ಕೋವಿಡ್ ಭೀತಿ ನಡುವೆ ಮಂಕಿಪಾಕ್ಸ್ ಪ್ರಕರಣ ಏರಿಕೆ, ದೆಹಲಿಯಲ್ಲಿ ಮತ್ತೊಂದು ಕೇಸ್ ಪತ್ತೆ!

By Suvarna NewsFirst Published Aug 13, 2022, 3:38 PM IST
Highlights

ದೇಶದಲ್ಲಿ ಕೋವಿಡ್ ಪ್ರಕರಣ ಏರಿಕೆ ಬೆನ್ನಲ್ಲೇ ಮಂಕಿಪಾಕ್ಸ್ ಪ್ರಕರಣ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ದೆಹಲಿಯಲ್ಲಿ 5ನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ದೇಶದ ಮಂಕಿಪಾಕ್ಸ್ ಪ್ರಕರಣ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಈ ಕುರಿತ ವಿವರ ಇಲ್ಲಿವೆ.

ನವದೆಹಲಿ(ಆ.13): ಭಾರತದಲ್ಲಿ ನಿಧಾನವಾಗಿ ಕೋವಿಡ್ ಹಾಗೂ ಮಂಕಿಪಾಕ್ಸ್ ಪ್ರಕರಣ ಏರಿಕೆ ಕಾಣುತ್ತಿದೆ. ಎರಡು ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ಕೋವಿಡ್ ಎರಡು ಅಲೆಗಳ ಹೊಡೆತಕ್ಕೆ ಸಿಲುಕಿದ ಭಾರತ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಇದೀಗ ಕೋವಿಡ್ ಜೊತೆಗೆ ಮಂಕಿಪಾಕ್ಸ್ ಪ್ರಕರಣ ಕೂಡ ಆತಂಕ ಸೃಷ್ಟಿಸುತ್ತಿದೆ. ದೆಹಲಿಯಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. 22 ಹರೆಯದ ಯುವತಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ಲೋಕ ನಾಯಕ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಾದ ಯುವತಿಯ ಮಾದರಿಯನ್ನು ಪರೀಕ್ಷಿಸಲಾಗಿತ್ತು. ಇದೀಗ ಯುವತಿಗೆ ಮಂಕಿಪಾಕ್ಸ್ ವೈರಸ್ ತಗುಲಿರುವುದು ಖಚಿತಗೊಂಡಿದೆ. ಆಗಸ್ಟ್ 12 ರಂದು ವರದಿ ಬಂದಿದ್ದು, ಮಂಕಿಪಾಕ್ಸ್ ಪಾಸಿಟೀವ್ ಬಂದಿದೆ. ಸೋಂಕಿತೆ ಮೇಲೆ ವೈದ್ಯರ ತಂಡ ನಿಘಾ ವಹಿಸಿದೆ ಎಂದು ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆ ಹೇಳಿದೆ. 

ಮಂಕಿಪಾಕ್ಸ್ ಸೋಂಕು ಪತ್ತೆಯಾದ ಯುವತಿ ಕಳೆದ ಒಂದು ತಿಂಗಳಿನಿಂದ ಪ್ರಯಾಣ ಮಾಡಿಲ್ಲ. ವಿದೇಶ ಪ್ರಯಾಣದ ಇತಿಹಾಸ ಹೊಂದಿಲ್ಲ. ಹೀಗಾಗಿ ಈಕೆಗೆ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದ್ದು ಹೇಗೆ ಅನ್ನೋ ಕುರಿತು ಅಧ್ಯಯನ ನಡೆಯುತ್ತಿದೆ. 22ರ ಯುವತಿ ಪ್ರಕರಣದಿಂದ ದೆಹಲಿಯಲ್ಲಿ ಮಂಕಿಪಾಕ್ಸ್ ಪ್ರಕರಣ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಇಷ್ಟೇ ಅಲ್ಲ ಮಂಕಿಪಾಕ್ಸ್ ಪ್ರಕರಣಕ್ಕೆ ಒಂದು ಬಲಿಯಾಗಿದೆ. ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿತ್ತು.

Monkeypox Symptoms: ಜನನಾಂಗದಲ್ಲೂ ಕಾಣಿಸಿಕೊಳ್ಳುತ್ತೆ ಕೆಂಪು ಗುಳ್ಳೆ !

ಫ್ರಾನ್ಸ್‌ನಲ್ಲಿ ನಾಯಿಯಲ್ಲಿ ಮಂಕಿಪಾಕ್ಸ್‌ ಪತ್ತೆ: ಮಾಲೀಕನಿಂದಲೇ ಸೋಂಕು
ಮಂಕಿಪಾಕ್ಸ್‌ ಸೋಂಕು ಇದೇ ಮೊದಲ ಬಾರಿಗೆ ಸಾಕು ನಾಯಿಯೊಂದರಲ್ಲಿ ಕಾಣಿಸಿಕೊಂಡಿರುವುದನ್ನು ಫ್ರಾನ್ಸ್‌ನ ಸಂಶೊಧಕರು ಖಚಿತಪಡಿಸಿದ್ದಾರೆ. ಈ ಸೋಂಕು ಮಾನವರ ಮೂಲಕ ನಾಯಿಗೆ ಹರಡಿರಬಹದು ಎಂದು ಶಂಕಿಸಲಾಗಿದೆ. ನಾಯಿಯ ಮಾಲಿಕ ಸಲಿಂಗಿಯಾಗಿದ್ದು, ಆತ ಮತ್ತು ಆತನ ಸಂಗಾತಿಯಲ್ಲಿ ಮಂಕಿಪಾಕ್ಸ್‌ ಸೋಂಕುಗಳು ಕಾಣಿಸಿಕೊಂಡಿದೆ. ಇದಾದ 12 ದಿನಗಳ ನಂತರ ಆತನ ಸಾಕುನಾಯಿಯಲ್ಲೂ ಮಂಕಿಪಾಕ್ಸ್‌ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಸೋಂಕಿತರಿಬ್ಬರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದು, ಅವರೊಂದಿಗೆ ಇರುವ ನಾಯಿಯಲ್ಲೂ ಕೆಂಪುಬಣ್ಣದ ಗುಳ್ಳೆಗಳು ಕಾಣಿಸಿಕೊಂಡಿವೆ. ಸೋಂಕು ಎಂಡೆಮಿಕ್‌ ಹಂತ ತಲುಪಿರುವ ಪ್ರದೇಶಗಳಲ್ಲಿ ಮಾತ್ರ ಪ್ರಾಣಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಅವರು ಲ್ಯಾನ್ಸೆಟ್‌ ಎಂಬ ವೈದ್ಯಕೀಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದ್ದಾರೆ.

ಭಾರತದಲ್ಲಿ ಪತ್ತೆಯಾಗಿದ್ದು ಮಂಕಿಪಾಕ್ಸ್‌ ರೂಪಾಂತರಿ
ಭಾರತದಲ್ಲಿ ವರದಿಯಾದ ಮೊದಲ 2 ಮಂಕಿಪಾಕ್ಸ್‌ ಪ್ರಕರಣಗಳಲ್ಲಿ ಸೋಂಕಿನ A.2 ರೂಪಾಂತರಿ ಪತ್ತೆಯಾಗಿದೆ. ಇದು ಯುರೋಪಿನಲ್ಲಿ ಮಂಕಿಪಾಕ್ಸ್‌ ಸ್ಫೋಟಕ್ಕೆ ಕಾರಣವಾದ ವೈರಸ್‌ಗಿಂತ ವಿಭಿನ್ನವಾದದ್ದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಹೇಳಿದೆ. ಜೊತೆಗೆ ಪಶ್ಚಿಮ ಆಫ್ರಿಕನ್‌ ಮೂಲದ ವೈರಸ್‌ನ ಈ ತಳಿಯು ಕಡಿಮೆ ತೀವ್ರತೆಯುಳ್ಳದ್ದು ಎಂದು ಅಭಿಪ್ರಾಯ ಪಟ್ಟಿದೆ.

ಭಾರತದಲ್ಲಿ ಮಂಕಿಪಾಕ್ಸ್ A.2: ಇದು B.1 ವೈರಸ್‌ಗಿಂತ ಡೇಂಜರಸ್!
 

click me!