ಅಪಘಾತದಿಂದ ಉಳಿದಿದ್ದ ಒಂದು ಶ್ವಾಸಕೋಶಕ್ಕೆ ಸೋಂಕು; ಯೋಗದಿಂದ ಗುಣಮುಖರಾದ ನರ್ಸ್!

By Suvarna NewsFirst Published May 13, 2021, 4:16 PM IST
Highlights
  • ಅಪಘಾತದಿಂದ ಉಳಿದ ಒಂದು ಶ್ವಾಸಕೋಶಕ್ಕೆ ಕೊರೋನಾ ಸೋಂಕು ದಾಳಿ
  • ಧೈರ್ಯಗೆಡದ ನರ್ಸ್ ಸತತ 14 ದಿನ ಕೊರೋನಾ ವಿರುದ್ಧ ಹೋರಾಟ
  • ಯೋಗದಿಂದ ಸಂಪೂರ್ಣ ಗುಣಮುಖರಾದ ನರ್ಸ್
     

ಮಧ್ಯ ಪ್ರದೇಶ(ಮೇ.13): ಮಹಾಮಾರಿ ಕೊರೋನಾ ಇನ್ನಿಲ್ಲದಂತೆ ಕಾಡುತ್ತಿದೆ. ಆದರೆ ಧೈರ್ಯದಿಂದ ಎದುರಿಸಿ ಕೊರೋನಾ ಗೆದ್ದ ಹಲವು ಊದಾಹರಣೆಗಳಿವೆ. ಇದರಲ್ಲಿ ಮಧ್ಯಪ್ರದೇಶದ ನರ್ಸ್ ಪ್ರಫುಲ್ಲಿತ್ ಪೀಟರ್ ಕತೆ ತಿಳಿಯಲೇಬೇಕು. ಬಾಲ್ಯದಲ್ಲಿ ನಡೆದ ಅಪಘಾತದಲ್ಲಿ ಒಂದು ಶ್ವಾಸಕೋಶ ಕಳೆದುಕೊಂಡ ಪ್ರಫುಲ್ಲಿತ್, ಬಾಕಿ ಉಳಿದ ಒಂದು ಶ್ವಾಸಕೋಶಕ್ಕೆ ಕೊರೋನಾ ತಗುಲಿ ಇನ್ನಿಲ್ಲದ ಕಷ್ಟ ಅನುಭವಿಸಿದರು. ಆದರೆ ಯೋಗ, ಉಸಿರಾಟದ ವ್ಯಾಯಾಮದಿಂದ ನರ್ಸ್ 14 ದಿನದಲ್ಲಿ ಕೊರೋನಾ ಗೆದ್ದಿದ್ದಾರೆ.

ಜಾತಿ, ಧರ್ಮ ಇಲ್ಲಿಲ್ಲ: ನೋವಿಗೆ ಮಿಡಿಯೋ ದಾದಿಯರೆಂಬ ದೇವತೆಗಳಿವರು..!

ಮಧ್ಯಪ್ರದೇಶದ ಸಿವಿಲ್  ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ 39 ವರ್ಷದ ಪ್ರಫುಲ್ಲಿತ್ ಪೀಟರ್ ಬಾಲ್ಯದಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದು ಶ್ವಾಸಕೋಶ ಕಳೆದುಕೊಂಡಿದ್ದರು. ಮನುಷ್ಯದ ದೇಹದಲ್ಲಿರುವ ಎರಡು ಶ್ವಾಸಕೋಶ ಕೋಣೆಘಲ್ಲಿ ಒಂದು ಶ್ವಾಸಕೋಶ ಕೋಣೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಈ ವಿಚಾರ ಸ್ವತ ಪ್ರಫುಲ್ಲಿತ್ ಪೀಟರ್ ಅರಿವಿಗೆ ಬಂದಿದ್ದು, 2014ರಲ್ಲಿ ನಡೆಸಿದ ಎದೆ ಎಕ್ಸ್‌ರೇಯಲ್ಲಿ.

ವೈದ್ಯರಿಗೆ ಮಾತ್ರವಲ್ಲ ನರ್ಸ್‌ಗಳಿಗೂ ಸಲಾಂ ಹೇಳಬೇಕು: ಸುದೀಪ್.

ಒಂದು ಶ್ವಾಸಕೋಶ ಕೋಣೆ ಮಾತ್ರ ಬಾಕಿ ಉಳಿದಿತ್ತು. ಯಾವುದೇ ಸಮಸ್ಯೆ ಇಲ್ಲದೇ ಕೊರೋನಾ ವಾರ್ಡ್‌ನಲ್ಲಿ ಸೇವೆ ಸಲ್ಲಿಸಿತ್ತಿದ್ದ ನರ್ಸ್‌ಗೆ ಕೊರೋನಾ ಅಂಟಿಕೊಂಡಿತ್ತು. ಶ್ವಾಸಕೋಶಕ್ಕೆ ಕೊರೋನಾ ತಗುಲಿದರೆ ಪ್ರಾಣಕ್ಕೆ ಸಂಚಕಾರ. ಹೀಗಿರುವ ಒಂದೇ ಶ್ವಾಸಕೋಶ ಇರುವ ಈ ನರ್ಸ್‌, ಕೊರೋನಾ ಪಾಸಿಟೀವ್ ವರದಿ ಬಂದ ಕೂಡಲೆ ಔಷಧಿಗಳನ್ನು ಪಡೆದುಕೊಂಡು, ಹೋಮ್ ಐಸೋಲೇಶನ್‌ಗೆ ಜಾರಿದ್ದಾರೆ. 

ದಪ್ಪ ಚರ್ಮದ ರಾಜಕಾರಣಿಗಳಿಗೆ ಯಾವ ಸೂಜಿ? ಆಸ್ಪತ್ರೆಯಲ್ಲಿ ಮೋದಿ ಹಾಸ್ಯಚಟಾಕಿ

ಧೈರ್ಯ ಕಳೆದುಕೊಳ್ಳದ ನರ್ಸ್, ಔಷಧಿ ಜೊತೆ ಪ್ರತಿ ದಿನ ಯೋಗ, ಪ್ರಾಣಾಯಾಮ, ಉಸಿರಾಟದ ವ್ಯಾಯಾಮಗಳನ್ನು ಮಾಡಿದ್ದಾರೆ. ಈ ಮೂಲಕ 14 ದಿನಗಳಲ್ಲಿ ಕೊರೋನಾ ಗೆದ್ದು ಬಂದಿದ್ದಾರೆ. ಕೊರೋನಾ ಗೆದ್ದ ನರ್ಸ್, ತಾನು ಯಾವತ್ತೂ ಧೈರ್ಯ ಕಳೆದುಕೊಳ್ಳಲಿಲ್ಲ. ಕೊರೋನಾ ಗೆದ್ದೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ಈಗಾಗಲೇ ಲಸಿಕೆ ಕೂಡ ಪಡೆದಿದ್ದೆ, ಹೀಗಾಗಿ ಶ್ವಾಸಕೋಶಕ್ಕೆ ಕೊರೋನಾ ಅಂಟಿಕೊಂಡಿದ್ದರೂ, ಸಮಸ್ಯೆ ಆಗಲಿಲ್ಲ.  ಜೊತೆಗೆ ಯೋಗ ನನ್ನ ಕೈಹಿಡಿಯಿತು ಎಂದು ಪ್ರಫುಲ್ಲಿತ್ ಪೀಟರ್ ಹೇಳಿದ್ದಾರೆ.

click me!