ಉಚಿತ ಕಾಂಡೋಮ್ ಹಾಗೂ ಮಾತ್ರೆ, ಹೊಸದಾಗಿ ಮದುವೆಯಾದ ಜೋಡಿಗೆ ಸರ್ಕಾರದಿಂದ ಸ್ಪೆಷಲ್ ಗಿಫ್ಟ್!

By Suvarna NewsFirst Published Aug 13, 2022, 4:04 PM IST
Highlights

ಮದುವೆಯಾಗು ಜೋಡಿಗೆ ಗಿಫ್ಟ್ ನೀಡುವುದು ಸಾಮಾನ್ಯ. ಇದೀಗ ಸರ್ಕಾರ ವಿಶೇಷ ಗಿಫ್ಟ್ ನೀಡಲು ಮುಂದಾಗಿದೆ. ಮ್ಯಾರೇಜ್ ಸರ್ಟಿಫಿಕೇಟ್‌ನಿಂದ ಹಿಡಿದು ಕಾಂಡೋಮ್ ವರೆಗೆ ಸರ್ಕಾರ ಸ್ಪೆಷಲ್ ಕಿಟ್ ನೀಡುತ್ತಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಭುವನೇಶ್ವರ್(ಆ.13): ಮದುವೆಯಾಗುವ ಜೋಡಿಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಭಾಗ್ಯಗಳು ಸಿಗಲಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಒಂದು ಸಮುದಾಯಕ್ಕೆ ಶಾದಿ ಭಾಗ್ಯ ಯೋಜನೆ ಜಾರಿಗೆ ತಂದಿದ್ದರೆ, ಇನ್ನೂ ಕೆಲ ರಾಜ್ಯಗಳಲ್ಲಿ ಸರ್ಕಾರದಿಂದ ಆರ್ಥಿಕ ಅನುದಾನ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿದೆ. ಇದೀಗ ಎಲ್ಲರ ಗಮನಸೆಳೆದಿರುವ ಯೋಜನೆಯೊಂದು ಜಾರಿಯಾಗಿದೆ. ಹೊಸದಾಗಿ ಮದುವೆಯಾದ ಜೋಡಿಗೆ ಸರ್ಕಾರ ಸ್ಪೆಷಲ್ ಕಿಟ್ ನೀಡುವುದಾಗಿ ಘೋಷಿಸಿದೆ. ಈ ಕಿಟ್‌ನಲ್ಲಿ ಕಾಂಡೋಮ್, ಮಾತ್ರೆ ಸೇರಿದಂತೆ ಹಲವು ವಸ್ತುಗಳು ಇರಲಿದೆ. ಸ್ಪೆಷಲ್ ಗಿಫ್ಟ್ ಪಡೆಯಲು ಈಗಲೇ ಮದುವೆಯಾಗಲು ಹೊರಟರೆ ಒಂದು ನಿಮಿಷ ತಾಳಿ. ಈ ಯೋಜನೆ ಜಾರಿಗೆ ಬಂದಿರುವುದು ಒಡಿಶಾದಲ್ಲಿ.  ಒಡಿಶಾ ಸರ್ಕಾರ ಹೊಸದಾಗಿ ಮದುವೆಯಾಗುವ ಜೋಡಿಗೆ ಸ್ಪೆಷಲ್ ಗಿಫ್ಟ್ ನೀಡುವುದಾಗಿ ಘೋಷಿಸಿದೆ. ಕೇಂದ್ರ ಸರ್ಕಾರದ ಮಿಶನ್ ಪರಿವಾರ್ ವಿಕಾಸ್ ಯೋಜನೆಯಡಿ ಈ ಗಿಫ್ಟ್ ನೀಡುತ್ತಿದೆ.  

ಒಡಿಶಾ ಸರ್ಕಾರ ನೀಡುತ್ತಿರುವ ಸ್ಪೆಷಲ್ ಗಿಫ್ಟ್ ಕಿಟ್‌ನಲ್ಲಿ ಉಚಿತ ಕಾಂಡೋಮ್, ಮಾತ್ರೆ, ಕನ್ನಡಿ, ಎರಡು ಟೆವಲ್, ಕರ್ಚೀಫ್, ಬಾಚಣಿಗೆ ಜೊತೆಗೆ ಮ್ಯಾರೇಜ್ ಸರ್ಟಿಫಿಕೇಟ್ ಸೇರಿದಂತೆ ಕೆಲ ಸರ್ಪ್ರೈಸ್ ಕೂಡ ಇರಲಿದೆ. ಆಶಾ ಕಾರ್ಯಕರ್ತರು ಈ ಕಿಟ್‌ಗಳನ್ನು ಹೊಸದಾಗಿ ಮದುವೆಯಾಗುವ ಜೋಡಿಗೆ ವಿತರಿಸಲಿದ್ದಾರೆ. ಈ ಕಿಟ್‌ನಲ್ಲಿ ಸುರಕ್ಷಿತ ಲೈಂಗಿಕತೆ, ಕುಟುಂಬ ಯೋಜನೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾಹಿತಿಗಳ ಕೈಪಿಡಿಯು ಇರಲಿದೆ. ಇಷ್ಟೇ ಅಲ್ಲ ಆಶಾ ಕಾರ್ಯಕರ್ತರು ಈ ಕುರಿತು ನವ ದಂಪತಿಗಳಿಗೆ ಮಾಹಿತಿ ನೀಡಲಿದ್ದಾರೆ. 

Flashback ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಪಟುಗಳು ಬಳಸಿದ ಕಾಂಡೋಮ್‌ನಿಂದ ಚರಂಡಿ ಬ್ಲಾಕ್!

ಒಡಿಶಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಈ ಕಿಟ್ ವಿತರಿಸುತ್ತಿದೆ. ಒಡಿಶಾದಲ್ಲಿ ಸುರಕ್ಷಿತ ಲೈಂಗಿಕತೆ, ಕುಟುಂಬ ಯೋಜನೆ ಕುರಿತು ಜಾಗೃತಿ ಮೂಡಿಸಬೇಕಿದೆ. ಇದಕ್ಕಾಗಿ ಕುಟುಂಬ ಕಲ್ಯಾಣ ಇಲಾಖೆ ಈ ವಿಶೇಷ ಕಿಟ್ ವಿತರಿಸುತ್ತಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಬಿಜಯ್ ಪನಿಗ್ರಾಹಿ ಹೇಳಿದ್ದಾರೆ.

 ಉತ್ತರಪ್ರದೇಶದಲ್ಲಿ 2 ಮಕ್ಕಳ ನೀತಿಗೆ ಸಿದ್ಧತೆ
ಜನಸಂಖ್ಯೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಉತ್ತರಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಭಾನುವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬಿಡುಗಡೆ ಮಾಡಲಿರುವ ನೀತಿಯಲ್ಲಿ ಏನೇನಿರಲಿದೆ ಎಂಬ ಕುತೂಹಲ ಗರಿಗೆದರಿದೆ. ಈ ನಡುವೆ, ಜನಸಂಖ್ಯೆ ನಿಯಂತ್ರಣಕ್ಕೆ ಕರಡು ಮಸೂದೆಯೊಂದು ಸಿದ್ಧವಾಗಿದ್ದು, ಅದರಲ್ಲಿ 2 ಮಕ್ಕಳ ನೀತಿಯ ಪ್ರಸ್ತಾಪವಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದವರನ್ನು ಸ್ಥಳೀಯ ಸಂಸ್ಥೆ ಚುನಾವಣೆಯಿಂದ, ಸರ್ಕಾರಿ ಉದ್ಯೋಗ ಅಥವಾ ಬಡ್ತಿಗೆ ಅರ್ಜಿ ಸಲ್ಲಿಸಿರುವುದರಿಂದ ಹಾಗೂ ಸರ್ಕಾರದ ಯಾವುದೇ ರೀತಿಯ ಸಬ್ಸಿಡಿ ಪಡೆಯುವುದರಿಂದ ನಿರ್ಬಂಧಿಸುವ ಅಂಶಗಳು ಕರಡು ವಿಧೇಯಕದಲ್ಲಿವೆ.ಉತ್ತರಪ್ರದೇಶ ರಾಜ್ಯ ಕಾನೂನು ಆಯೋಗ ‘ಉತ್ತರಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಹಾಗೂ ಹಿತರಕ್ಷಣೆ) ಮಸೂದೆ- 2021’ ಅನ್ನು ಸಿದ್ಧಪಡಿಸಿದೆ. ಇದನ್ನು ಮತ್ತಷ್ಟುಬಲಪಡಿಸಲು ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದೆ. ಸಲಹೆ ಸಲ್ಲಿಕೆಗೆ ಜು.19ಕ್ಕೆ ಕೊನೆಯ ದಿನವಾಗಿದೆ.

ಲೈಂಗಿಕ ಸುರಕ್ಷತೆಗಲ್ಲ, ನಶೆಗೆ ! ಬೇಕಾಬಿಟ್ಟಿ ಕಾಂಡೋಮ್ ಖರೀದಿಸ್ತಿರೋ ಯುವಕರು ಮಾಡ್ತಿರೋದೇನು ?

click me!