀಸ್ (Devendra Fadnavis) ಉಪಮುಖ್ಯಮಂತ್ರಿಯಾದರು. 

ರಾಮಮಂದಿರ ಸ್ಫೋಟಕ್ಕೆ PFI ಸಂಚು! ಮಹಾರಾಷ್ಟ್ರ ಉಗ್ರನಿಗ್ರಹ ದಳದಿಂದ ಸ್ಫೋಟಕ ಮಾಹಿತಿ

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಹಳೆಯ ಸಮ್ಮಿಶ್ರ ಸರ್ಕಾರದಲ್ಲಿ ಏಕನಾಥ್ ಶಿಂಧೆ ಅವರು  ನಗರ ವ್ಯವಹಾರಗಳ ಸಚಿವರಾಗಿ (Minister of Urban Affairs) ಸೇವೆ ಸಲ್ಲಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..